ಭಾರತೀಯರಲ್ಲಿ ಧಾರ್ಮಿಕ ಆಚರಣೆಗೆ ಮಹತ್ವವಿದೆ

KannadaprabhaNewsNetwork |  
Published : Feb 10, 2025, 01:46 AM IST
9ಶಿರಾ1: ಶಿರಾ ತಾಲೂಕಿನ ಯಲಿಯೂರು ಗ್ರಾಮದ ತೋಟದ ತಪೆÇೀವನದಲ್ಲಿ ಶ್ರೀ ಕ್ಷೇತ್ರ ಲಕ್ಷ್ಮಿ ಪ್ರತ್ಯಂಗಿರಾ ದೇವಿ ದೇವಾಲಯ ಚಾರಿಟಬಲ್ ಟ್ರಸ್ಟ್ ವತಿಯಿಂದ ನೂತನವಾಗಿ ನಿರ್ಮಿಸಿರುವ ಭವ್ಯ ದೇವಸ್ಥಾನದಲ್ಲಿ ಶ್ರೀ ಲಕ್ಷ್ಮಿ ಪ್ರತ್ಯಂಗಿರಾ ದೇವಿ  ಪ್ರತಿಷ್ಠಾಪನಾ ಮಹೋತ್ಸವನ್ನು ಸಂಸದ ಶ್ರೀ ಯದುವೀರ್ ಕೃಷ್ಣ ದತ್ತ ಚಾಮರಾಜ ಒಡೆಯರ್ ಉದ್ಘಾಟಿಸಿದರು. | Kannada Prabha

ಸಾರಾಂಶ

ಭಾರತೀಯ ಸಂಸ್ಕೃತಿ ಪರಂಪರೆಯಲ್ಲಿ ಧಾರ್ಮಿಕ ಆಚರಣೆಗಳಿಗೆ ತನ್ನದೇ ಆದ ಮಹತ್ವ ಇದ್ದು, ನಮ್ಮ ಆಚರಣೆಗಳನ್ನು ಪರಂಪರೆಗಳನ್ನು ದೇವಸ್ಥಾನಗಳು ಸಂಸ್ಕೃತಿಯನ್ನು ಉಳಿಸಬೇಕು ಎಂದು ಮೈಸೂರು ಸಂಸದ ಶ್ರೀ ಯದುವೀರ್ ಕೃಷ್ಣ ದತ್ತ ಚಾಮರಾಜ ಒಡೆಯರ್ ಹೇಳಿದರು.

ಕನ್ನಡಪ್ರಭ ವಾರ್ತೆ ಶಿರಾ ಭಾರತೀಯ ಸಂಸ್ಕೃತಿ ಪರಂಪರೆಯಲ್ಲಿ ಧಾರ್ಮಿಕ ಆಚರಣೆಗಳಿಗೆ ತನ್ನದೇ ಆದ ಮಹತ್ವ ಇದ್ದು, ನಮ್ಮ ಆಚರಣೆಗಳನ್ನು ಪರಂಪರೆಗಳನ್ನು ದೇವಸ್ಥಾನಗಳು ಸಂಸ್ಕೃತಿಯನ್ನು ಉಳಿಸಬೇಕು ಎಂದು ಮೈಸೂರು ಸಂಸದ ಶ್ರೀ ಯದುವೀರ್ ಕೃಷ್ಣ ದತ್ತ ಚಾಮರಾಜ ಒಡೆಯರ್ ಹೇಳಿದರು. ಅವರು ಭಾನುವಾರ ತಾಲೂಕಿನ ಯಲಿಯೂರು ಗ್ರಾಮದ ತೋಟದ ತಪೋವನದಲ್ಲಿ ಶ್ರೀ ಕ್ಷೇತ್ರ ಲಕ್ಷ್ಮೀ ಪ್ರತ್ಯಂಗಿರಾ ದೇವಿ ದೇವಾಲಯ ಚಾರಿಟಬಲ್ ಟ್ರಸ್ಟ್ ವತಿಯಿಂದ ನೂತನವಾಗಿ ನಿರ್ಮಿಸಿರುವ ಭವ್ಯ ದೇವಸ್ಥಾನದಲ್ಲಿ ಶ್ರೀ ಲಕ್ಷ್ಮಿ ಪ್ರತ್ಯಂಗಿರಾ ದೇವಿ ಪ್ರತಿಷ್ಠಾಪನೆ, ಶಿಖರ ಕಳಸಾರೋಹಣ, ಕುಂಭಾಭಿಷೇಕ ಮಹೋತ್ಸವ ಅಂಗವಾಗಿ ಏರ್ಪಡಿಸಲಾಗಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.

