ನಮೂನೆ-6 ಸಲ್ಲಿಸುವ ಮೂಲಕ ಕೆಲಸದ ಬೇಡಿಕೆ ದಾಖಲಿಸಿ: ಚಂದ್ರಶೇಖರ

KannadaprabhaNewsNetwork |  
Published : Oct 06, 2026, 02:15 AM IST
ರೋಣ ತಾಲೂಕಿನ ಹೊಸಳ್ಳಿ ಗ್ರಾಪಂಯಲ್ಲಿ ನಡೆದ ಕೆರೆ ಪುನಃಶ್ಚೇತನ ಕಾಮಗಾರಿ ಸ್ಥಳಕ್ಕೆ ತಾಪಂ ಇಒ ಚಂದ್ರಶೇಖರ ಕಂದಕೂರ ಭೇಟಿ ನೀಡಿ ಮಾತನಾಡಿದರು. | Kannada Prabha

ಸಾರಾಂಶ

ಬರಗಾಲದ ಸಮಯದಲ್ಲಿ ಕೆಲಸ ಇಲ್ಲ ಅಂತಾ ಯಾರೂ ಚಿಂತಗೆ ಒಳಗಾಗಬೇಡಿ ಹಾಗೂ ಗ್ರಾಪಂ ವ್ಯಾಪ್ತಿಯಲ್ಲಿ ಉದ್ಯೋಗದ ನಿರೀಕ್ಷೆಯಲ್ಲಿರುವ ಕುಟುಂಬಗಳು ನಿಮ್ಮ ಗ್ರಾಪಂ ವ್ಯಾಪ್ತಿಯಲ್ಲಿ ನಮೂನೆ-6 ಸಲ್ಲಿಸುವ ಮೂಲಕ ತಮ್ಮ ಕೆಲಸದ ಬೇಡಿಕೆಯನ್ನು ದಾಖಲಿಸಬಹುದು.

ಕನ್ನಡಪ್ರಭ ವಾರ್ತೆ ರೋಣ

ಬರಗಾಲದ ಸಮಯದಲ್ಲಿ ಕೆಲಸ ಇಲ್ಲ ಅಂತಾ ಯಾರೂ ಚಿಂತಗೆ ಒಳಗಾಗಬೇಡಿ ಹಾಗೂ ಗ್ರಾಪಂ ವ್ಯಾಪ್ತಿಯಲ್ಲಿ ಉದ್ಯೋಗದ ನಿರೀಕ್ಷೆಯಲ್ಲಿರುವ ಕುಟುಂಬಗಳು ನಿಮ್ಮ ಗ್ರಾಪಂ ವ್ಯಾಪ್ತಿಯಲ್ಲಿ ನಮೂನೆ-6 ಸಲ್ಲಿಸುವ ಮೂಲಕ ತಮ್ಮ ಕೆಲಸದ ಬೇಡಿಕೆಯನ್ನು ದಾಖಲಿಸಬಹುದು ಎಂದು ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಚಂದ್ರಶೇಖರ ಕಂದಕೂರ ತಿಳಿಸಿದರು.

ತಾಲೂಕಿನ ಹೊಸಳ್ಳಿ ಗ್ರಾಪಂಯಲ್ಲಿ ನಡೆದ ಕೆರೆ ಪುನಃಶ್ಚೇತನ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದರು.

ಈ ಮೂಲಕ ಯಾವ ಕುಟುಂಬಕ್ಕೆ ಕೆಲಸದ ಅವಶ್ಯಕತೆ ಇದೆ ಎಂಬುದು ಅಧಿಕೃತವಾಗಿ ದಾಖಲಾಗಲಿದ್ದು, ಅದರ ಆಧಾರದ ಮೇಲೆ ಉದ್ಯೋಗ ಕಲ್ಪಿಸುವ ಪ್ರಕ್ರಿಯೆ ಕೈಗೊಳ್ಳಲು ಸಾಧ್ಯವಾಗಲಿದೆ ಎಂದರು.

ರೋಣ ತಾಲೂಕಿನ 22 ಗ್ರಾಪಂಗಳ ವ್ಯಾಪ್ತಿಯಲ್ಲಿ ವಿಬಿಜಿ-ರಾಮ್‌ಜಿ ಯೋಜನೆಯಡಿ ನಮೂನೆ-6 ಅಭಿಯಾನ ನಡೆಯುತ್ತಿದ್ದು, ಗ್ರಾಮೀಣ ಕುಟುಂಬಗಳಿಂದ ಕೆಲಸದ ಬೇಡಿಕೆಗಳನ್ನು ಸಂಗ್ರಹಿಸಲಾಗುತ್ತಿದೆ. ಈ ಅಭಿಯಾನ ಕೇವಲ ಅರ್ಜಿ ಸಂಗ್ರಹಿಸುವ ಕಾರ್ಯವಾಗದೆ, ಉದ್ಯೋಗದ ಅಗತ್ಯವಿರುವ ಕುಟುಂಬಗಳನ್ನು ಗುರುತಿಸಿ, ಅವರಿಗೆ ಲಭ್ಯವಿರುವ ಕಾಮಗಾರಿಗಳಲ್ಲಿ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ನಡೆಯುತ್ತಿದೆ ಎಂದರು.

