ಇಂದಿನಿಂದ ಮೈಲಾರಲಿಂಗೇಶ್ವರ ದೇಗುಲದಲ್ಲಿ ಫೆ.2ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮ

KannadaprabhaNewsNetwork |  
Published : Dec 23, 2024, 01:02 AM IST
(ಸಾಂದರ್ಭಿಕ ಚಿತ್ರ) | Kannada Prabha

ಸಾರಾಂಶ

ನ್ಯಾಮತಿ ಪಟ್ಟಣದ ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ದೀಪಾಲೆ ಪ್ರತಿಷ್ಠಾಪನೆ, ಧ್ವಜಾರೋಹಣ, ನೂತನ ದೇವಸ್ಥಾನ ಗೃಹಪ್ರವೇಶ, ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ, ಶ್ರೀ ಗಂಗಾಮಾತಮ್ಮದೇವಿ, ಶ್ರೀ ಪಂಚಮುಖಿ ಗಣಪತಿ ವಿಗ್ರಹಗಳ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮಗಳು ಡಿ24ರಿಂದ ಫೆ.2ರವರೆಗೆ ನಡೆಯಲಿವೆ ಎಂದು ಮೈಲಾರಲಿಂಗೇಶ್ವರ ಭಕ್ತ ಮಂಡಳಿ ತಿಳಿಸಿದೆ.

- ಶ್ರೀ ಡಾ.ಒಡೆಯರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಶ್ರೀ ಸಾನಿಧ್ಯ- - - ನ್ಯಾಮತಿ: ಪಟ್ಟಣದ ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ದೀಪಾಲೆ ಪ್ರತಿಷ್ಠಾಪನೆ, ಧ್ವಜಾರೋಹಣ, ನೂತನ ದೇವಸ್ಥಾನ ಗೃಹಪ್ರವೇಶ, ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ, ಶ್ರೀ ಗಂಗಾಮಾತಮ್ಮದೇವಿ, ಶ್ರೀ ಪಂಚಮುಖಿ ಗಣಪತಿ ವಿಗ್ರಹಗಳ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮಗಳು ಡಿ24ರಿಂದ ಫೆ.2ರವರೆಗೆ ನಡೆಯಲಿವೆ ಎಂದು ಮೈಲಾರಲಿಂಗೇಶ್ವರ ಭಕ್ತ ಮಂಡಳಿ ತಿಳಿಸಿದೆ.

ಹೊನ್ನಾಳಿ ಹಿರೇಕಲ್ಮಠದ ಶ್ರೀ ಡಾ.ಒಡೆಯರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯದಲ್ಲಿ ಹಾಗೂ ನ್ಯಾಮತಿ ಕೋಹಳ್ಳಿ ಹಿರೇಮಠ ಎನ್‌.ಕೆ.ವಿಶ್ವರಾಧ್ಯಶಾಸ್ತ್ರಿಗಳ ಪೌರೋಹಿತ್ಯದಲ್ಲಿ ನಡೆಯಲಿದ್ದು ಡಿ.24ರ ಶುಕ್ರವಾರ ಬೆಳಿಗ್ಗೆ ನೂತನ ದೇವರುಗಳ ಪುರಪ್ರವೇಶ ಮತ್ತು ರಾಜಬೀದಿ ಉತ್ಸವದ ನಂತರ ದೇವರುಗಳ ದಾನ್ಯದಿವಸ, ಜನವರಿ 25ರಂದು ನೂತನ ದೇವರುಗಳ ತೈಲಾದಿವಾಸ, ಜ.26ರಂದು ಜಲಾದಿವಾಸ, 27ರಂದು ಪುಷ್ಪಾದಿವಾಸ, ಜ.30ರಂದು ದೀಪಾಲಿ ಕಂಬ ಪ್ರತಿಷ್ಠಾಪನೆ, ನಂತರ ಧ್ವಜಾರೋಹಣ ಕಾರ್ಯಕ್ರಮಗಳು ಜರುಗುವವು.

ಫೆ.1ರಂದು ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ ನೂತನ ದೇವಾಲಯದ ಗೃಹ ಪ್ರವೇಶ, ಅನಂತರ ವಿವಿಧ ಪೂಜಾ ಕೈಂಕರ್ಯಗಳು ಜರುಗಲಿವೆ. ಫೆ.2ರಂದು ನೂತನ ಮೂರ್ತಿಗಳ ಪ್ರಾಣಪ್ರತಿಷ್ಠಾಪನೆಯು ಶ್ರೀ ಒಡೆಯರ್‌ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮೀಜಿ ನೆರವೇರಿಸಲಿದ್ದಾರೆ. ಕಳಸಾರೋಹಣ ಮತ್ತು ಮಹಾಬಲಿ ಪೂಜೆ, ಹಣ್ಣು ತುಪ್ಪ ಸೇವೆ, ದೋಣಿ ಪೂಜೆ ನಂತರ ಧರ್ಮಸಭೆ ನಡೆಯುವುದು. ಧಾನ್ಯ, ತೈಲಾ, ಜಲಾ, ಪುಷ್ಪಾದಿವಾಸ ನೂತನ ದೇವರ ಮೂರ್ತಿಗಳಿಗೆ ಸಮರ್ಪಣೆ ಮಾಡಲು ಇಚ್ಛಿಸುವವರು ಆಯಾ ದಿನಾಂಕದಂದು ಸಮರ್ಪಣೆ ಮಾಡಿ ಸ್ವಾಮಿ ಕೃಪೆಗೆ ಪಾತ್ರರಾಗಬಹುದು.

ಕಾರ್ಯಕ್ರಮಕ್ಕೆ ಹೊನ್ನಾಳಿ -ನ್ಯಾಮತಿ ಕ್ಷೇತ್ರದ ಶಾಸಕ ಡಿ.ಜಿ.ಶಾಂತನಗೌಡ, ದಾವಣಗೆರೆ ಜಿಲ್ಲೆ ಸಂಸದೆ ಪ್ರಭಾ ಮಲ್ಲಿಕಾರ್ಜುನ, ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಆಗಮಿಸಲಿದ್ದಾರೆ ತಿಳಿಸಲಾಗಿದೆ.

- - - (ಸಾಂದರ್ಭಿಕ ಚಿತ್ರ)

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