ದಲಿತರು, ಬಡವರ ಸೌಲಭ್ಯ ಕಸಿದ ಕಾಂಗ್ರೆಸ್ ತಿರಸ್ಕರಿಸಿ: ರೂಪಾಲಿ ನಾಯ್ಕ

KannadaprabhaNewsNetwork |  
Published : Nov 08, 2024, 12:00 AM IST
ಉಪ್ಪಾರ ಸಮಾಜದ ಸಭೆಯಲ್ಲಿ ರೂಪಾಲಿ ನಾಯ್ಕ, ಜನಾರ್ಧನ  ರೆಡ್ಡಿ, ಬಂಗಾರು ಹನುಮಂತು ಮತ್ತಿತರರು ಇದ್ದರು.  | Kannada Prabha

ಸಾರಾಂಶ

ವಾಲ್ಮೀಕಿ ನಿಗಮದಲ್ಲಿ ದಲಿತರಿಗೆ ಮೀಸಲಾದ ಹಣವನ್ನು ಲೂಟಿ ಮಾಡಿ ಕಾಂಗ್ರೆಸ್ ಲೋಕಸಭೆ ಚುನಾವಣೆ ಮಾಡಿದೆ ಎಂದು ಮಾಜಿ ಶಾಸಕಿ ರೂಪಾಲಿ ನಾಯ್ಕ ಆರೋಪಿಸಿದರು.

ಕಾರವಾರ: ಬಿಜೆಪಿ ರಾಜ್ಯ ಉಪಾಧ್ಯಕ್ಷೆ, ಮಾಜಿ ಶಾಸಕಿ ರೂಪಾಲಿ ಎಸ್. ನಾಯ್ಕ ಅವರು ಬಳ್ಳಾರಿ ಜಿಲ್ಲೆಯ ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಪರವಾಗಿ ಭರ್ಜರಿ ಪ್ರಚಾರ ನಡೆಸಿದರು.

ಸಂಡೂರಿನ ವಿವಿಧ ವಾರ್ಡ್‌ಗಳಲ್ಲಿ ಗುರುವಾರ ಪಕ್ಷದ ಅಭ್ಯರ್ಥಿ ಬಂಗಾರು ಹನುಮಂತು ಪರವಾಗಿ ಬಿರುಸಿನ ಪ್ರಚಾರ ನಡೆಸಿದ ಅವರು, ಪರಿಶಿಷ್ಟ ಪಂಗಡಕ್ಕೆ ಮೀಸಲಾದ ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಮತ ಕೇಳುವ ಯಾವ ನೈತಿಕ ಹಕ್ಕೂ ಇಲ್ಲ. ವಾಲ್ಮೀಕಿ ನಿಗಮದಲ್ಲಿ ದಲಿತರಿಗೆ ಮೀಸಲಾದ ಹಣವನ್ನು ಲೂಟಿ ಮಾಡಿ ಕಾಂಗ್ರೆಸ್ ಲೋಕಸಭೆ ಚುನಾವಣೆ ಮಾಡಿದೆ. ಮುಡಾದಲ್ಲೂ ದಲಿತರಿಗೆ ನಿಗದಿ ಪಡಿಸಿದ ಸೈಟುಗಳನ್ನು ಕೊಳ್ಳೆ ಹೊಡೆದಿದೆ. ತಮ್ಮದೆ ಪಕ್ಷದ ದಲಿತ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ನಿವಾಸದ ಮೇಲೆ ದಾಳಿ ನಡೆದರೂ ಅವರಿಗೆ ರಕ್ಷಣೆ ಕೊಡದ ಕಾಂಗ್ರೆಸ್ ಯಾವ ಮುಖ ಹೊತ್ತು ದಲಿತರ, ಬಡವರ, ಹಿಂದುಳಿದವರ ಮತ ಕೇಳುತ್ತಿದೆ ಎಂದು ವ್ಯಂಗ್ಯವಾಡಿದರು.

