ರಿಲೀಸ್‌: ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ನೀಡಿ: ಸಾಗರ

ಸಂವಿಧಾನ ಉಳಿವಿಗಾಗಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ

KannadaprabhaNewsNetwork | Published : Apr 27, 2024 7:54 PM IST

ಕನ್ನಡಪ್ರಭ ವಾರ್ತೆ ಸುರಪುರಇಂಡಿಯಾ ಒಕ್ಕೂಟದ ಕಾಂಗ್ರೆಸ್ ಪಕ್ಷಕ್ಕೆ ದಲಿತ ಸಂಘಟನೆಗಳು ಬೆಂಬಲ ನೀಡುತ್ತವೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ(ಡಿಎಸ್‌ಎಸ್‌) ರಾಜ್ಯ ಸಂಚಾಲಕ ಡಾ. ಡಿ.ಜಿ. ಸಾಗರ್ ಹೇಳಿದರು.

ನಗರದ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಸಭಾಂಗಣದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘಟನೆಯ ರಾಜ್ಯ ಸಮಿತಿ ಆದೇಶದ ಮೇರೆಗೆ ಜಿಲ್ಲಾ ಸಮಿತಿಯಿಂದ ಸುರಪುರ ತಾಲೂಕಿನ ಉಪ ಚುನಾವಣೆ ಹಾಗೂ ಲೋಕಸಭೆ ಚುನಾವಣಾ ಅಂಗವಾಗಿ ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಸಂವಿಧಾನ ಉಳಿವಿಗಾಗಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸುತ್ತೇವೆ ಎಂದರು.

ಬಿಜೆಪಿಯವರು ಸದಾ ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಮತ ಪಡೆವರಿಗೆ ತೊಂದರೆ ಕೊಡುವುದೇ ಕಾಯಕ. ಯುವಕರಿಗೆ ಉದ್ಯೋಗ, ಮಹಿಳೆಯರಿಗೆ ಸುರಕ್ಷತೆ, ಕಪ್ಪು ಹಣ ತರುವಲ್ಲಿ ಸಂಪೂರ್ಣ ವಿಫಲವಾಗಿದೆ. ದೇಶದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ಬಿಜೆಪಿ ಸಂವಿಧಾನ ಅನುಸಾರ ಆಡಳಿತ ನಡೆಸುತ್ತಿಲ್ಲ. ಹುದ್ದೆಗಳನ್ನು ಸೃಜಿಸುವುದನ್ನು ಬಿಟ್ಟು ಇರುವ ಹುದ್ದೆಗಳನ್ನು ಖಾಸಗೀಕರಣ ಮಾಡಿದೆ. ಮೀಸಲಾತಿಯನ್ನು ಜನಸಂಖ್ಯೆಗೆ ಅನುಗುಣವಾಗಿ ನೀಡುತ್ತಿಲ್ಲ. ಸಂವಿಧಾನ ಬದಲಾವಣೆ ಮಾಡುವ ಮಾತನ್ನೇ ಬಿಜೆಪಿ ನಾಯಕರು ಮಾತನಾಡುತ್ತಾರೆ. ಅವರಿಗೆ ತಕ್ಕ ಪಾಠ ನಡೆಸಬೇಕು ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಜಾತ್ಯತೀತ, ಸಮಾಜವಾದಿಯನ್ನು ಸಂವಿಧಾನದಿಂದ ತೆಗೆದು ಹಾಕುವ ಹುನ್ನಾರ ನಡೆದಿದೆ. ಒಂದು ಮತ ಒಂದು ಸರಕಾರ ತಂದು ಅಧ್ಯಕ್ಷೀಯ ಆಡಳಿತ ಜಾರಿಗೊಳಿಸಿ ಸರ್ವಾಧಿಕರಣ ಧೋರಣೆಯ ಆಡಳಿತ ಮರುಸ್ಥಾಪಿಸಲು ಬಲೆ ಬೀಸುತ್ತಿದ್ದಾರೆ ಎಂದು ಟೀಕಿಸಿದರು.

ಇದೇ ವೇಳೆ ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜಾ ಕುಮಾರ ನಾಯಕ ಮಾತನಾಡಿದರು. ಜಿಲ್ಲಾ ಸಂಚಾಲಕ ಶಿವಪುತ್ರ ಜವಳಿ, ಶಿವಲಿಂಗ ಹಸನಾಪುರ, ಶಿವಕುಮಾರ ತಳವಾರ, ಚಂದಪ್ಪ ಮುನೆಪ್ಪನೋರ್, ಮಲ್ಲಿಕಾರ್ಜುನ ಹೊಸಮನಿ, ತಿಪ್ಪಣ್ಣ ಶೆಳ್ಳಗಿ, ವೀರಭದ್ರಪ್ಪ ತಳವಾರಗೇರ, ಶೇಖರ್ ಮಂಗಳೂರು, ಎಂ.ಪಟೇಲ್, ಖಾಜಾ ಅಜ್ಮೀರ್, ಚನ್ನಬಸಪ್ಪ ದೇವಾಪುರ, ಭೀಮರಾಯ ಮಂಗಳೂರು, ರಾಜು ಬಡಿಗೇರ, ಸಾಯಬಣ್ಣ ಸದಬ, ಹಣಮಂತ ರತ್ತಾಳ, ಚಂದ್ರಶೇಖರ ಬಲಶೆಟ್ಟಿಹಾಳ, ಚೌಡಪ್ಪ ಯಡಹಳ್ಳಿ, ಯಲ್ಲಪ್ಪ ಗುಂಡಲಗೇರಾ ಇದ್ದರು.

Share this article