ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ನೇಮಕಾತಿ: ಅಪೂರ್ಣ ಅರ್ಜಿ ಸರಿಪಡಿಸಲು ಜ.5ರವರೆಗೆ ಅವಕಾಶ

KannadaprabhaNewsNetwork |  
Published : Dec 27, 2024, 12:46 AM IST
ಅಪ್ಲೈ | Kannada Prabha

ಸಾರಾಂಶ

ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲನೇ ಹಂತದಲ್ಲಿ ಅರ್ಜಿ ನಮೂನೆಯಲ್ಲಿ ಮಾಹಿತಿ ತುಂಬಬೇಕು. 2ನೇ ಹಂತದಲ್ಲಿ ಭಾವಚಿತ್ರ ಮತ್ತು ಸಹಿ ಅಪ್ ಲೋಡ್ ಮಾಡಬೇಕು. 3ನೇ ಹಂತದಲ್ಲಿ ದಾಖಲಾತಿ ಅಪ್ ಲೋಡ್ ಮಾಡಬೇಕು. 4ನೇ ಹಂತ ಆಧಾರ್ ಸಂಖ್ಯೆ ನಮೂದಿಸಿ. ಇ-ಹಸ್ತಾಕ್ಷರದೊಂದಿಗೆ ಅರ್ಜಿ ಪೂರ್ಣಗೊಳಿಸಬೇಕು. ಜಿಲ್ಲೆಯ ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗೆ 400 ಅಪೂರ್ಣ ಅರ್ಜಿಗಳು ಹಾಗೂ ಸಹಾಯಕಿಯರ ಹುದ್ದೆಗೆ 221 ಅಪೂರ್ಣ ಅರ್ಜಿಗಳು ಸ್ವೀಕೃತವಾಗಿವೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಬೆಳ್ತಂಗಡಿ, ಬಂಟ್ವಾಳ, ಮಂಗಳೂರು ಗ್ರಾಮಾಂತರ, ಮಂಗಳೂರು ನಗರ, ಪುತ್ತೂರು, ಸುಳ್ಯ ಹಾಗೂ ವಿಟ್ಲ ವ್ಯಾಪ್ತಿಯಲ್ಲಿನ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಒಟ್ಟು 73 ಅಂಗನವಾಡಿ ಕಾರ್ಯಕರ್ತೆ ಹಾಗೂ 261 ಅಂಗನವಾಡಿ ಸಹಾಯಕಿಯರ ಗೌರವ ಸೇವೆಗಳ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸುವಾಗ ಕೆಲವರಿಗೆ 1ನೇ ಹಂತದಲ್ಲಿಯೇ ಅಪ್ಲಿಕೇಷನ್ ಸಕ್ಸಸ್ ಫುಲ್ ಅಪ್‍ಲೋಡ್ ಎಂಬ ಮೆಸೇಜ್ ಅವರ ಮೊಬೈಲ್‍ಗೆ ಸ್ವೀಕೃತವಾಗಿರುವುದರಿಂದ ಅರ್ಜಿ ಪೂರ್ಣಗೊಂಡಿರುವುದಿಲ್ಲ. ಇಂತಹ ಅಪೂರ್ಣ ಅರ್ಜಿಗಳನ್ನು ಸರಿಪಡಿಸಲು ಜ.5ರವರೆಗ ಅವಕಾಶ ನೀಡಲಾಗಿದೆ.ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲನೇ ಹಂತದಲ್ಲಿ ಅರ್ಜಿ ನಮೂನೆಯಲ್ಲಿ ಮಾಹಿತಿ ತುಂಬಬೇಕು. 2ನೇ ಹಂತದಲ್ಲಿ ಭಾವಚಿತ್ರ ಮತ್ತು ಸಹಿ ಅಪ್ ಲೋಡ್ ಮಾಡಬೇಕು. 3ನೇ ಹಂತದಲ್ಲಿ ದಾಖಲಾತಿ ಅಪ್ ಲೋಡ್ ಮಾಡಬೇಕು. 4ನೇ ಹಂತ ಆಧಾರ್ ಸಂಖ್ಯೆ ನಮೂದಿಸಿ. ಇ-ಹಸ್ತಾಕ್ಷರದೊಂದಿಗೆ ಅರ್ಜಿ ಪೂರ್ಣಗೊಳಿಸಬೇಕು. ಜಿಲ್ಲೆಯ ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗೆ 400 ಅಪೂರ್ಣ ಅರ್ಜಿಗಳು ಹಾಗೂ ಸಹಾಯಕಿಯರ ಹುದ್ದೆಗೆ 221 ಅಪೂರ್ಣ ಅರ್ಜಿಗಳು ಸ್ವೀಕೃತವಾಗಿವೆ.ಹೆಚ್ಚಿನ ಮಾಹಿತಿಗೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಬೆಳ್ತಂಗಡಿ: 08256- 295134, ಬಂಟ್ವಾಳ: 7760729919, ಮಂಗಳೂರು ಗ್ರಾಮಾಂತರ- 9620636888, ಮಂಗಳೂರು ನಗರ -0824-2432809/ 2959809, ಪುತ್ತೂರು- 08251- 298788, ಸುಳ್ಯ-08257- 230239, ವಿಟ್ಲ- 08255- 238080 ಕಚೇರಿ ಅವಧಿಯಲ್ಲಿ ಸಂಪರ್ಕಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಗೆಹರಿಸಿಕೊಳ್ಳಲು ನಮ್ಮಲ್ಲಿ ಸಮಸ್ಯೆಗಳೇ ಇಲ್ಲ : ಡಿಕೆಶಿ!
ರಾಜಣ್ಣ ನೇಮಿಸಿದ್ದು ನಾನೇ ಎಂದ ಡಿಕೆಗೆ ಸಿದ್ದು ಟಾಂಗ್‌