---------ಕನ್ನಡಪ್ರಭ ವಾರ್ತೆ ಬೆಟ್ಟದಪುರತಾಲೂಕಿನ ಭಾರಿ ಮಳೆಯಿಂದ ಹಾನಿಯಾದ ಪ್ರದೇಶಗಳಿಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಮಾಜಿ ಸಚಿವ ಜಿ.ಟಿ. ದೇವೇಗೌಡ ಹಾಗೂ ಮಾಜಿ ಶಾಸಕ ಕೆ. ಮಹದೇವ್ ಬುಧವಾರ ಭೇಟಿ ರೈತರಿಗೆ ಸಾಂತ್ವನ ಹೇಳಿ, ಪಕ್ಷದ ವತಿಯಿಂದ ಪರಿಹಾರ ನೀಡಿದರು.ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಸಮೀಪದ ಹಾರನಹಳ್ಳಿ, ಚಪ್ಪರದಹಳ್ಳಿ, ಗೋರಹಳ್ಳಿ, ಅಂಬಲಾರೆ ಗ್ರಾಮಗಳಲ್ಲಿ ಸೋಮವಾರ ಬಿದ್ದ ಭಾರಿ ಮಳೆಗೆ ಅಪಾರ ಪ್ರಮಾಣದ ಕೆರೆಕಟ್ಟೆಗಳು ಒಡೆದು ಹಲವಾರು ಬೆಳೆಗಳು ನಾಶವಾಗಿದ್ದರ ಹಿನ್ನೆಲೆ ಬುಧವಾರ ಭೇಟಿ ನೀಡಿ ರೈತರ ಜಮೀನಿಗೆ ಬೆಳೆ ಹಾನಿಯಾಗಿದ್ದ ಪ್ರದೇಶಗಳಿಗೆ, ಗ್ರಾಮಗಳಿಗೆ ಭೇಟಿ ನೀಡಿ ರೈತರ ಅಹವಾಲು ಸ್ವೀಕರಿಸಿದರು.ನಂತರ ಅವರು ಮಾತನಾಡಿ, ರಾಜ್ಯದಲ್ಲಿ ಒಂದು ವರ್ಷ ಬರಗಾಲ ತಾಂಡವಾಡಿದ್ದು, ಅಲ್ಲದೆ ಇದೀಗ ಭಾರಿ ಮಳೆಯಿಂದ ರೈತರು ಬೆಳೆದ ಬೆಳೆಗಳು ಕೊಚ್ಚಿ ಹೋಗಿದ್ದು, ಹಲವಾರು ರಸ್ತೆಗಳು ಹಾಳಾಗಿದೆ ಇದರಿಂದ ರೈತರಿಗೆ ತೊಂದರೆಯಾಗಿದ್ದು, ರೈತರು ಬಹಳ ಸಂಕಷ್ಟದಲ್ಲಿದ್ದು ಬರಗಾಲದ ಜೊತೆಗೆ ಅತಿವೃಷ್ಟಿಯೂ ಸಹ ಹೆಚ್ಚಾಗಿದ್ದು, ಪ್ರತಿದಿನ ಸುರಿಯುತ್ತಿರುವ ಮಳೆಗೆ ಸಾವಿರಾರು ಎಕರೆ ತಂಬಾಕು, ಶುಂಠಿ, ರಾಗಿ, ಜೋಳ ಕೊಚ್ಚಿಹೋಗಿದೆ. ರೈತರು ಮತ್ತೆ ವ್ಯವಸಾಯ ಆರಂಭಿಸಬೇಕಾದರೆ ರೈತರಿಗೆ ಹಣ ಮತ್ತು ಮನೆ ಕಳೆದುಕೊಂಡ ರೈತರಿಗೆ ಮನೆಗಳನ್ನು ಕಟ್ಟಿಕೊಡುವ ಕೆಲಸವನ್ನು ಸರ್ಕಾರ ಕೂಡಲೇ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.ರೈತ ಮಹಿಳೆಯೊಬ್ಬರು ಸುಮಾರು 6 ಎಕರೆ ತಂಬಾಕು ನಾಟಿ ಮಾಡಿ, 7 ಲಕ್ಷ ರು. ನಷ್ಟವಾಗಿದೆ ಎಂದು ತಮ್ಮ ಅಳಲು ತೋಡಿಕೊಂಡರು. ಆ ಮಹಿಳೆಗೆ ಜೆಡಿಎಸ್ ನಿಂದ 50 ಸಾವಿರ ರು. ಗಳನ್ನು ಪರಿಹಾರ ನೀಡಿದರು.ಶಾಸಕ ಜಿ.ಟಿ. ದೇವೇಗೌಡ ಹಾಗೂ ಮಾಜಿ ಶಾಸಕ ಕೆ. ಮಹದೇವ್ ಮಾತನಾಡಿದರು.ಬಿಜೆಪಿ ತಾಲೂಕು ಅಧ್ಯಕ್ಷ ರಾಜೇಂದ್ರ, ಮುಖಂಡರಾದ ರಾಜೇಗೌಡ, ಆರ್.ಟಿ. ಸತೀಶ್, ಜೆಡಿಎಸ್ ತಾಲೂಕು ಅಧ್ಯಕ್ಷ ಅಣ್ಣಯ್ಯಶೆಟ್ಟಿ, ವಿದ್ಯಾಶಂಕರ್, ತಾಪಂ ಮಾಜಿ ಸದಸ್ಯ ಶಂಕರೇಗೌಡ, ಚಪ್ಪರದಹಳ್ಳಿ ಗ್ರಾಮದ ಮಾಜಿ ಅಧ್ಯಕ್ಷ ಸುರೇಶ್, ವೆಂಕಟೇಶ್, ದೇವೇಗೌಡ, ಕಣಗಾಲು, ಗ್ರಾಪಂ ಮಾಜಿ ಅಧ್ಯಕ್ಷ ಮಹದೇವ್, ತಾಪಂ ಮಾಜಿ ಸದಸ್ಯ ಅತರ್ ಮತ್ತಿನ್, ಸೈಯದ್ ಅಕ್ಟರ್ ಇದ್ದರು.