ಚುನಾವಣಾ ವೆಚ್ಚ ಪರಿಶೀಲಿಸುವಾಗ ನಿಯಮ ಪಾಲಿಸಿ

KannadaprabhaNewsNetwork |  
Published : Jan 30, 2024, 02:00 AM IST
ಸಿಕೆಬಿ-4 ಚುನಾವಣಾ ವೆಚ್ಚ ಪರಿಶೀಲನಾ ತಂಡದ ಅಧಿಕಾರಿಗಳ ತರಬೇತಿ ಕಾರ್ಯಾಗಾರದಲ್ಲಿ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಮಾತನಾಡಿದರು | Kannada Prabha

ಸಾರಾಂಶ

ಚುನಾವಣೆ ಸಂದರ್ಭದಲ್ಲಿ ಚುನಾವಣಾ ಅಭ್ಯರ್ಥಿಗಳು ಕೈಗೊಳ್ಳುವ ಚುನಾವಣೆಗೆ ಸಂಬಂಧಪಟ್ಟ ವೆಚ್ಚಗಳನ್ನು ನಿರಂತರವಾಗಿ ನಿಗಾ ಇಡಬೇಕು, ಯಾವ ವೆಚ್ಚ ನಿಯಮವಳಿ ರೀತ್ಯ ಇದೆ,ಅಕ್ರಮ ವೆಚ್ಚವಾಗಿದೆ ಎಂಬುದರ ವರದಿ ನೀಡಬೇಕ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಅಭ್ಯರ್ಥಿಗಳು ಚುನಾವಣೆ ಸಂಬಂಧ ಮಾಡುವ ಪ್ರತಿ ವೆಚ್ಚಗಳನ್ನು ಸಮರ್ಪಕವಾಗಿ, ಕರಾರುವಕ್ಕಾಗಿ ನಿಯಮಾವಳಿ ರೀತ್ಯ ಪರಿಶೀಲಿಸಿ ಮೇಲಿನ ಅಧಿಕಾರಿಗಳಿಗೆ ವರದಿ ಮಾಡಬೇಕೆಂದು ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ ಚುನಾವಣೆ ವೆಚ್ಚದ ತಂಡಗಳ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸೋಮವಾರ ನಗರ ಹೊರವಲಯದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ಚುನಾವಣಾ ವೆಚ್ಚ ಪರಿಶೀಲನಾ ತಂಡದ ಅಧಿಕಾರಿಗಳೊಂದಿಗೆ ನಡೆದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಬಜೆಟ್‌ ಬಳಿಕ ಚುನಾವಣೆ ಘೋಷಣೆ?

ಕೇಂದ್ರ ಮತ್ತು ರಾಜ್ಯ ಸರ್ಕಾರದ ಈ ಬಾರಿಯ ಬಜೆಟ್ ನಂತರ ಯಾವುದೇ ಕ್ಷಣದಲ್ಲಿ ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಘೋಷಣೆ ಆಗಬಹುದು. ಚುನಾವಣಾ ನೀತಿ ಸಂಹಿತೆ ಅವಧಿಯಲ್ಲಿ, ಚುನಾವಣೆ ಸಂದರ್ಭದಲ್ಲಿ ಚುನಾವಣಾ ಅಭ್ಯರ್ಥಿಗಳು ಕೈಗೊಳ್ಳುವ ಚುನಾವಣೆಗೆ ಸಂಬಂಧಪಟ್ಟ ವೆಚ್ಚಗಳನ್ನು ನಿರಂತರವಾಗಿ ನಿಗಾ ಇಡಬೇಕು, ಯಾವ ವೆಚ್ಚ ನಿಯಮವಳಿ ರೀತ್ಯ ಇದೆ,ಅಕ್ರಮ ವೆಚ್ಚವಾಗಿದೆ. ಎನ್ನುವುದನ್ನು ಚುನವಣಾ ಆಯೋಗದ ನಿರ್ದೇಶನಗಳಂತೆ ಲೆಕ್ಕಹಾಕಿ ಮೇಲಿನ ಅಧಿಕಾರಿಗಳಿಗೆ ಕಾಲ ಕಾಲಕ್ಕೆ ಸಮರ್ಪವಾಗಿ ವರದಿ ಮಾಡಬೇಕು ಎಂದರು.

ಅಪರ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ ಅವರು ಮಾತನಾಡಿ, ಅಭ್ಯರ್ಥಿಗಳ ಚುನಾವಣಾ ವೆಚ್ಚಗಳಿಗೊ ಮಿತಿ ಇರುತ್ತದೆ. ಅವರು ಮಾಡಿರುವ ವೆಚ್ಚಗಳು ಮಿತಿಯ ಒಳಗೆ ಇವೆಯೇ, ಇಲ್ಲವೇ ಎಂಬುದನ್ನು ತಿಳಿಯಬೇಕಾದರೆ ಚುನಾವಣಾ ವೆಚ್ಚದ ಮೇಲೆ ನೀಗಾ ಇಡುವ ಎಂಸಿಎಂಸಿ, ವಿಡಿಯೋ ವೀಕ್ಷಣಾ ತಂಡ , ವೀಡಿಯೋ ಸರ್ ವೈಲಿಂಗ್ ತಂಡ, ಸ್ಟಾಟಿ ಸ್ಟಿಕ್ ಸರ್ ವೈಲೆನ್ಸ್ ತಂಡ, ಫ್ಲೈಯಿಂಗ್ ಸ್ಕ್ಯಾವ್ಡ್ ತಂಡ, ಅಕೌಂಟಿಂಗ್ ತಂಡಗಳ ಅಧಿಕಾರಿಗಳು ಮತ್ತು ಸಹಾಯಕ ಚುನಾವಣಾ ವೆಚ್ಚದ ಅಧಿಕಾರಿಗಳು ನಿಯಮಾವಳಿ ರೀತ್ಯಾ ಕೆಲಸ ಮಾಡಬೇಕು ಎಂದರು.

ತರಬೇತಿ ಕಾರ್ಯಾಗಾರದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕಾಧಿಕಾರಿ ಹಾಗೂ ಜಿಲ್ಲಾ ಚುನವಣಾ ವೆಚ್ಚ ಅಧಿಕಾರಿ ಎನ್.ಹರೀಶ್, ಜಿಲ್ಲಾ ಉದ್ಯೋಗಾಧಿಕಾರಿ ಎಂ.ಪ್ರಸಾದ್ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