ವಿಬಿಜಿ-ರಾಮ್‌ಜಿ ಯೋಜನೆಯಡಿ ಕೆಲಸ ಪಡೆಯಲು ಮೊದಲು ಕೆಲಸದ ಬೇಡಿಕೆ ಸಲ್ಲಿಸುವುದು ಅಗತ್ಯ. ಗ್ರಾಮದಲ್ಲಿ ಯಾವ ಪ್ರಮಾಣದಲ್ಲಿ ಕಾರ್ಮಿಕರಿಗೆ ಕೆಲಸ ಬೇಕಿದೆ ಎಂಬುದನ್ನು ತಿಳಿದುಕೊಳ್ಳಲು ನಮೂನೆ-6 ಪ್ರಮುಖ ಆಧಾರವಾಗಲಿದೆ. ಇದರ ಮೂಲಕ ಬೇಡಿಕೆಯಿರುವ ಪ್ರದೇಶಗಳಲ್ಲಿ ಅಗತ್ಯ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಕೂಡ ಅನುಕೂಲವಾಗಲಿದೆ. ಕೆಲಸ ಸಿಕ್ಕ ಬಳಿಕ ಪ್ರತಿಯೊಬ್ಬ ವ್ಯಕ್ತಿಗೆ ₹382 ಕೂಲಿ ದೊರೆಯಲಿದೆ ಎಂದು ತಿಳಿಸಿದರು.

ತಾಲೂಕಿನ ಗ್ರಾಮಗಳಲ್ಲಿ ನಡೆಯುತ್ತಿರುವ ಕೆರೆ ಪುನಃಶ್ಚೇತನ, ಹೂಳೆತ್ತುವಿಕೆ, ನೀರು ಸಂಗ್ರಹಣಾ ವ್ಯವಸ್ಥೆ ಸುಧಾರಣೆ, ಜಲ ಸಂರಕ್ಷಣೆ ಸೇರಿದಂತೆ ಗ್ರಾಮೀಣ ಪ್ರದೇಶಕ್ಕೆ ದೀರ್ಘಕಾಲಿಕವಾಗಿ ಉಪಯೋಗವಾಗುವ ಕಾಮಗಾರಿಗಳಲ್ಲಿ ಸ್ಥಳೀಯರಿಗೆ ಉದ್ಯೋಗ ಕಲ್ಪಿಸುವ ಸಾಧ್ಯತೆ ಇದೆ. ಇದರಿಂದ ಒಂದೆಡೆ ಕೂಲಿ ಕಾರ್ಮಿಕರಿಗೆ ಕೆಲಸ ದೊರೆತರೆ, ಮತ್ತೊಂದೆಡೆ ಗ್ರಾಮದ ಸಾರ್ವಜನಿಕ ಆಸ್ತಿಗಳ ಅಭಿವೃದ್ಧಿಗೂ ವೇಗ ಸಿಗಲಿದೆ.

ಕೆಲಸಕ್ಕಾಗಿ ಬೇರೆ ಊರುಗಳಿಗೆ ತೆರಳುವ ಪರಿಸ್ಥಿತಿ ಎದುರಿಸುತ್ತಿರುವ ಗ್ರಾಮೀಣ ಕುಟುಂಬಗಳಿಗೆ ತಮ್ಮದೇ ಗ್ರಾಮದ ವ್ಯಾಪ್ತಿಯಲ್ಲಿ ಉದ್ಯೋಗ ದೊರೆಯುವಂತೆ ಮಾಡುವುದು ಅಭಿಯಾನದ ಪ್ರಮುಖ ಉದ್ದೇಶವಾಗಿದೆ. ವಿಶೇಷವಾಗಿ ಕೃಷಿ ಕೆಲಸ ಕಡಿಮೆ ಇರುವ ಅವಧಿಯಲ್ಲಿ ಕೂಲಿ ಕಾರ್ಮಿಕರಿಗೆ ಸ್ಥಳೀಯವಾಗಿ ಉದ್ಯೋಗ ದೊರೆತರೆ ಕುಟುಂಬಗಳ ಆದಾಯಕ್ಕೆ ನೆರವಾಗಲಿದೆ ಎಂದರು.

ಈ ವೇಳೆ ಗುರುಲಿಂಗಯ್ಯ ಹಿರೇಮಠ, ಈರಣ್ಣ ದಳವಾಯಿ ಸೇರಿ ಗ್ರಾಪಂ ಸಿಬ್ಬಂದಿ ಹಾಗೂ ವಿಬಿಜಿ-ರಾಮ್‌ಜಿ ಸಿಬ್ಬಂದಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಕರೆಗೆ ₹50 ಸಾವಿರ ಪರಿಹಾರ ಕೊಡಿ
ಗ್ರಾಮೀಣ ಪ್ರಥಮ ಚಿಕಿತ್ಸಕರ ಸೇವೆ ಶ್ಲಾಘನೀಯ