10000 ಎಂಎಎಚ್‌ ಬ್ಯಾಟರಿಯ ರೆಡ್‌ಮಿ 17 ಬಿಡುಗಡೆ

KannadaprabhaNewsNetwork |  
Published : Sep 21, 2026, 01:45 AM IST
ದೆಹಲಿಯ ಏರೋಸಿಟಿಯ ಪುಲ್ ಮ್ಯಾನ್ ಹೋಟೆಲ್ ಸಭಾಂಗಣದಲ್ಲಿ ನಡೆದ‌ ಕಾರ್ಯಕ್ರಮದಲ್ಲಿ  ಎರಡು ಫೋನ್ಗಳನ್ನು ಬಿಡುಗಡೆಗೊಳಿಸಲಾಯಿತು. | Kannada Prabha

ಸಾರಾಂಶ

ಬಳಕೆದಾರರೊಂದಿಗೆ ಉತ್ತಮ‌ ಸ್ನೇಹ, ಹೊಸ ಹೊಸ ದೃಷ್ಟಿಕೋನ ಎಂಬ ಪರಿಕಲ್ಪನೆಯನ್ನು ಅಳವಡಿಸಿಕೊಂಡ ಶಒಮಿ ಕಂಪನಿಯು ಇತ್ತೀಚೆಗೆ ಭಾರತದಲ್ಲಿ ರೆಡ್‌ಮಿ ನೋಟ್‌ 17 ಪ್ರೋ ಮತ್ತು ರೆಡ್‌ಮಿ ನೋಟ್‌ 17 ಪ್ರೋ ಮ್ಯಾಕ್ಸ್ ಎಂಬ ಎರಡು ಹೊಸ ಮೊಬೈಲ್‌ ಫೋನ್ ಹಾಗೂ 3 ಹೊಸ ಪವರ್ ಬ್ಯಾಂಕ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ಸುಧೀರ್‌

ಕನ್ನಡಪ್ರಭ ವಾರ್ತೆ ನವದೆಹಲಿ

ಬಳಕೆದಾರರೊಂದಿಗೆ ಉತ್ತಮ‌ ಸ್ನೇಹ, ಹೊಸ ಹೊಸ ದೃಷ್ಟಿಕೋನ ಎಂಬ ಪರಿಕಲ್ಪನೆಯನ್ನು ಅಳವಡಿಸಿಕೊಂಡ ಶಒಮಿ ಕಂಪನಿಯು ಇತ್ತೀಚೆಗೆ ಭಾರತದಲ್ಲಿ ರೆಡ್‌ಮಿ ನೋಟ್‌ 17 ಪ್ರೋ ಮತ್ತು ರೆಡ್‌ಮಿ ನೋಟ್‌ 17 ಪ್ರೋ ಮ್ಯಾಕ್ಸ್ ಎಂಬ ಎರಡು ಹೊಸ ಮೊಬೈಲ್‌ ಫೋನ್ ಹಾಗೂ 3 ಹೊಸ ಪವರ್ ಬ್ಯಾಂಕ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ದೆಹಲಿಯ ಏರೋಸಿಟಿಯ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ನಡೆದ‌ ಕಾರ್ಯಕ್ರಮದಲ್ಲಿ ಎರಡು ಫೋನ್‌ಗಳನ್ನು ಬಿಡುಗಡೆಗೊಳಿಸಲಾಯಿತು. ಶಒಮಿ ಕಂಪನಿಯು ಮಧ್ಯಮ ವರ್ಗದ ಸ್ಮಾರ್ಟ್ ಫೋನ್ ವಿಭಾಗದಲ್ಲಿ ಹೆಚ್ಚು ಬಾಳಿಕೆಯ ಬ್ಯಾಟರಿ ಮತ್ತು ಉತ್ತಮ ಗುಣಮಟ್ಟದ ಕ್ಯಾಮರಾ ಹೊಂದಿರುವ ಈ ಎರಡು ಫೋನ್‌ಗಳನ್ನು ಪರಿಚಯಿಸಿದೆ. ಇದರ ಧ್ಯೇಯವಾಕ್ಯವೇ ಹೇಳುವಂತೆ (mAhster of strength) ಕಂಪನಿಯು ಹೆಚ್ಚು ಬ್ಯಾಟರಿಯ ಮೇಲೆ ಒತ್ತುಕೊಟ್ಟಿದೆ.

