ಕನ್ನಡಪ್ರಭ ವಾರ್ತೆ ಹಾಸನ
ಕೋಟಿ ಕೋಟಿ ಜನರ ಭಕ್ತಿಯ ಕೇಂದ್ರದ ವಿರುದ್ದ ಷಡ್ಯಂತ್ರ ನಡೆಸಲಾಗಿದೆ. ಅಪ ಪ್ರಚಾರ ಮಾಡಿದವರ ವಿರುದ್ಧ ಕ್ರಮ ಆಗಬೇಕು. ಈ ನಿಟ್ಟಿನಲ್ಲಿ ಧರ್ಮ ಉಳಿಸಲು ಕಾಂಗ್ರೆಸ್ ಪಕ್ಷ ಬದ್ಧವಾಗಿದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಧರ್ಮ ಯಾತ್ರೆಯನ್ನು ಮಾಜಿ ಎಂ.ಎಲ್.ಸಿ. ಎಂ.ಎ. ಗೋಪಾಲಸ್ವಾಮಿ ನೇತೃತ್ವದಲ್ಲಿ ನೂರಾರು ಕಾರುಗಳಲ್ಲಿ ಪ್ರಯಾಣ ಬೆಳೆಸಿದರು. ಈ ವೇಳೆ ಸಂಸದ ಶ್ರೇಯಸ್ ಪಟೇಲ್ ಶುಭ ಕೋರಿದರು.ನಂತರ ಸಂಸದರು ಮಾತನಾಡಿ, ಈ ಯಾತ್ರೆ ಹೊರಟಿದೆ. ಧರ್ಮ ಉಳಿಯಬೇಕು. ಧರ್ಮ ಉಳಿದರೆ ದೇಶ ಉಳಿಯುತ್ತದೆ. ಧರ್ಮ ಉಳಿಸಲು ಕಾಂಗ್ರೆಸ್ ಪಕ್ಷ ಬದ್ಧವಾಗಿದೆ. ಹಾಗಾಗಿ ಗೋಪಾಲಸ್ವಾಮಿ ನೇತೃತ್ವದಲ್ಲಿ ಧರ್ಮಸ್ಥಳಕ್ಕೆ ತೆರಳುತ್ತಿರುವುದು ಉತ್ತಮವಾದ ಕೆಲಸ. ಇದೇ ರೀತಿ ರಾಜ್ಯದ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿಯೂ ಕಾಂಗ್ರೆಸ್ ಮುಖಂಡರು ಧರ್ಮ ಯಾತ್ರೆ ಹಮ್ಮಿಕೊಳ್ಳುವ ಮೂಲಕ ಧರ್ಮಸ್ಥಳಕ್ಕೆ ಹಾಗೂ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರಿಗೆ ಶಕ್ತಿ ತುಂಬ ಕೆಲಸ ಮಾಡಲಿ ಎಂದರು.ವಿಧಾನಪರಿಷತ್ ಮಾಜಿ ಸದಸ್ಯ ಎಂ ಎ ಗೋಪಾಲಸ್ವಾಮಿ ಅವರು ಹಾಸನ ನಗರದ ಸಮೀಪ ಬೂವನಹಳ್ಳಿ ಬಳಿ ಮಾಧ್ಯಮದೊಂದಿಗೆ ಮಾತನಾಡಿ, ಧರ್ಮಸ್ಥಳದ ವಿರುದ್ದ ಅಪಪ್ರಚಾರ ವಿಚಾರವಾಗಿ ನಾವುಗಳು ಧರ್ಮಸ್ಥಳಕ್ಕೆ ಧರ್ಮಯಾತ್ರೆ ಮಾಡಲಾಗುತ್ತಿದೆ. ಧರ್ಮಸ್ಥಳದ ವಿರುಧ್ದ ಅಪ ಪ್ರಚಾರ ನಡೆಸಲಾಗಿದೆ. ಧರ್ಮಸ್ಥಳ ನಮ್ಮೆಲ್ಲರ ಭಕ್ತಿಯ ಕೇಂದ್ರ.ಕೋಟಿ ಕೋಟಿ ಜನರ ಭಕ್ತಿಯ ಕೇಂದ್ರದ ವಿರುದ್ದ ಷಡ್ಯಂತ್ರ ನಡೆಸಲಾಗಿದೆ. ಅಪ ಪ್ರಚಾರ ಮಾಡಿದವರ ವಿರುದ್ಧ ಕ್ರಮ ಆಗಬೇಕು ಎಂದು ಆಗ್ರಹಿಸಿದರು.