ಧಾರ್ಮಿಕ ಚಟುವಟಿಕೆಗಳೊಂದಿಗೆ ಕಲೆ, ಸಾಮಾಜಿಕ ಸೇವೆ, ಹಾಗೂ ಧರ್ಮ ಕಾಪಾಡುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸಬೇಕು. ಮಠಗಳು ಕೂಡ ಸಾಮಾಜಿಕ ಸೇವೆಯಲ್ಲಿ, ಕಲೆ ಸಂಸ್ಕೃತಿ ಹಾಗೂ ಧರ್ಮ ಸಂರಕ್ಷಣೆ ಮಾಡುವುದರಲ್ಲಿ ಹಿಂದಿನಿಂದಲೂ ತಮ್ಮ ಪರಂಪರೆಯನ್ನು ಬೆಳೆಸಿಕೊಂಡು ಬರುತ್ತಿರುವುದು ಸಂತೋಷದ ವಿಷಯವಾಗಿದೆ ಎಂದು ಹೇಳಿದರು.ಶಾಸಕ ಟಿಬಿ ಜಯಚಂದ್ರ ಮಾತನಾಡಿ ಇತ್ತೀಚಿನ ಜೀವನದ ಜಂಜಾಟದ ಬದುಕಿನಲ್ಲಿ ಮನುಷ್ಯನಿಗೆ ನೆಮ್ಮದಿ ಹಾಗೂ ಒಳ್ಳೆಯ ಮಾರ್ಗದಲ್ಲಿ ಕರೆದುಕೊಂಡು ಹೋಗುವುದರಲ್ಲಿ ಧಾರ್ಮಿಕ ಕೇಂದ್ರದ ಪಾತ್ರ ಬಹುಮುಖ್ಯವಾಗಿದೆ ಎಂದು ಹೇಳಿದರು.ವಿದ್ವಾನ್ ಡಾ. ಗೋಪಾಲಕೃಷ್ಣ ಶರ್ಮ ಗುರೂಜಿ ಮಾತನಾಡಿ ಹಿರಣ್ಯಾಕ್ಷ ನನ್ನು ಸಂಹಾರ ಮಾಡುವಾಗ ನರಸಿಂಹ ಸ್ವಾಮಿಯ ಉಗ್ರ ಸ್ವರೂಪವನ್ನು ಶಾಂತಿಮಾಡಲು ಶಿವನು ತನ್ನ ಮೂರನೇ ಕಣ್ಣಿನಿಂದ ಪ್ರತ್ಯಂಗಿರಾ ದೇವಿಯನ್ನು ಸೃಷ್ಟಿ ಮಾಡಿದನು, ಆ ಸಂದರ್ಭದಲ್ಲಿ ಲಕ್ಷ್ಮಿ ನರಸಿಂಹ ಸ್ವಾಮಿಯ ಬಳಿಯಲ್ಲಿಯೇ ಇದ್ದಿದ್ದರಿಂದ ಶ್ರೀ ಲಕ್ಷ್ಮಿ ಪ್ರತ್ಯಂಗಿರಾ ದೇವಿಯಾಗಿ ನೆಲೆಸಿದ್ದಾರೆ. ಈ ದೇವಿಯನ್ನು ಆರಾಧನೆ ಮಾಡುವುದರಿಂದ ಯಾವುದೇ ಮಾಟ, ಮಂತ್ರ ತಂತ್ರಗಳು ಮನುಷ್ಯರಿಗೆ ನಾಟುವುದಿಲ್ಲ. ಸಾತ್ವಿಕ ರೂಪದಲ್ಲಿರುವ ದೇವಿಯು ಅನೇಕ ಶುಭ ಕಾರ್ಯಗಳನ್ನು ನಡೆಸಿಕೊಡುತ್ತಾಳೆ ಎಂದು ತಿಳಿಸಿದರು. ನಾದ ಭಾಸ್ಕರ ಶಿವಶಂಕರ ಶಾಸ್ತ್ರಿ ಸಾರಥ್ಯದಲ್ಲಿ ಗಾನಸುದೆ ತಂಡದವರಿಂದ ಸುಗಮ ಸಂಗೀತ ನೆರವೇರಿತು. ಧರ್ಮದರ್ಶಿಗಳಾದ ವೇದಬ್ರಹ್ಮ ಬಸವರಾಜ ಶಾಸ್ತ್ರಿಗಳು, ಹಿರೇಮಠ ಹುಕ್ಕೇರಿ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು, ಶ್ರೀ ಕ್ಷೇತ್ರ ಸಿದ್ದರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮಿಗಳು, ನಾಗಪುರ ಸಂಸ್ಥಾನ ಮಠದ ಶ್ರೀ ತೇಜೇಶ್ವರ ಲಿಂಗ ಶಿವಾಚಾರ್ಯ ಸ್ವಾಮಿಗಳು, ವಿಧಾನ ಪರಿಷತ್ ಶಾಸಕ ಚಿದಾನಂದ್ ಎಂ ಗೌಡ, ತುಮಲ್ ನಿರ್ದೇಶಕ ಎಸ್ ಆರ್ ಗೌಡ, ಬಿಜೆಪಿ ಮುಖಂಡ ಬಿಕೆ ಮಂಜುನಾಥ್, ಎಎಸ್ಪಿ ವಿ. ಮರಿಯಪ್ಪ, ವೆಂಕಟೇಶ್ ಲಾಡ್, ಯಲಿಯೂರ್ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಷ್ಮಾ ಮೋಹನ್ ಕುಮಾರ್, ಉಪಾಧ್ಯಕ್ಷ ರಾಮಚಂದ್ರ, ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಯ್ಯ, ಎಸ್ ಕೆ ಜಿ ರಾಮಚಂದ್ರ ಗುಪ್ತ, ಯಲಿಯೂರು ಗ್ರಾಮ ಪಂಚಾಯತಿ ಅಧ್ಯಕ್ಷೆ ಸುಷ್ಮಾ ಹರೀಶ್ , ಪಂಚಾಯತಿ ಸದಸ್ಯರು,ಭಕ್ತಾದಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಸ್ಸಾಂ ಚುನಾವಣೆ ವೀಕ್ಷಕರಾಗಿ ಡಿಕೇಶಿ ನೇಮಕ
ಇನ್ನೆಷ್ಟು ದಿನ ಅಧಿಕಾರದಲ್ಲಿ ಇರ್ತೀನೋ ಗೊತ್ತಿಲ್ಲ: ಸಿಎಂ