ಮಾಧ್ಯಮದವರೊಂದಿಗೆ ಸಂವಾದ ನಡೆಸಿದ ಶಒಮಿ ಇಂಡಿಯಾದ ಚೀಫ್ ಬಿಸಿನೆಸ್ ಆಫೀಸರ್ ಸಂದೀಪ್ ಸಿಂಗ್ ಅರೋರಾ, ಗ್ರಾಹಕರ ನಿರೀಕ್ಷೆಗಿಂತಲೂ ಹೆಚ್ಚಿನದ್ದನ್ನು ನೀಡುವ ಈ ಎರಡು ಫೋನ್‌ಗಳನ್ನು ಬಿಡುಗಡೆಗೊಳಿಸಿದ್ದೇವೆ ಎಂದರು. ಪ್ರೋ ಮ್ಯಾಕ್ಸ್ 10000 ಎಂಎಎಚ್‌ ಸಿಲಿಕಾನ್ ಬ್ಯಾಟರಿ ಹೊಂದಿದ್ದು, 17 ಪ್ರೋ 9000 ಎಂಎಎಚ್‌ ಸಾಮರ್ಥ್ಯವನ್ನು ಹೊಂದಿದೆ. ಒಮ್ಮೆ ಚಾರ್ಜ್ ಮಾಡಿದರೆ 4 ದಿನಗಳವರೆಗೂ ಬರುವಂಥ ಸಾಮರ್ಥ್ಯವನ್ನು ಇವು ಹೊಂದಿದೆ. ವೈಡ್ ರಿವರ್ಸ್ ಚಾರ್ಜಿಂಗ್ ಸೌಲಭ್ಯವೂ ಇದರಲ್ಲಿದೆ. ಅಂದರೆ ಬೇರೆ ಡಿವೈಸ್‌ಗಳಿಗೂ ಕೂಡ ಚಾರ್ಜ್ ಅನ್ನು ಹಂಚಿಕೊಳ್ಳಬಹುದಾಗಿದೆ. ಪ್ರೊ ಮ್ಯಾಕ್ಸ್ 27 ವ್ಯಾಟ್‌ ರಿವರ್ಸ್ ಚಾರ್ಜಿಂಗ್ ಮತ್ತು ಪ್ರೊ 22.5 ವ್ಯಾಟ್‌ ರಿವರ್ಸ್ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡುವ ಸಾಮರ್ಥ್ಯ ಹೊಂದಿದೆ ಎಂದರು.

ಸ್ಟೋರೇಜ್, ಗೇಮಿಂಗ್ ಮತ್ತು ಮಲ್ಟಿ ಟಾಸ್ಕಿಂಗ್: ಪ್ರೋ ಮ್ಯಾಕ್ಸ್‌ನಲ್ಲಿ 6 ಜೆನರೇಷನ್ 5 ಪ್ರೊಸೆಸರ್ ಹೊಂದಿದ್ದು, 12 ಜಿಬಿ ರ್‍ಯಾಮ್‌ ಮತ್ತು 256 ಜಿಬಿ ಸ್ಟೋರೇಜ್ ಹೊಂದಿದೆ. ಇದು ಗೇಮಿಂಗ್ ಮತ್ತು ಮಲ್ಟಿ ಟಾಸ್ಕಿಂಗ್‌ಗೆ ಹೆಚ್ಚು ಸೂಕ್ತವಾಗಿದೆ. 17 ಪ್ರೋನಲ್ಲಿ ಸ್ನಾಪ್‌ಡ್ರಾಗನ್‌ 6 ಜೆನ್‌ 4 ಪ್ರೊಸೆಸರ್ ಹೊಂದಿದ್ದು, 8 ಜಿಬಿ ರ್‍ಯಾಮ್‌ ಹಾಗೂ 256 ಜಿಬಿ ಸ್ಟೋರೇಜ್ ಹೊಂದಿದೆ. ಎರಡೂ ಮಾದರಿಗಳು ಎರಡು ಸ್ಟಿರಿಯೋ ಸ್ಪೀಕರ್‌ಗಳನ್ನು ಹೊಂದಿದ್ದು, 400%ವರೆಗೆ ವಾಲ್ಯೂಮ್ ಬೂಸ್ಟ್ ನೀಡುತ್ತವೆ.

ಕ್ಯಾಮರಾ ಸಾಮರ್ಥ್ಯ: 17 ಪ್ರೋ 8 ಮೆಗಾಪಿಕ್ಸಲ್‌ ಫ್ರಂಟ್‌ ಕ್ಯಾಮರಾ ಹಾಗೂ 50 ಮೆಗಾ ಪಿಕ್ಸಲ್‌ + 2 ಮೆಗಾಪಿಕ್ಸಲ್‌ ಹಿಂಬದಿ ಕ್ಯಾಮರಾ ಮತ್ತು 1280×2772 ಪಿಕ್ಸೆಲ್ ರೆಸಲ್ಯೂಷನ್ ಹೊಂದಿದ್ದರೆ, ಪ್ರೋ ಮ್ಯಾಕ್ಸ್ 32 ಮೆಗಾಪಿಕ್ಸೆಲ್‌ ಮುಂಬದಿ ಕ್ಯಾಮರಾ ಹಾಗೂ 50 + 8 ಮೆಗಾಪಿಕ್ಸೆಲ್ ಬ್ಯಾಕ್ ಕ್ಯಾಮರಾ ಹೊಂದಿದೆ. ಎರಡು ಪೋನ್‌ಗಳು ಕೂಡ ಡಾಲ್ಬಿ ಮಿಷನ್ ಮತ್ತು ಗೊರಿಲ್ಲಾ ಗ್ಲಾಸ್‌ಗಳನ್ನು ಹೊಂದಿವೆ.