ನಮ್ಮ ಡಿಸಿಎಂ ಅವರೇ ಷಡ್ಯಂತ್ರ ಆಗಿರೊ ಬಗ್ಗೆ ಹೇಳಿದ್ದಾರೆ. ಆದರೆ ಬಿಜೆಪಿ ಇದರಲ್ಲಿ ರಾಜಕೀಯ ಮಾಡಲು ಹೊರಟಿದೆ. ನಾವು ಪಕ್ಷದ ಕಾರ್ಯಕರ್ತರಾಗಿ ಹೋಗುತ್ತಿಲ್ಲ. ಭಕ್ತರಾಗಿ ಧರ್ಮಸ್ಥಳಕ್ಕೆ ಹೊರಟಿದ್ದೇವೆ. ವೀರೇಂದ್ರ ಹೆಗ್ಗಡೆ ಅವರ ಕಾರ್ಯ ಏನೆಂದು ಜನರಿಗೆ ತಿಳಿದಿದ್ದು, ಅವರ ಜೊತೆಗೆ ನಾವಿದ್ದೇವೆ ಎಂದು ಹೇಳಲು ಈ ಪ್ರಯಾಣ ಮಾಡಲಾಗುತ್ತಿದೆ ಎಂದರು. ನಮ್ಮದು ಹಿಂದೂ ರಾಷ್ಟ್ರ. ಜಾತ್ಯತೀತವಾಗಿ ಧರ್ಮದಲ್ಲಿ ನಡೆದುಕೊಂಡು ಬರಲಾಗಿದೆ. ಈ ವೇಳೆ ಧರ್ಮಸ್ಥಳದ ಮಂಜುನಾಥ ಸ್ವಾಮಿ ಸನ್ನಿಧಾನಕ್ಕೆ ಎಲ್ಲಾರು ಹೋಗಿ ಬರುತ್ತಿದ್ದೇವೆ. ಹಲವು ವರ್ಷಗಳಿಂದ ಸೌಜನ್ಯದ ಕೇಸನ್ನು ನೋಡುತ್ತಿದ್ದು, ಎಲ್ಲೊ ಒಂದು ಕಡೆ ಅದು ತೀರ್ಮಾನ ಆಗಲೇಬೇಕು. ಇದು ಕೊನೆ ಆಗದಿದ್ದರೇ ಹೀಗೆ ನಿರಂತರವಾಗಿ ಗೊಂದಲ ಇದ್ದೆ ಇರುತ್ತದೆ. ಈ ಬಗ್ಗೆ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ರವರು ಎಸ್.ಐ.ಟಿ. ತನಿಖೆ ಮಾಡುತ್ತಿದ್ದಾರೆ. ಈ ಬಗ್ಗೆ ವಿರೋಧ ಪಕ್ಷಗಳು ಟೀಕೆ ಟಿಪ್ಪಣಿ ಮಾಡುತ್ತಿದೆ. ಈ ನಿಟ್ಟಿನಲ್ಲಿ ವೀರೇಂದ್ರ ಹೆಗ್ಗಡೆಯವರಿಗೆ ದೈರ್ಯ ತುಂಬುವ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.ಅಪಪ್ರಚಾರ ಮಾಡುವ ಮೊದಲು ತನಿಖೆ ನಡೆಸಲಿ. ಇದು ತನಿಖೆ ಆಗಬೇಕೆಂದು ವೀರೆಂದ್ರ ಹೆಗ್ಗಡೆಯವರೆ ಹೇಳಿಕೆ ಕೊಟ್ಟಿದ್ದಾರೆ. ಯಾರೇ ತಪ್ಪು ಮಾಡಿದ್ದರೂ ಅದು ತಪ್ಪೆ. ಬಿಜೆಪಿ ರಾಜಕೀಯ ಮಾಡುತ್ತಿರುವುದು ತಪ್ಪು. ಇದರಲ್ಲಿ ರಾಜಕೀಯ ಬೆರೆಸುವುದು ಬೇಡ. ಮೇಲಧಿಕಾರಿಗಳು ತನಿಖೆ ಮಾಡಿ ಸತ್ಯಾಸತ್ಯತೆ ಹೊರಬರಲಿ ಎಂದು ಒತ್ತಾಯಿಸಿದರು. ನಾನು ಒಬ್ಬ ಮಂಜುನಾಥ ಭಕ್ತನಾಗಿ ಈ ಧರ್ಮ ಯಾತ್ರೆ ಮಾಡುತ್ತಿದ್ದೇನೆ. ಎಲ್ಲೂ ಕೂಡ ರಾಜಕೀಯ ಬೆರೆಯ ಬೇಡದು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಹೇಳಿದರು.