ಸಾಸಿವೆಹಳ್ಳಿ ಏತ ನೀರಾವರಿಯಿಂದ ಸೂಳೆಕೆರೆಗೆ ನೀರು ಹರಿಸಿ

KannadaprabhaNewsNetwork |  
Published : Aug 12, 2026, 02:00 AM IST
ಸೂಳೆಕೆರೆಗೆ ಸಾಸಿವೆಹಳ್ಳಿ ಏತನೀರಾವರಿ ಯೋಜನೆಯಿಂದ ನೀರು ಹರಿಸುವಂತೆ ಒತ್ತಾಯಿಸಿ ತಹಶೀಲ್ದಾರರಿಗೆ ಮನವಿ ಸಲ್ಲಿಸುತ್ತೀರುವ ರೈತ ಸಂಘದ ಕಾರ್ಯಕರ್ತರು | Kannada Prabha

ಸಾರಾಂಶ

ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಹುಚ್ಚವ್ವನಹಳ್ಳಿ ಮಂಜುನಾಥ್ ಬಣದ ರೈತ ಸಂಘದ ಕಾರ್ಯಕರ್ತರು ಸಾಸಿವೆಹಳ್ಳಿ ಏತ ನೀರಾವರಿ ಯೋಜನೆಯಡಿ ಸೂಳೆಕೆರೆ ಪಕ್ಕದಲ್ಲಿಯೇ ಸಾಸಿವೆಹಳ್ಳಿ ಏತ ನೀರಾವರಿಯ ಪೈಪ್‌ಲೈನ್ ಹಾದುಹೋಗಿದ್ದು, ಈ ಏತ ನೀರಾವರಿ ಪೈಪ್‌ಲೈನ್‌ ಮೂಲಕ ಸೂಳೆಕೆರೆಗೆ ನೀರು ಹರಿಸಬೇಕು ಎಂದು ಒತ್ತಾಯಿಸಿ ಮಂಗಳವಾರ ತಾಲೂಕು ರೈತ ಸಂಘದ ಅಧ್ಯಕ್ಷ ಎಸ್.ಆರ್. ರವಿಕುಮಾರ್ ನೇತೃತ್ವದಲ್ಲಿ ನೂರಾರು ಸಂಖ್ಯೆಯ ರೈತರು ಇಲ್ಲಿನ ತಾಲೂಕು ಕಚೇರಿಗೆ ತೆರಳಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಚನ್ನಗಿರಿ

ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಹುಚ್ಚವ್ವನಹಳ್ಳಿ ಮಂಜುನಾಥ್ ಬಣದ ರೈತ ಸಂಘದ ಕಾರ್ಯಕರ್ತರು ಸಾಸಿವೆಹಳ್ಳಿ ಏತ ನೀರಾವರಿ ಯೋಜನೆಯಡಿ ಸೂಳೆಕೆರೆ ಪಕ್ಕದಲ್ಲಿಯೇ ಸಾಸಿವೆಹಳ್ಳಿ ಏತ ನೀರಾವರಿಯ ಪೈಪ್‌ಲೈನ್ ಹಾದುಹೋಗಿದ್ದು, ಈ ಏತ ನೀರಾವರಿ ಪೈಪ್‌ಲೈನ್‌ ಮೂಲಕ ಸೂಳೆಕೆರೆಗೆ ನೀರು ಹರಿಸಬೇಕು ಎಂದು ಒತ್ತಾಯಿಸಿ ಮಂಗಳವಾರ ತಾಲೂಕು ರೈತ ಸಂಘದ ಅಧ್ಯಕ್ಷ ಎಸ್.ಆರ್. ರವಿಕುಮಾರ್ ನೇತೃತ್ವದಲ್ಲಿ ನೂರಾರು ಸಂಖ್ಯೆಯ ರೈತರು ಇಲ್ಲಿನ ತಾಲೂಕು ಕಚೇರಿಗೆ ತೆರಳಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭ ತಾಲೂಕು ರೈತ ಸಂಘದ ಅಧ್ಯಕ್ಷ ಯಲೋದಹಳ್ಳಿ ರವಿಕುಮಾರ್ ಮಾತನಾಡಿ ಸೂಳೆಕೆರೆಯಿಂದ ನೂರಾರು ಗ್ರಾಮಗಳಿಗೆ ಕುಡಿಯುವ ನೀರನ್ನು ಸರಬರಾಜು ಮಾಡುತ್ತಿರುವ ಮತ್ತು ರೈತರ ತೋಟಗಳ ಕೊಳವೆಬಾವಿಗಳ ಅಂತರ ಜಲ ಮಟ್ಟ ಹೆಚ್ಚಿಸಲು ಸೂಳೆಕೆರೆ ತುಂಬಾ ಸಹಕಾರಿಯಾಗಿದೆ. ಕೆರೆಯ ಅಚ್ಚುಕಟ್ಟು ಪ್ರದೇಶದಲ್ಲಿ ಕಬ್ಬು, ಭತ್ತ, ಅಡಿಕೆ ಇನ್ನಿತರೆ ಬೆಳೆಗಳನ್ನು ಬೆಳೆಯಲು ರೈತರು ಸೂಳೆಕೆರೆಯನ್ನೇ ನಂಬಿಕೊಂಡಿದ್ದಾರೆ ಎಂದರು.

