ನಚಿಕೇತನ್ ಎನ್. ಕನ್ನಡಪ್ರಭ ವಾರ್ತೆ ನವದೆಹಲಿಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿಗಳಲ್ಲಿ ಮುಂಚೂಣಿಯಲ್ಲಿರುವ ಶಿಯೋಮಿ ತನ್ನ ಹೊಸ ತಲೆಮಾರಿನ ‘ರೆಡ್ ಮಿ ಟರ್ಬೊ 5’ ಎಂಬ ಹೊಸ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆಮಾಡಿದೆ. ಇದೇ ಮೊದಲ ಬಾರಿಗೆ ರೆಡ್ ಮಿ ಟರ್ಬೊ ಸರಣಿಯು ಭಾರತೀಯ ಮಾರುಕಟ್ಟೆಗೆ ಪ್ರವೇಶಿಸಿದ್ದು, ಗೇಮಿಂಗ್, ಮಲ್ಟಿಟಾಸ್ಕಿಂಗ್ ಮತ್ತು ದೀರ್ಘ ಬ್ಯಾಟರಿ ಬಾಳಿಕೆಯನ್ನು ಬಯಸುವ ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡು ಈ ಮೊಬೈಲ್ ಅನ್ನು ವಿನ್ಯಾಸಗೊಳಿಸಲಾಗಿದೆ. ರೆಡ್ ಮಿ ಟರ್ಬೊ 5 ಮೊಬೈಲ್ ಮೊದಲ ನೋಟದಲ್ಲೇ ಪ್ರೀಮಿಯಂ ಅನುಭವ ನೀಡುತ್ತದೆ. ಏರೋಸ್ಪೇಸ್-ಗ್ರೇಡ್ ಮೆಟಲ್ ಫ್ರೇಮ್, ಡ್ಯುಯಲ್ ಗ್ಲಾಸ್ ಬಾಡಿ ಹಾಗೂ ಹಿಂಭಾಗದಲ್ಲಿರುವ ಪಿಕ್ಸೆಲ್ ಮ್ಯಾಟ್ರಿಕ್ಸ್ ಲೈಟಿಂಗ್ ಸಿಸ್ಟಮ್ ಮೊಬೈಲ್‌ಗೆ ವಿಶಿಷ್ಟ ಲುಕ್ ನೀಡುತ್ತದೆ. IP66, IP68 ಮತ್ತು IP69 ರೇಟಿಂಗ್ ಹೊಂದಿರುವುದರಿಂದ ನೀರು, ಧೂಳು ಹಾಗೂ ಕಠಿಣ ಪರಿಸ್ಥಿತಿಗಳಲ್ಲಿಯೂ ಫೋನ್ ಸುರಕ್ಷಿತವಾಗಿರುತ್ತದೆ ಎಂದು ಕಂಪನಿ ತಿಳಿಸಿದೆ. ಮೊಬೈಲ್ ಡೆಸ್‌ಪ್ಲೇ ವಿನ್ಯಾಸ: 6.59 ಇಂಚಿನ 1.5K AMOLED ಡಿಸ್‌ಪ್ಲೇ 120Hz AdaptiveSync ರಿಫ್ರೆಶ್ ರೇಟ್ ಹಾಗೂ 3500 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್‌ನೊಂದಿಗೆ ಅತ್ಯುತ್ತಮ ವೀಕ್ಷಣಾ ಅನುಭವ ನೀಡುತ್ತದೆ. ಬಿಸಿಲಿನಲ್ಲಿಯೂ ಪರದೆ ಸ್ಪಷ್ಟವಾಗಿ ಕಾಣುತ್ತದೆ. Dolby Vision ಮತ್ತು 12-bit ಕಲರ್ ಸಪೋರ್ಟ್‌ನಿಂದ ಸಿನಿಮಾ ಮತ್ತು ವಿಡಿಯೋ ವೀಕ್ಷಣೆ ಇನ್ನಷ್ಟು ಆಕರ್ಷಕವಾಗುತ್ತದೆ.ಗೇಮಿಂಗ್ ಪ್ರಿಯರಿಗೆ ಹಬ್ಬರೆಡ್ ಮಿ ಟರ್ಬೊ 5ರ ಹೃದಯವಾಗಿರುವ ಮೀಡಿಯಾ ಟೆಕ್ ಡೈಮನ್‌ಸಿಟಿ 8500 Ultra ಪ್ರೊಸೆಸರ್ ಅತ್ಯುತ್ತಮ ಕಾರ್ಯಕ್ಷಮತೆಯನ್ನು ನೀಡುತ್ತದೆ. LPDDR5X RAM ಮತ್ತು UFS 4.1 ಸ್ಟೋರೇಜ್‌ನಿಂದ ಅಪ್ಲಿಕೇಶನ್‌ಗಳು ಕ್ಷಣಾರ್ಧದಲ್ಲಿ ತೆರೆದುಕೊಳ್ಳುತ್ತವೆ. ಗೇಮಿಂಗ್ ಪ್ರಿಯರಿಗೆ ಈ ಫೋನ್ ವಿಶೇಷವಾಗಿದೆ. ‘PUBG Mobile, BGMI, Call of Duty Mobile’ ಮತ್ತು ಇತರ ಜನಪ್ರಿಯ ಗೇಮ್‌ಗಳನ್ನು ಹೆಚ್ಚಿನ ಸೆಟ್ಟಿಂಗ್‌ಗಳಲ್ಲಿ ಸುಲಭವಾಗಿ ಆಡಬಹುದು. 