ಆಲಮೇಲ: ತಾಲೂಕು ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ.ಯಡ್ರಾಮಿ ಮಂಗಳವಾರ ಪರಿಷತ್ತಿನ ಕಾರ್ಯಾಲಯದಲ್ಲಿ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಕಸಾಪ ಅಧ್ಯಕ್ಷ ಶಿವಶರಣ ಗುಂದಗಿ, ಗೌರವ ಕಾರ್ಯದರ್ಶಿ ಶ್ರೀಶೈಲ ಮಠಪತಿ, ಕ್ಷೇತ್ರ ಸಮನ್ವಯಾಧಿಕಾರಿ ಐ.ಎಸ್.ಟಕ್ಕೆ, ಶಿಕ್ಷಣ ಸಂಯೋಜಕ ಎಂ.ಪಿ.ಭಿಸೆ, ಮುಖ್ಯಗುರುಗಳಾದ ಎಸ್.ಬಿ.ಪಡಶೆಟ್ಟಿ, ಡಿ.ಎಮ್.ಮಾವೂರ, ರವಿ ಹೊಸಮನಿ, ಗಿರೀಶ ಗತಾಟೆ, ಡಾ.ಸಮೀರ ಹಾದಿಮನಿ, ಶೈಲಶ್ರೀ ಯಡ್ರಾಮಿ, ಸಿ.ಆರ್.ಪಿಗಳಾದ ಡಿ.ಡಿ.ಮುಲ್ಲಾ, ನಂದಿಕೋಲ, ಅಲ್ಲಾವುದ್ದೀನ ಮರ್ತೂರ ಮುಂತಾದವರು ಉಪಸ್ಥಿತರಿದ್ದರು.