ಸರ್ಕಾರಿ ಜಾಗದಲ್ಲಿರುವ ಧಾರ್ಮಿಕ ಕೇಂದ್ರಗಳನ್ನು ದೇವರ ಹೆಸರಿಗೆ ಸಕ್ರಮಗೊಳಿಸಿ: ಸಚಿವಗೆ ರೈ ಮನವಿ

KannadaprabhaNewsNetwork |  
Published : Nov 02, 2025, 04:00 AM IST
ಫೋಟೋ: ೩೧ಪಿಟಿಆರ್-ಎಂಎಲ್‌ಎಶಾಸಕ ಅಶೋಕ್ ರೈ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ಸರ್ಕಾರಿ ಜಾಗದಲ್ಲಿರುವ ಎಲ್ಲಾ ಧರ್ಮದ ಧಾರ್ಮಿಕ ಕೇಂದ್ರಗಳನ್ನು ಧಾರ್ಮಿಕ ಕೇಂದ್ರ ಅಥವಾ ದೇವರ ಹೆಸರಿನಲ್ಲಿ ಸಕ್ರಮೀಕರಣ ಮಾಡುವ ಬಗ್ಗೆ ಕಂದಾಯ ಸಚಿವ ಕೃಷ್ಣಬೈರೇಗೌಡರ ಜೊತೆ ಶಾಸಕ ಅಶೋಕ್ ರೈ ಶುಕ್ರವಾರ ಮಾತುಕತೆ ನಡೆಸಿದ್ದು , ಈ ವಿಚಾರದಲ್ಲಿ ಮೊದಲ ಹೆಜ್ಜೆ ಎಂಬಂತೆ ಆರು ಧಾರ್ಮಿಕ ಕೇಂದ್ರಗಳನ್ನು ಪ್ರಾಯೋಗಿಕವಾಗಿ ಸಕ್ರಮೀಕರಣ ಮಾಡುವುದಾಗಿ ಸಚಿವರು ಒಪ್ಪಿಕೊಂಡಿದ್ದು , ಇದಾದ ಬಳಿಕ ಎಲ್ಲಾ ಧಾರ್ಮಿಕ ಕೇಂದ್ರಗಳೂ ಸಕ್ರಮಗೊಳ್ಳಲಿದೆ.

ಕನ್ನಡಪ್ರಭ ವಾರ್ತೆ ಪುತ್ತೂರುಸರ್ಕಾರಿ ಜಾಗದಲ್ಲಿರುವ ಎಲ್ಲಾ ಧರ್ಮದ ಧಾರ್ಮಿಕ ಕೇಂದ್ರಗಳನ್ನು ಧಾರ್ಮಿಕ ಕೇಂದ್ರ ಅಥವಾ ದೇವರ ಹೆಸರಿನಲ್ಲಿ ಸಕ್ರಮೀಕರಣ ಮಾಡುವ ಬಗ್ಗೆ ಕಂದಾಯ ಸಚಿವ ಕೃಷ್ಣಬೈರೇಗೌಡರ ಜೊತೆ ಶಾಸಕ ಅಶೋಕ್ ರೈ ಶುಕ್ರವಾರ ಮಾತುಕತೆ ನಡೆಸಿದ್ದು , ಈ ವಿಚಾರದಲ್ಲಿ ಮೊದಲ ಹೆಜ್ಜೆ ಎಂಬಂತೆ ಆರು ಧಾರ್ಮಿಕ ಕೇಂದ್ರಗಳನ್ನು ಪ್ರಾಯೋಗಿಕವಾಗಿ ಸಕ್ರಮೀಕರಣ ಮಾಡುವುದಾಗಿ ಸಚಿವರು ಒಪ್ಪಿಕೊಂಡಿದ್ದು , ಇದಾದ ಬಳಿಕ ಎಲ್ಲಾ ಧಾರ್ಮಿಕ ಕೇಂದ್ರಗಳೂ ಸಕ್ರಮಗೊಳ್ಳಲಿದೆ.ಧಾರ್ಮಿಕ ಕೇಂದ್ರಗಳಾದ ದೇವಸ್ಥಾನ, ದೈವಸ್ಥಾನ , ಮಸೀದಿ, ಚರ್ಚ್, ಬಸದಿಗಳು ಸೇರಿದಂತೆ ಎಲ್ಲಾ ಧರ್ಮಗಳ ಧಾರ್ಮಿಕ ಕೇಂದ್ರಗಳು ಈ ವ್ಯಾಪ್ತಿಯಲ್ಲಿ ಒಳಪಡುತ್ತದೆ.ಎಷ್ಟೋ ವರ್ಷಗಳಿಂದ ನಿರ್ಮಾಣವಾದ ಈ ಧಾರ್ಮಿಕ ಕೇಂದ್ರಗಳು ಇಂದಿಗೂ ಸರ್ಕಾರಿ ಜಾಗದಲ್ಲೇ ಇದೆ. ದೇವರ ಅಥವಾ ಧಾರ್ಮಿಕ ಕೇಂದ್ರದ ಹೆಸರಿನಲ್ಲಿ ಇನ್ನೂ ಪಹಣಿ ಪತ್ರದಲ್ಲಿ ದಾಖಲಾಗಿದ್ದ. ಪಹಣಿ ಪತ್ರದಲ್ಲಿ ಸರ್ಕಾರಿ ಜಾಗ ಎಂದೇ ನಮೂದಾಗಿದೆ. ಸರ್ಕಾರಿ ಜಾಗದಲ್ಲಿರುವ ಧಾರ್ಮಿಕ ಕೇಂದ್ರಗಳು ಮುಂದಿನ ದಿನಗಳಲ್ಲಿಯೂ ಅದೇ ಸ್ಥಳದಲ್ಲಿ ಇರುವ ಕಾರಣ ಕೇಂದ್ರಗಳಿರುವ ಆ ಜಾಗವನ್ನು ದೇವರ ಅಥವಾ ಧಾರ್ಮಿಕ ಕೇಂದ್ರದ ಹೆಸರಿನಲ್ಲಿ ಮಾಡಬೇಕು ಎಂದು ಶಾಸಕರು ಸಚಿವರಲ್ಲಿ ಮನವಿ ಮಾಡಿದ್ದರು. ಶಾಸಕರ ಮನವಿಗೆ ಪೂರಕ ಎಂಬಂತೆ ಇದೀಗ ಧಾರ್ಮಿಕ ಕೇಂದ್ರಗಳ ಸಕ್ರಮೀಕರಣಕ್ಕೆ ಸರ್ಕಾರ ಮುಂದಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾರವಾರದಲ್ಲಿ ನಾಳೆ ರಾಷ್ಟ್ರಪತಿ ಮುರ್ಮು ಸಬ್‌ಮರೀನ್‌ ಯಾನ
ಬಿಜೆಪಿ ರಾಜ್ಯಗಳಲ್ಲಿ ಯಾಕೆ ನೌಕರಿ ಸೃಷ್ಟಿ ಆಗಿಲ್ಲ : ಸಿದ್ದರಾಮಯ್ಯ