3D ಐಸ್ ಲೂಪ್ ಕೂಲಿಂಗ್ ಸಿಸ್ಟಮ್ ದೀರ್ಘಕಾಲದ ಗೇಮಿಂಗ್ ವೇಳೆ ಮೊಬೈಲ್ ಬಿಸಿಯಾಗುವುದನ್ನು ನಿಯಂತ್ರಿಸುತ್ತದೆ. ಕಂಪನಿಯ ಪ್ರಕಾರ, 20ಕ್ಕೂ ಹೆಚ್ಚು ಆಟಗಳಲ್ಲಿ 120 ಎಫ್‌ಪಿಎಸ್ ಗೇಮಿಂಗ್ ಅನುಭವ ಲಭ್ಯವಿದೆ. ಟರ್ಬೊ 5ಗೆ ಬ್ಯಾಟರಿಯೇ ಪ್ರಮುಖ ಆಕರ್ಷಣೆ:
50ಎಂಪಿ ಸೋನಿ IMX882 ಮುಖ್ಯ ಕ್ಯಾಮೆರಾ ಒಐಎಸ್ ಮತ್ತು ಇಐಎಸ್ ಬೆಂಬಲದೊಂದಿಗೆ ಉತ್ತಮ ಗುಣಮಟ್ಟದ ಚಿತ್ರಗಳನ್ನು ಸೆರೆಹಿಡಿಯುತ್ತದೆ. ಕಡಿಮೆ ಬೆಳಕಿನಲ್ಲಿಯೂ ಇದು ಉತ್ತಮ ಫಲಿತಾಂಶ ನೀಡುತ್ತದೆ. 4K 60fps ವಿಡಿಯೋ ರೆಕಾರ್ಡಿಂಗ್ ಮತ್ತು Turbo Snap Burst Mode ಹೆಚ್ಚುವರಿ ಆಕರ್ಷಣೆಯಾಗಿದೆ.
ಸೌಂಡ್ ಸಿಸ್ಟಮ್: ಡ್ಯುಯಲ್ ಸ್ಟಿರಿಯೊ ಸ್ಪೀಕರ್, Dolby Atmos ಹಾಗೂ ಹೈ ರೆಸಲೋಷನ್ ಆಡಿಯೋ ಬೆಂಬಲದಿಂದ ಚಲನಚಿತ್ರ, ಸಂಗೀತ ಮತ್ತು ಗೇಮಿಂಗ್ ಅನುಭವ ಮತ್ತಷ್ಟು ಉತ್ತಮಗೊಳ್ಳುತ್ತದೆ. ಎಐ ವೈಶಿಷ್ಟ್ಯಗಳು: Xiaomi HyperOS 3, HyperConnect, HyperAI, Google Gemini Integration ಮತ್ತು Circle to Search ಮುಂತಾದ ನೂತನ ಎಐ ಸೌಲಭ್ಯಗಳನ್ನು ಒಳಗೊಂಡಿದೆ. ಕಂಪನಿಯು 4 ವರ್ಷಗಳ Android ಅಪ್‌ಡೇಟ್ ಮತ್ತು 6 ವರ್ಷಗಳ ಭದ್ರತಾ ಅಪ್‌ಡೇಟ್‌ಗಳನ್ನು ಭರವಸೆ ನೀಡಿದೆ.-ಬಾಕ್ಸ್-ಟರ್ಬೊ 5 ಮೊಬೈಲ್‌ನ ಬೆಲೆ
*12GB + 256GB : 40,999 ರು.(ರಿಯಾಯಿತಿ ನಂತರ 38,999) ಜೂ.19ರಿಂದ Mi.com, Amazon.in ಮತ್ತು Xiaomi Retail ಮಳಿಗೆಗಳಲ್ಲಿ ಸ್ಮಾರ್ಟ್‌ಫೋನ್ ಮಾರಾಟ ಆರಂಭವಾಗಿದೆ. ತನ್ನ ಶಕ್ತಿಶಾಲಿ ಬ್ಯಾಟರಿ, ಗೇಮಿಂಗ್ ಸಾಮರ್ಥ್ಯ ಮತ್ತು ಪ್ರೀಮಿಯಂ ವೈಶಿಷ್ಟ್ಯಗಳ ಸಮನ್ವಯದೊಂದಿಗೆ ರೆಡ್ ಮಿ ಟರ್ಬೊ 5 ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಹೊಸ ಸ್ಪರ್ಧೆಯನ್ನು ಹುಟ್ಟುಹಾಕುವ ನಿರೀಕ್ಷೆಯಿದೆ.
ಟರ್ಬೊ 5ನ ಪ್ರಮುಖ ಆಕರ್ಷಣೆಗಳು
120Hz AMOLED ಡಿಸ್‌ಪ್ಲೇ