ಕ್ರೀಡೆಯಲ್ಲಿ ಭಾಗಿಯಾಗಿ ಒತ್ತಡ ನಿವಾರಿಸಿಕೊಳ್ಳಿ: ಕೃಷ್ಣವೇಣಿ

KannadaprabhaNewsNetwork |  
Published : Oct 28, 2025, 12:18 AM IST
ಚಾಮರಾಜನಗರ-ಕೊಳ್ಳೇಗಾಲ ತಂಡ ಚಾಂಪಿಯನ್ | Kannada Prabha

ಸಾರಾಂಶ

ಮೈಸೂರು ವಿಭಾಗೀಯ ಮಟ್ಟದ ಟೆನ್ನಿಸ್‌ ಬಾಲ್ ಕ್ರಿಕೆಟ್ ಪಂದ್ಯಾವಳಿ -೨೦೨೫ ರಲ್ಲಿ ಚಾಮರಾಜನಗರ-ಕೊಳ್ಳೇಗಾಲ ತಂಡ ಚಾಂಪಿಯನ್ ಆಗಿದೆ.

ಕನ್ನಡಪ್ರಭ ವಾರ್ತೆ, ಚಾಮರಾಜನಗರ

ಮೈಸೂರು ವಿಭಾಗೀಯ ಮಟ್ಟದ ಟೆನ್ನಿಸ್‌ ಬಾಲ್ ಕ್ರಿಕೆಟ್ ಪಂದ್ಯಾವಳಿ -೨೦೨೫ ರಲ್ಲಿ ಚಾಮರಾಜನಗರ-ಕೊಳ್ಳೇಗಾಲ ತಂಡ ಚಾಂಪಿಯನ್ ಆಗಿದೆ.

ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಭಾರತೀಯ ಜೀವವಿಮಾ ಕ್ರೀಡಾಕೂಟ, ಮೈಸೂರು ವತಿಯಿಂದ ಮೈಸೂರು ವಿಭಾಗದ ವಿಭಾಗೀಯ ಮಟ್ಟದ ಟೆನ್ನಿಸ್‌ಬಾಲ್ ಕ್ರಿಕೆಟ್ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಚಾಮರಾಜನಗರ-ಕೊಳ್ಳೇಗಾಲ ತಂಡ ಮೈಸೂರು ವಿಭಾಗೀಯ ಕಚೇರಿಯ ತಂಡದ ವಿರುದ್ದ ೧೦ ರನ್‌ಗಳ ರೋಚಕ ಜಯಗಳಿಸುವ ಮೂಲಕ ಪ್ರಶಸ್ತಿ ಮುಡಿಗೇರಿಸಿಕೊಂಡರು.

ಮೊದಲು ಬ್ಯಾಟಿಂಗ್ ನಡೆಸಿ ಚಾಮರಾಜನಗರ-ಕೊಳ್ಳೇಗಾಲ ತಂಡ ಸಿದ್ದು, ಹರೀಶ್‌ರವರ ಉತ್ತಮ ಬ್ಯಾಟಿಂಗ್ ನೆರವಿನಿಂದ ನಿಗಧಿತ ೬ ಓವರ್‌ಗಳಲ್ಲಿ ೫೭ ರನ್ ಗಳಿಸಿತು. ನಂತರ ಬ್ಯಾಟಿಂಗ್ ನಡೆಸಿದ ಮೈಸೂರು ವಿಭಾಗೀಯ ತಂಡ ೬ ಒವರ್‌ಗಳಲ್ಲಿ ೪೭ ರನ್ ಗಳಿಸಲಷ್ಟೆ ಸಾಧ್ಯವಾಯಿತು.

ಚಾಮರಾಜನಗರ-ಕೊಳ್ಳೇಗಾಲ ತಂಡದ ಶರತ್‌ಕುಮಾರ್ ಪಂದ್ಯಾವಳಿಯಲ್ಲಿ ೧೨೩ ರನ್ ಗಳಿಸಿ ಹಾಗೂ ೫ ವಿಕೆಟ್‌ಗಳನ್ನು ಪಡೆದು ಉತ್ತಮ ಆಲ್‌ರೌಂಡ್ ಆಟಕ್ಕಾಗಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರೆ, ಹರೀಶ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು ಹಾಗೂ ಲೋಕೇಶ್ ಸರಣಿಯಲ್ಲಿ ೫ ವಿಕೆಟ್ ಪಡೆದು ಉತ್ತಮ ಬೌಲರ್ ಪ್ರಶಸ್ತಿ ಪಡೆದರು.

