ಕನ್ನಡಪ್ರಭ ವಾರ್ತೆ ಟಿ. ನರಸೀಪುರ
ತಾಲೂಕಿನ ಶಂಭುದೇವನಪುರ ಗ್ರಾಮದಲ್ಲಿ ಭಾನುವಾರ ನಡೆದ ಶ್ರೀ ಶಂಭುಲಿಂಗೇಶ್ವರಸ್ವಾಮಿ ದೇವಸ್ಥಾನದ ನೂತನ ಶಿಖರ ಮತ್ತು ಕಳಸಾರೋಹಣ ಹಾಗೂ ದೇವಾಲಯ ಸಂಪ್ರೋಕ್ಷಣ ಕಾರ್ಯಕ್ರಮದ ಧಾರ್ಮಿಕ ಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಒಂದೊಂದು ದೇವಾಲಯಕ್ಕೂ ತನ್ನದೇ ಆದ ವೈಶಿಷ್ಟತೆ ಇದೆ. ಹಿಂದೆ ದೇವಾಲಯಗಳು ಕಲಾ ಪ್ರತಿಭೆಗಳನ್ನು ಭಗವಂತನಿಗೆ ಅರ್ಪಿಸುವ ಕೇಂದ್ರಗಳಾಗಿದ್ದವು. ಮನುಷ್ಯ ತಾನು ಕಲಿತ ಸಂಗೀತ, ನೃತ್ಯ ಅಥವಾ ಯಾವುದೇ ಕಲೆಯನ್ನು ಪ್ರದರ್ಶಿಸಲು ಆರಂಭಿಸುವ ರಂಗ ಪ್ರವೇಶವನ್ನು ಮೊದಲಿಗೆ ದೇವಾಲಯಗಳಲ್ಲಿ ಮಾಡುತ್ತಿದ್ದರು. ಆ ಮೂಲಕ ತಾವು ಕಲಿತ ಕಲೆಯನ್ನು ಭಗವಂತನಿಗೆ ಸಮರ್ಪಿಸುತ್ತಿದ್ದರು. ಕಲೆ ಎನ್ನುವುದು ಮನುಷ್ಯನ ಅವಿಭಾಜ್ಯ ಸಂಗತಿ. ಪ್ರತಿಭೆ ಎನ್ನುವುದು ದೇವರು ಕೊಟ್ಟಂತಹ ಒಂದು ಕೊಡುಗೆ. ಅದನ್ನು ಭಗವಂತನಿಗೆ ಸಮರ್ಪಣೆ ಮಾಡಬೇಕು ಆ ಮೂಲಕ ಆ ಕಲೆಗೆ ಶ್ರೇಷ್ಠತೆ ಬರುತ್ತದೆ ಎನ್ನುವುದು ಭಾರತೀಯ ಸಂಸ್ಕೃತಿಯಲ್ಲಿರುವ ನಂಬಿಕೆ ಎಂದರು.ಜನರಲ್ಲಿ ಯಾವುದೇ ಮನಸ್ತಾಪ ಬಂದರೂ ಅದನ್ನು ಬಗೆಹರಿಸಲು ದೇವಾಲಯಗಳಲ್ಲಿ ಜನ ಸೇರುತಿದ್ದರು. ಆ ಗೊಂದಲ, ವ್ಯತ್ಯಾಸ ಸರಿಪಡಿಸಲು ತೀರ್ಪು ನೀಡುತ್ತಿದ್ದುದು ದೇವರು ಎಂಬ ನಂಬಿಕೆ ಇತ್ತು. ಇಂತಹ ಕಾರಣಗಳಿಂದ ದೇವಾಲಯಗಳು ಬರೀ ಧಾರ್ಮಿಕ ಕೇಂದ್ರಗಳಾಗದೇ ಸಾಂಸ್ಕೃತಿಕ ಕೇಂದ್ರಗಳಾಗಿದ್ದವು ಎಂಬುದು ಧಾರ್ಮಿಕ ನಂಬಿಕೆಯಾಗಿತ್ತು. ಮನುಷ್ಯನ ಸಕಲ ಬಯಕೆಯನ್ನು ಈಡೇರಿಸುವ ಕೇಂದ್ರಗಳಾಗಿತ್ತು ಎಂಬುದು ಇಲ್ಲಿ ಪ್ರಸ್ತುತವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಭಗವಂತನಿಗೆ ನಾನಾರೂಪಗಳನ್ನು ಕೊಟ್ಟಿದ್ದರೂ ದೇವರು ಒಬ್ಬನೇ ಅದಕ್ಕೆ ಬಸವಣ್ಣನವರು ಹೇಳಿದಂತೆ ದೇವನೊಬ್ಬ ನಾಮ ಹಲವು ಎಂಬುದನ್ನು ನಾವು ತಿಳಿಯಬೇಕು. ಕಣ್ಣಿಗೆ ಕಾಣದ್ದು, ಕೈಗೆ ಸಿಗದದ್ದು ಎಂದರೆ ಭಗವಂತ. ನಮ್ಮೊಳಗೆ ಭಗವಂತನಿದ್ದಾನೆ. ಒಳ್ಳೆಯ ಕೆಲಸ ಕಾರ್ಯಗಳ ಮೂಲಕ, ಮತ್ತೊಬ್ಬರ ಭಾವನೆ, ಕಷ್ಟಕ್ಕೆ ಸ್ಪಂದಿಸುವ ಮೂಲಕ ನಮ್ಮ ಒಳಗಿನ ಪರಮಾತ್ಮನಿಗೆ ಸಂತೋಷವಾಗುವಂತೆ ನಡೆದುಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಕಾರ್ಯಕ್ರಮದ ನಂತರ ಸಾಂಸ್ಕೃತಿಕ ನಾಯಕ ಶ್ರೀಬಸವೇಶ್ವರ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಬಿ.ಎಸ್. ಸುಗಂಧರಾಜು ನಿವಾಸದಲ್ಲಿ ಸುತ್ತೂರು ಶ್ರೀಗಳಿಗೆ ಪಾದಪೂಜೆ ಹಮ್ಮಿಕೊಳ್ಳಲಾಗಿತ್ತು.