ಈ ಕೆರೆಯು ಏಷಿಯಾ ಖಂಡದಲ್ಲಿಯೇ 2ನೇ ಅತಿ ದೊಡ್ಡ ಕೆರೆಯಾಗಿದ್ದು, ಬರಿದಾಗುತ್ತಿರುವ ಈ ಸೂಳೆಕೆರೆಗೆ ಏತನೀರಾವರಿ ಯೋಜನೆಯಿಂದ ಹತ್ತಿರದಲ್ಲಿಯೇ ಇರುವ ಪೈಪ್‌ಲೈನ್ ಮೂಲಕ ಕೆರೆಗೆ ನೀರನ್ನು ಹರಿಸಬೇಕಾಗಿದೆ. ಸಾಸಿವೆಹಳ್ಳಿ ಏತನೀರಾವರಿ ಯೋಜನೆಯನ್ನು ರೂಪಿಸುವಾಗಲೇ ಸೂಳೆಕೆರೆಗೆ ನೀರು ಹರಿಸುವ ಯೋಜನೆಯಲ್ಲಿ ಸೇರಿಕೊಂಡಿದೆ. ದಾವಣಗೆರೆ ಜಿಲ್ಲೆಯಲ್ಲಿ ಎರಡು ಜನ ಮಂತ್ರಿಗಳಿದ್ದು, ಶಾಸಕರು ಸೇರಿದಂತೆ ಸೂಳೆಕೆರೆಗೆ ನೀರು ಹರಿಸುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಸೂಳೆಕೆರೆಯಿಂದ ಚನ್ನಗಿರಿ ತಹಸೀಲ್ದಾರ್ ಕಚೇರಿಯವರೆಗೆ ಸಾವಿರಾರು ರೈತರ ಮುಖಾಂತರ ಪಾದಯಾತ್ರೆಯಲ್ಲಿ ಬಂದು ಮುಷ್ಕರ ನಡೆಸಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಯಲೋದಹಳ್ಳಿ ಪ್ರಭಾಕರ್, ಅಂಜನೇಯ, ಪೀರ್ಯ ನಾಯ್ಕ್, ಉಮೇಶ್, ಗಂಡುಗಲಿ, ಶರಣಮ್ಮ, ಬಸವರಾಜಪ್ಪ, ಮಂಜು, ಅಜಯ್ಯ, ಮೂಡಲಗಿರಿಯಪ್ಪ, ಕುಮಾರ್ ಸೇರಿದಂತೆ ಕಾರ್ಯಕರ್ತರು ಭಾಗವಹಿಸಿದ್ದರು.

- - -

-11ಕೆಸಿಎನ್ಜಿ1:

ಸೂಳೆಕೆರೆಗೆ ಸಾಸಿವೆಹಳ್ಳಿ ಏತನೀರಾವರಿ ಯೋಜನೆಯಿಂದ ನೀರು ಹರಿಸುವಂತೆ ಒತ್ತಾಯಿಸಿ ತಹಸೀಲ್ದಾರರಿಗೆ ರೈತ ಸಂಘದ ಕಾರ್ಯಕರ್ತರು ಮನವಿ ಸಲ್ಲಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತಮಿಳುನಾಡಿಗೆ ನೀರು ಹರಿಸುವಂತೆ ಆದೇಶ: ಡಿ.ಸಿ.ತಮ್ಮಣ್ಣ ತೀವ್ರ ವಿರೋಧ
ಮನೆ ದೇವರ ದರ್ಶನ ಪಡೆದ ಸಚಿವ ಚಲುವರಾಯಸ್ವಾಮಿ ದಂಪತಿ