ಎಲ್‌ಐಸಿ ಸೀನಿಯರ್ ಡಿವಿಜಿನಲ್ ಮ್ಯಾನೇಜರ್ ಎಂ.ಕೃಷ್ಣವೇಣಿ ಮಾತನಾಡಿ, ನಮ್ಮ ಸಂಸ್ಥೆಯ ನೌಕರರು ಪ್ರತಿ ದಿವಸ ಒತ್ತಡದಿಂದ ಕರ್ತವ್ಯ ನಿರ್ವಹಿಸುತ್ತಾ ಬರುತ್ತಿದ್ದು, ಜೀವನದಲ್ಲಿ ಜಂಜಾಟದಿಂದ ಹೊರಬರಲು ಕ್ರೀಡಾಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿರುವುದು ತುಂಬಾ ಸಂತೋಷ. ಹಾಗೆಯೇ ಮುಂದೆಯೂ ಸಹ ವಿವಿಧ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಬದುಕಿನ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬೇಕು. ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ. ಕ್ರೀಡಾ ಮನೋಭಾವ ಮುಖ್ಯ. ಪಂದ್ಯದಲ್ಲಿ ಒಂದು ತಂಡವಾಗಿ ಆಡಿದಾಗ ಗೆಲುವು ಸಾಧ್ಯ ಎಂಬುದನ್ನು ಇಲ್ಲಿ ನಿರೂಪಿಸಿದ್ದೀರಿ. ಸದಾ ಒತ್ತಡದಲ್ಲಿರುವ ನೌಕರರು ವರ್ಷಕ್ಕೊಮ್ಮೆಯಾದರೂ ಈ ರೀತಿ ಇಡೀ ಒಂದು ದಿನ ಬೆರತು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಜೀವನದ ಜಂಜಾಟ ಮರೆಯಬೇಕು ಎಂದು ಕರೆ ನೀಡಿದರು.

ಎಲ್‌ಐಸಿಯ ಪಿಅಂಡ್‌ಐಆರ್ ಮ್ಯಾನೇಜರ್ ಜಯರಾಮ್ ನೆಲ್ಲಿತಾಯ ಮಾತನಾಡಿ, ಜೀವ ವಿಮಾ ನೌಕರರು ತಮ್ಮೆಲ್ಲಾ ಜಂಜಾಟಗಳನ್ನು ಮರೆತು ಎರಡು ದಿನಗಳ ಕಾಲ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಲ್ಗೊಂಡು ಉತ್ತಮವಾಗಿ ಆಟವಾಡುವ ಮೂಲಕ ನಮ್ಮೆಲ್ಲರಿಗೂ ಮನರಂಜನೆ ನೀಡಿದ್ದೀರಿ. ಇಲ್ಲಿ ಒಂದು ತಂಡವು ಗೆದ್ದಿದ್ದರೂ, ಸೋತ ತಂಡವು ಸಹ ಕ್ರೀಡಾ ಸ್ಫೂರ್ತಿ ಮೆರೆದಿದೆ ಇದಕ್ಕಾಗಿ ಅವರಿಗೆ ಅಭಿನಂದನೆಗಳು ಎಂದು ಶ್ಲಾಘಿಸಿದರು.

ಭಾರತೀಯ ಜೀವ ವಿಮಾ ನಿಗಮದ ಮೈಸೂರು ವಿಭಾಗದ ಮಾರ್ಕೆಟಿಂಗ್ ಮ್ಯಾನೇಜರ್ ಎನ್. ಜೀವನ್‌ಕುಮಾರ್ ಅವರು ಮಾತನಾಡಿ, ಯಾವುದೇ ಕ್ರೀಡೆಯಲ್ಲಿ ಸೋಲು ಗೆಲುವು ಸಾಮಾನ್ಯ. ಆದರೆ ನಾವು ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ. ಈ ಪಂದ್ಯಾವಳಿಯಲ್ಲಿ ಎಲ್ಲಾ ತಂಡಗಳು ಕ್ರೀಡಾ ಮನೋಭಾವದಿಂದ ಪಾಲ್ಗೊಂಡು ಉತ್ತಮ ಪ್ರದರ್ಶನ ನೀಡಿದ್ದೀರಿ. ಮುಂಬರುವ ವರ್ಷಗಳಲ್ಲಿ ಇದೇ ರೀತಿ ಕ್ರೀಡೆಗಳಲ್ಲಿ ಪಾಲ್ಗೊಂಡಲ್ಲಿ ಲೌಖಿಕ ವ್ಯವಹಾರದಿಂದ ಹೊರಬರಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.ಈ ಸಮಯದಲ್ಲಿ ವಿಭಾಗೀಯ ಕಚೇರಿ ವ್ಯವಸ್ಥಾಪಕ ಮಂಜುನಾಥ್, ಎಲ್‌ಐಸಿಯ ಆಲ್‌ಇಂಡಿಯಾ ಸ್ಪೋರ್ಟ್ಸ್ ಪ್ರಮೋಷನ್ ಸದಸ್ಯ ಸುರೇಶ್, ಮೈಸೂರು ಭಾರತೀಯ ಜೀವ ವಿಮಾ ಕ್ರೀಡಾಕೂಟ ಕಾರ್ಯದರ್ಶಿ ಎಸ್. ಸತೀಶ್ ಸೇರಿದಂತೆ ಎಲ್ಲಾ ಶಾಖೆಗಳ ಕ್ರೀಡಾಪಟುಗಳು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು