ಸರ್ವಧರ್ಮ ಸಮ್ಮೆಳನ
ಕನ್ನಡಪ್ರಭ ವಾರ್ತೆ ಕೊಪ್ಪಧಾರ್ಮಿಕ ಕೇಂದ್ರಗಳು ಶ್ರದ್ಧಾಕೇಂದ್ರಗಳಾಗಬೇಕು. ಸಹಬಾಳ್ವೆ, ಸಮನ್ವಯತೆ ಸಂಸ್ಕೃತಿ ಭಾಗವಾಗಿದೆ, ಅನಗತ್ಯ ವಿಚಾರಗಳಲ್ಲಿ ಪಾಲ್ಗೊಳ್ಳುವ ಬದಲು ನಮ್ಮನ್ನು ನಾವೇ ಪ್ರಶ್ನಿಸಿಕೊಂಡು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕೆಂದು ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ ತಿಳಿಸಿದರು.
ಕುದುರೆಗುಂಡಿ ಹಜ್ರತ್ ಸೈಯದ್ ಸಾದತ್ ಷರೀಫುಲ್ ಔಲಿಯಾ ದರ್ಗಾ ಆವರಣದಲ್ಲಿ ನಡೆದ ಸರ್ವಧರ್ಮ ಸಮ್ಮೆಳನದಲ್ಲಿ ಮಾತನಾಡಿ ಊರಿನ ಏಳಿಗೆ, ಸಮಸ್ಯೆಗಳ ಬಗ್ಗೆ ಮಾತನಾಡುವುದಿದ್ದರೆ ಕ್ಷೇತ್ರದ ಶಾಸಕರೊಂದಿಗೆ ನನ್ನ ಕಚೇರಿಗೆ ಬನ್ನಿ ಕುಳಿತು ಮಾತನಾಡಿ ಪರಿಹಾರ ಕಂಡುಕೊಳ್ಳೊಣ ಎಂದರು.ಶಾಸಕ ಟಿ.ಡಿ. ರಾಜೇಗೌಡ ಮಾತನಾಡಿ ನನ್ನ ಕ್ಷೇತ್ರದಲ್ಲಿ ಮಸೀದಿ, ಮಂದಿರ ಹಾಗೂ ಚರ್ಚ್ಗಳಲ್ಲಿ ಬೇಡಿಕೆಗಳಿಗನುಗುಣವಾಗಿ ತಾರತಮ್ಯವಿಲ್ಲದೆ ಅನುದಾನ ನೀಡಿದ್ದೇನೆ. ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಕುದುರೆಗುಂಡಿ ಮಸೀದಿಗೆ ಅನುದಾನ ನೀಡುವ ಬಗ್ಗೆ ಮನವಿ ನೀಡಿದ್ದು ಸರ್ಕಾರದೊಂದಿಗೆ ಚರ್ಚಿಸಿ ಮುಂದಿನ ದಿನಗಳಲ್ಲಿ ಅನುದಾನ ನೀಡುವ ಭರವಸೆ ನೀಡಿದರು.
ಮಾಸ್ಟರ್ ಎಜುಕೇಶನಲ್ ಅಂಡ್ ಚಾರಿಟಿ ಮುಖ್ಯಸ್ಥ ಹಾಫೀಝ್ ಮಹಮ್ಮದ್ ಸುಫ್ಯಾನ್ ಸಖಾಫಿ, ಮಾತನಾಡಿ ಎಲ್ಲಾ ಧರ್ಮಗಳು ಶಾಂತಿಯನ್ನೇ ಬೋಧಿಸಿವೆ. ಯಾವುದೇ ಧರ್ಮಗ್ರಂಥಗಳು ಹಿಂಸೆ ಬೋಧಿಸಿಲ್ಲ. ಉಗ್ರವಾದದ ನಡೆ ಖಂಡನೀಯ ಎಂದರು. ದರ್ಗಾ ಷರೀಫ್‌ನ ೯೫ನೇ ವಾರ್ಷಿಕ ಉರೂಸ್ ಕಾರ್ಯಕ್ರಮದ ಕೊನೆಯ ದಿನ ಭಾನುವಾರ ಬೆಳಿಗ್ಗೆ ೧೦.೩೦ ಕ್ಕೆ ಕುದುರೆಗುಂಡಿ ಬದ್ರಿಯಾ ಜುಮ್ಮಾ ಮಸೀದಿ ಖತೀಬರಾದ ಜಮಾಲುದ್ದೀನ್ ಅಹ್ ಸನಿ ನೇತೃತ್ವದಲ್ಲಿ ಮೌಲೀದ್ ಮಜೀಸ್, ಸಂಜೆ ೭ಕ್ಕೆ ದಫ್ ಕಾರ್ಯಕ್ರಮದೊಂದಿಗೆ ಪವಿತ್ರ ಸಂದಲ್ ಮೆರವಣಿಗೆ ಸರ್ವಧರ್ಮ ಸಮ್ಮೇಳನ ಮತ್ತು ಧಾರ್ಮಿಕ ಪ್ರವಚನ ಸಂಪನ್ನಗೊಂಡಿತು.ಉತ್ತಮೇಶ್ವರ ವೀರಭದ್ರ ಮಹಾಸಂಸ್ಥಾನ ಮಠದ ಡಾ. ವೆಂಕಟೇಶ್ ಗುರೂಜಿ, ನರಸಿಂಹರಾಜಪುರ ಸೆಂಟ್ ಜಾರ್ಜ್ ಜಾಕೋಬೈಟ್ ಸಿರಿಯನ್ ಓರ್ಥೋಡೋಕ್ಸ್ ಕೆಥೆಡ್ರಲ್ ಚರ್ಚ್ನ ಧರ್ಮಗುರು ರೇ. ಫಾ. ಎ.ಜೆ.ಜಾರ್ಜ್ ರ್ಕೋ- ಎಪ್ಪಿಸ್ಕೋಪ ಕುದುರೆಗುಂಡಿ ಬದ್ರಿಯಾ ಜುಮ್ಮಾ ಮಸೀದಿ ಅಧ್ಯಕ್ಷ ಯು.ನವಾಜ್, ಕುದುರೆಗುಂಡಿ ಜಮಾತ್‌ನ ಅಧ್ಯಕ್ಷ, ಪದಾಧಿಕಾರಿಗಳು, ಸದಸ್ಯರು, ಉರೂಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.