ಬಂಗಾರು ಹನುಮಂತು ಅವರ ಪತ್ನಿ ರೂಪಶ್ರೀ, ಮಹಿಳಾ ಮೋರ್ಚಾ ಅಧ್ಯಕ್ಷೆ ದೀಪಾ ಘೋಡ್ಕೆ, ನಗರ ಮಂಡಲ ಅಧ್ಯಕ್ಷೆ ನಾಗವೇಣಿ ಟಿ.ಜಿ. ಮತ್ತಿತರರು ರೂಪಾಲಿ ಎಸ್.ನಾಯ್ಕ ಅವರೊಂದಿಗೆ ಪ್ರಚಾರದಲ್ಲಿ ಭಾಗಿಯಾಗಿದ್ದರು. ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯರಿಂದ ಅಪಚಾರ: ಸಂಸದ ಕಾಗೇರಿ

ಶಿರಸಿ: ರಾಜ್ಯದಲ್ಲಿ ಗೌರವಯುತ ಹುದ್ದೆಯಾದ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅಪಚಾರ ಮಾಡುತ್ತಿದ್ದಾರೆ. ಲೋಕಾಯುಕ್ತ ವಿಚಾರಣೆಯನ್ನು ಎದುರಿಸುತ್ತಿದ್ದರೂ ಈ ಸ್ಥಾನ ಬಿಡದೇ ಹುದ್ದೆಯ ಗೌರವ ಹಾನಿ ಮಾಡುತ್ತಿದ್ದು, ತಕ್ಷಣವೇ ರಾಜೀನಾಮೆ ನೀಡಿ ಯೋಗ್ಯರಿಗೆ ಹುದ್ದೆ ಬಿಟ್ಟುಕೊಡಬೇಕು ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಆಗ್ರಹಿಸಿದ್ದಾರೆ.ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಹಗರಣಗಳ ಸರಮಾಲೆಯನ್ನೇ ಹೊದ್ದು ಮಲಗಿದೆ. ಮುಖ್ಯಮಂತ್ರಿಯಾದವರು ಸರ್ಕಾರಿ ಕಾರಿನಿಂದ ಇಳಿದು ವಿಚಾರಣೆಗೆ ಖಾಸಗಿ ಕಾರಿನಲ್ಲಿ ತೆರಳುತ್ತಾರೆಂದರೆ ಇದು ರಾಜ್ಯದ ಮರ್ಯಾದೆ ಹಾಳು ಮಾಡುವ ವಿಷಯ. ವಾಲ್ಮೀಕಿ ಮುಡಾ ಹಗರಣಗಳ ಬಳಿಕ ಈಗ ಅಬಕಾರಿ ಹಗರಣ ಹೊಸದಾಗಿ ಸೇರ್ಪಡೆಯಾದಂತಾಗಿದೆ.

ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಂಥ ಗೌರವ ಸ್ಥಾನದಲ್ಲಿದ್ದು ಲೋಕಾಯುಕ್ತ ವಿಚಾರಣೆ ಎದುರಿಸಿರುವುದು ಅವರ ಸಾಧನೆಯ ಸರಿ, ಇಡೀ ಸರ್ಕಾರದ ಮಂತ್ರಿ ಮಂಡಲವೇ ಒಂದಿಲ್ಲೊಂದು ವಿಚಾರಣೆ ಎದುರಿಸುತ್ತಿದೆ. ವಕ್ಫ್‌ ಬೋರ್ಡ್ ವಿಚಾರದಲ್ಲಿ ರಾಜ್ಯದ ರೈತರ ಜಮೀನನ್ನು ಕಬಳಿಸಲು ಹುನ್ನಾರ ನಡೆಸಿದ್ದು, ಸಿದ್ದರಾಮಯ್ಯ ಮತ್ತು ಜಮೀರ್ ಅಹಮದ್ ಮನಸ್ಥಿತಿ ತೋರಿಸುತ್ತದೆ ಎಂದಿದ್ದಾರೆ.

PREV

Recommended Stories

KAPPEC ಮೌನ ಕ್ರಾಂತಿ : ಸಾಲ ಪಡೆದವರಲ್ಲಿ ಶೇ.85 ಉದ್ದಿಮೆಗಳು ಯಶಸ್ಸು
ಆಹಾರೋದ್ಯಮಿಯಾಗಲು ಹಣಕಾಸು ನೆರವು ಸಿಗೋದೆಲ್ಲಿ? ಪಡೆಯೋದು ಹೇಗೆ?