ಬೆಲೆಗಳು: ಶಒಮಿ ಕಂಪನಿಯ ರೆಡ್‌ಮಿ ನೋಟ್‌ 17 ಪ್ರೋ ₹33,999 ರಿಂದ ಪ್ರಾರಂಭವಾಗುತಿದ್ದು, ಇದು ಸೆ. 17ರಿಂದಲೇ ಮಾರಾಟಕ್ಕೆ ಲಭ್ಯವಿದೆ ಹಾಗೂ ಪ್ರೊ ಮ್ಯಾಕ್ಸ್ ₹44,999 ರಿಂದ ಪ್ರಾರಂಭವಾಗುತ್ತಿದ್ದು, ಇದು ಸೆ. 23ರಿಂದ ಮಾರಾಟಕ್ಕೆ ಲಭ್ಯವಿರಲಿದೆ.

ಶಒಮಿ ಇಂಡಿಯಾದ ಸಿಒಒ ಸುಧಿನ್ ಮಥುರ್ ಹಾಗೂ ಅಸೋಸಿಯೇಟ್ ಡೈರೆಕ್ಟರ್ ಗೌತಮ್ ಬಾತ್ರಾ ಉಪಸ್ಥಿತರಿದ್ದರು. (ಬಾಕ್ಸ್‌):

ಮೊಬೈಲ್ ಮೇಲಕ್ಕೆಸೆದು, ನೀರಲ್ಲಿ ಮುಳುಗಿಸಿ

ಸಾಮರ್ಥ್ಯ ಪ್ರಾತ್ಯಕ್ಷಿಕೆ ನೀಡಿದ ಕುಸ್ತಿಪಟು ಖಲಿ!ಶಒಮಿಯು ದಿ ಗ್ರೇಟ್ ಖಲಿ ಎಂದು ಕರೆಯಲ್ಪಡುವ ಮಾಜಿ ವೃತ್ತಿಪರ ಕುಸ್ತಿಪಟು ಮತ್ತು ಮೊದಲ ಭಾರತೀಯ ಮೂಲದ WWE ವಿಶ್ವ ಚಾಂಪಿಯನ್ ದಲೀಪ್ ಸಿಂಗ್ ಅವರನ್ನು ಹೊಸ ಫೋನ್‌ಗಳ ಲೈವ್ ಡ್ರಾಪ್ ಪರೀಕ್ಷೆಗೆ ಆಹ್ವಾನಿಸಿತ್ತು. ಅವರು 17 ಪ್ರೋ ಮತ್ತು ಮ್ಯಾಕ್ಸ್ ಎರಡು ಫೋನ್‌ಗಳನ್ನು ಮೇಲಕ್ಕೆ ಎಸೆದು ಅವುಗಳ ಸಾಮರ್ಥ್ಯವನ್ನು ಪ್ರಾತ್ಯಕ್ಷಿಕೆಯ ಮೂಲಕ ತೋರಿಸಿದರು. ಕಂಪನಿ ವತಿಯಿಂದ ಮೊಬೈಲ್ ಬಾಳಿಕೆಯನ್ನು ಖಚಿತಪಡಿಸಲು, ನೀರಿನೊಳಗೆ ಮೊಬೈಲ್ ಇಡಲಾಗಿತ್ತು ಹಾಗೂ ಫುಟ್‌ಬಾಲ್‌ನಿಂದ ಮೊಬೈಲ್‌ಗೆ ಕಿಕ್ ಮಾಡುವ ಮತ್ತು 50 ಕೆಜಿ ಭಾರದ ವಸ್ತುವನ್ನು ಮೊಬೈಲ್‌ಗೆ ತೂಗುಹಾಕಿ ಫೋನ್‌ ಬಾಳಿಕೆಯ ಪ್ರಾತ್ಯಕ್ಷಿಕೆ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಸರ್ಕಾರ ರೈತರಿಗೆ ಪರಿಹಾರ ಬಿಡುಗಡೆ ಮಾಡಲಿ’
ಮನಸ್ಸು ಮಾಡಿದರೆ ಮಾತ್ರ ನಶಾಮುಕ್ತ ಭಾರತ ಸಾಧ್ಯ