ನೀತಿ ಸಂಹಿತೆ ಸಡಿಲಗೊಳಿಸಿ, ಜನರ ಸಮಸ್ಯೆಗಳಿಗೆ ಸ್ಪಂದಿಸಿ: ರಾಜ್ಯ ರೈತಸಂಘ

KannadaprabhaNewsNetwork |  
Published : May 12, 2024, 01:23 AM IST
೧೧ಕೆಎಲ್‌ಆರ್-೩ಚುನಾವಣಾ ನೀತಿ ಸಂಹಿತೆ ಸಡಿಲಗೊಳಿಸಿ ಜನಸೇವಾ ಸಮಸ್ಯೆಗಳಿಗೆ ಆಯೋಗ ಕೃಪೆ ತೋರಲಿ ಎಂದು ರೈತ ಸಂಘದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಚುನಾವಣಾ ಅಧಿಕಾರಿಗಳನ್ನು ಒತ್ತಾಯಿಸಿದರು. | Kannada Prabha

ಸಾರಾಂಶ

ಈಗಾಗಲೇ ಎರಡು ತಿಂಗಳಲ್ಲಿ ನಿರ್ದಿಷ್ಟ ಸರ್ಕಾರಿ ಸೇವೆಗಳು ಲಭ್ಯವಾಗದೇ ಜನಸಾಮಾನ್ಯರು ಸಂಕಷ್ಟ ಅನುಭವಿಸುತ್ತಿದ್ದಾರೆ. ಸರ್ಕಾರಿ ಕಚೇರಿಗಳಲ್ಲಿ ಚುನಾವಣೆ ಮುಗಿದ ಮೇಲೆ ಬನ್ನಿ ಎಂಬ ಮಾತೇ ಮಂತ್ರವಾಗಿದೆ. ಜನಪ್ರತಿನಿದಿಗಳು , ರಾಜಕೀಯ ನಾಯಕರು ಜನಸಾಮಾನ್ಯರ ಸಂಕಷ್ಟಗಳಿಗೆ ಕಿವಿಗೂಡಲು ಸಾದ್ಯವಾಗದಷ್ಟು ಚುನಾವಣಾ ಓಡಾಟದಲ್ಲಿ ತಲ್ಲೀನರಾಗಿದ್ದಾರೆಂದು ಜನ ವಿರೋದಿ ರಾಜಕೀಯ ವ್ಯಕ್ತಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಮುಳಬಾಗಿಲು

ಚುನಾವಣಾ ನೀತಿ ಸಂಹಿತೆ ಸಡಿಲಗೊಳಿಸಿ ಜನಸೇವಾ ಸಮಸ್ಯೆಗಳಿಗೆ ಆಯೋಗ ಕೃಪೆ ತೋರಲಿ ಎಂದು ರೈತ ಸಂಘದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಪತ್ರಿಕಾ ಹೇಳಿಕೆ ಮೂಲಕ ಚುನಾವಣಾ ಅಧಿಕಾರಿಗಳನ್ನು ಒತ್ತಾಯಿಸಿದರು.

ನಗರದ ಹೊರವಲಯದ ಎಪಿಎಂಸಿ ಕಚೇರಿ ಆವರಣದಲ್ಲಿ ಮಾತನಾಡಿದ ಅವರು, ಸುದೀರ್ಘ ೮೦ ದಿನಗಳ ಲೋಕಸಭಾ ಚುನಾವಣಾ ಸಡಗರ ಸಂಭ್ರಮದಿಂದ ಕರ್ನಾಟಕದಲ್ಲಿ ಎರಡನೇ ಹಂತದ ಮತದಾನ ಶಾಂತಿಯುತವಾಗಿ ಪೂರೈಸಿದ್ದು, ಬೇರೆ ರಾಜ್ಯಗಳ ಚುನಾವಣಾ ಮತದಾನದ ನೆಪದಲ್ಲಿ ಜೂ.೪ ರವರೆಗೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಜನಸಾಮಾನ್ಯರ ಕೆಲಸ- ಕಾರ್ಯಗಳಿಗೆ ತೊಂದರೆ ಆಗುತ್ತಿದೆ, ಮತಯಂತ್ರಗಳ ವ್ಯಾಪ್ತಿ ಬಿಟ್ಟು ಬೇರೆ ಕಡೆ ನೀತಿ ಸಂಹಿತೆ ಸಡಿಲಗೊಳಿಸಿ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಬೇಕೆಂದು ಒತ್ತಾಯಿಸಿದರು.

ಒಂದು ಕಡೆ ಬರ, ಮತ್ತೊಂದೆಡೆ ಬೆಳೆ ನಷ್ಟದಿಂದ ತತ್ತರಿಸಿರುವ ಗ್ರಾಮೀಣ ಪ್ರದೇಶದ ರೈತರು, ಕೂಲಿಕಾರ್ಮಿಕರ ಬದುಕು ಬೀದಿಗೆ ಬಂದಾಂತಾಗಿದೆ. ಕುಡಿಯುವ ನೀರು, ಜಾನುವಾರುಗಳಿಗೆ ಮೇವಿನ ಸಮಸ್ಯೆ ಒಂದೆಡೆಯಾದರೆ, ಮತ್ತೊಂದೆಡೆ ಮುಂಗಾರುಮಳೆ, ಆರ್ಭಟದ ಅಲಿಕಲ್ಲುಮಳೆ, ಬಿರುಗಾಳಿಗೆ ಲಕ್ಷಾಂತರ ರೈತರ ಬದುಕು ಗಾಳಿಯಲ್ಲಿ ತೇಲಾಡುತ್ತಿದೆ. ಇಂತಹ ಸಮಸ್ಯೆಗಳ ಬಗ್ಗೆ ಜಿಲ್ಲಾಡಳಿತ, ತಾಲೂಕಾಡಳಿತದ ಗಮನಕ್ಕೆ ತರಲು ಕಚೇರಿಗೆ ಹೋದರೆ ನೀತಿ ಸಂಹಿತೆ ನೆಪದಲ್ಲಿ ರೈತರ, ಕೂಲಿ ಕಾರ್ಮಿಕರ ನೆರಳು ಸಹ ಕಚೇರಿಯ ಒಳಗಡೆ ಬೀಳದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈಗಾಗಲೇ ಎರಡು ತಿಂಗಳಲ್ಲಿ ನಿರ್ದಿಷ್ಟ ಸರ್ಕಾರಿ ಸೇವೆಗಳು ಲಭ್ಯವಾಗದೇ ಜನಸಾಮಾನ್ಯರು ಸಂಕಷ್ಟ ಅನುಭವಿಸುತ್ತಿದ್ದಾರೆ. ಸರ್ಕಾರಿ ಕಚೇರಿಗಳಲ್ಲಿ ಚುನಾವಣೆ ಮುಗಿದ ಮೇಲೆ ಬನ್ನಿ ಎಂಬ ಮಾತೇ ಮಂತ್ರವಾಗಿದೆ. ಜನಪ್ರತಿನಿದಿಗಳು , ರಾಜಕೀಯ ನಾಯಕರು ಜನಸಾಮಾನ್ಯರ ಸಂಕಷ್ಟಗಳಿಗೆ ಕಿವಿಗೂಡಲು ಸಾದ್ಯವಾಗದಷ್ಟು ಚುನಾವಣಾ ಓಡಾಟದಲ್ಲಿ ತಲ್ಲೀನರಾಗಿದ್ದಾರೆಂದು ಜನ ವಿರೋದಿ ರಾಜಕೀಯ ವ್ಯಕ್ತಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಮಹಿಳಾ ಜಿಲ್ಲಾದ್ಯಾಕ್ಷೆ ನಳಿನಿಗೌಡ ಮಾತನಾಡಿ, ಜಿಲ್ಲೆಯ ರೈತರ ಹತ್ತಾರು ವರ್ಷಗಳ ಬಹುಮುಖ್ಯ ಸಮಸ್ಯೆಯಾದ ಟೊಮೋಟೋ ಮಾರುಕಟ್ಟೆಯ ಅಭಿವೃದ್ಧಿಗೆ ಅವಶ್ಯಕತೆಯಿರುವ ಜಮೀನು ಈಗಾಗಲೇ ಚೆಲುವನಹಳ್ಳಿಯ ಸರ್ವೇ ನಂ.೭೩ ರಲ್ಲಿನ ೪೩ ಎಕರೆ ೨೦ ಗುಂಟೆ ಜಮೀನು ಲಭ್ಯವಿದ್ದು, ಮಾನ್ಯ ಜಿಲ್ಲಾಧಿಕಾರಿಗಳು ಸ್ಥಳ ಪರೀಶೀಲಿಸಿ, ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಟೊಮೋಟೊ ಬೆಳೆಗಾರರ ರಕ್ಷಣೆಗೆ ಆದಷ್ಟೂ ಬೇಗ ನಿರ್ಣಯ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ತಾಲೂಕಾಧ್ಯಕ್ಷ ಯಲುವಳ್ಳಿ ಪ್ರಭಾಕರ್, ರಾಜ್ಯ ಮುಖಂಡ ಮರಗಲ್ ಶ್ರೀನಿವಾಸ್, ಈಕಂಬಳ್ಳಿ ಮಂಜುನಾಥ್, ಪಾರುಕ್‌ಪಾಷ, ಬಂಗಾರಿ ಮಂಜು, ರಾಜೇಶ್, ವಿಜಯ್‌ಪಾಲ್, ಜುಬೇರ್‌ಪಾಷ, ಶ್ರೀನಿವಾಸ್, ವಿಶ್ವ, ಸುನಿಲ್‌ಕುಮಾರ್, ಭಾಸ್ಕರ್, ಆನಂದ್‌ರೆಡ್ಡಿ, ಆಂಬ್ಲಿಕಲ್ ಮಂಜುನಾಥ್, ಶೈಲಜ, ನಾಗರತ್ನ, ರಾಧ, ಸುಗುಣ, ಚಂದ್ರಪ್ಪ, ಗಿರೀಶ್ ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