ನಿವೃತ್ತ ಹೆಚ್ಚುವರಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಎಂ. ಪುಟ್ಟಬುದ್ಧಿ, ಎಸ್.ಬಿ. ಸುಗಂಧರಾಜು, ಗೌಡ್ರು ದೊಡ್ಡೇಗೌಡರು, ಎಂ. ಗಿರೀಶ್, ನಿವೃತ್ತ ಮುಖ್ಯ ಶಿಕ್ಷಕ ಪುಟ್ಟಬುದ್ಧಿ, ನಿವೃತ್ತ ಉಪ ತಹಸೀಲ್ದಾರ್ ವಿ. ಪ್ರಭುಸ್ವಾಮಿ, ಬಸವರಾಜು, ಅಂಗಡಿ ಪುಟ್ಟಸ್ವಾಮಿ, ಪರಶಿವ, ಅಡಿಗೆ ಕಂಟ್ರ್ಯಾಕ್ಟರ್ ರಾಜೇಶ್, ಬಸವಲಿಂಗಪ್ಪ, ಸಿ. ಬಸವಣ್ಣ, ಪಿ. ನಾಗರಾಜು, ಮಹದೇವಪ್ಪ, ಗ್ರಾಪಂ ಸದಸ್ಯ ಎಸ್. ಮಹೇಶ್, ಸಾಮಿಲ್ ಮಾಲಿಕ ಎಸ್.ಎಂ. ಜಯಶಂಕರ್ ಮೂರ್ತಿ, ಗ್ರಾಪಂ ಮಾಜಿ ಅಧ್ಯಕ್ಷ ರಮೇಶ್, ಕುಮಾರ್, ಎಸ್.ಬಿ.ಟಿ. ಸುರೇಶ್, ವಕೀಲರ ಸಂಘದ ಅಧ್ಯಕ್ಷ ತೊಟ್ಟವಾಡಿ ಮಹದೇವಸ್ವಾಮಿ, ಹೋಟೆಲ್ ಕುಮಾರ್, ವಕೀಲ ಜ್ಞಾನೇಂದ್ರ ಮೂರ್ತಿ, ಜ್ಯೋತಿ ಪರಮೇಶ್ ಪಟೇಲ್, ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ರವಿ, ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಎಸ್ಎಂಆರ್ ಪ್ರಕಾಶ್, ಯುವ ಘಟಕದ ಅಧ್ಯಕ್ಷ ಅಶೋಕ್, ದೊಡ್ಡನಹುಂಡಿ ನಂಜುಂಡಸ್ವಾಮಿ, ರವೀಶ, ಎಸ್.ಬಿ. ಶಿವಪ್ರಸಾದ್, ಕಾವೇರಿಪುರ ಮಲ್ಲು, ಪುರಸಭಾ ಸದಸ್ಯ ಎಸ್.ಕೆ. ಕಿರಣ್, ಬೆನಕನಹಳ್ಳಿ ವಿಜಯಕುಮಾರ್, ಪಿಎಸಿಸಿ ಬ್ಯಾಂಕ್ ಅಧ್ಯಕ್ಷ ಮಲ್ಲಣ್ಣ, ಉಪಾಧ್ಯಕ್ಷ ಫಣೀಶ್ ಕುಮಾರ್, ಆಲ್ದೂರು ರಾಜಶೇಖರ್, ಮೂಗೂರು ಕುಮಾರಸ್ವಾಮಿ, ಕರೋಹಟ್ಟಿ ಬಸವರಾಜು ಸೇರಿದಂತೆ ಶಂಭುದೇವನಪುರ ಗ್ರಾಮದ ಸುತ್ತಮುತ್ತಲಿನ ಗ್ರಾಮಸ್ಥರು ಪಾಲ್ಗೊಂಡಿದ್ದರು.