ಕನ್ನಡಪ್ರಭ ವಾರ್ತೆ ಖಾನಾಪುರ ಕೆಎಸ್‌ಆರ್‌ಟಿಸಿ ಬಸ್‌ಗಳ ಮೇಲೆ ಅಳವಡಿಸಿದ್ದ ಸಮಾಜಕ್ಕೆ ತಪ್ಪು ಸಂದೇಶ ನೀಡುವ ಜಾಹೀರಾತುಗಳ ತೆರವು ಕಾರ್ಯಾಚರಣೆ ಪಟ್ಟಣದ ಬಸ್ ನಿಲ್ದಾಣದಲ್ಲಿ ಗುರುವಾರ ಕರವೇ ಸ್ವಾಭಿಮಾನಿ ಸೇನೆಯಿಂದ ನಡೆಯಿತು. ಸಂಘಟನೆಯ ಅಧ್ಯಕ್ಷ ಶ್ರವಣ ಲಮಾಣಿ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ವಿವಿಧ ಬಸ್‌ಗಳ ಮೇಲೆ ಅಳವಡಿಸಿದ್ದ ಗುಟ್ಕಾ, ಪಾನ್ ಮಸಾಲಾ, ಒಳ ಉಡುಪುಗಳ ಜಾಹೀರಾತುಗಳ ಭಿತ್ತಿಪತ್ರಗಳನ್ನು ಹರಿದು ಹಾಕಲಾಯಿತು.
ಕನ್ನಡಪ್ರಭ ವಾರ್ತೆ ಖಾನಾಪುರ
ಕೆಎಸ್‌ಆರ್‌ಟಿಸಿ ಬಸ್‌ಗಳ ಮೇಲೆ ಅಳವಡಿಸಿದ್ದ ಸಮಾಜಕ್ಕೆ ತಪ್ಪು ಸಂದೇಶ ನೀಡುವ ಜಾಹೀರಾತುಗಳ ತೆರವು ಕಾರ್ಯಾಚರಣೆ ಪಟ್ಟಣದ ಬಸ್ ನಿಲ್ದಾಣದಲ್ಲಿ ಗುರುವಾರ ಕರವೇ ಸ್ವಾಭಿಮಾನಿ ಸೇನೆಯಿಂದ ನಡೆಯಿತು. ಸಂಘಟನೆಯ ಅಧ್ಯಕ್ಷ ಶ್ರವಣ ಲಮಾಣಿ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ವಿವಿಧ ಬಸ್‌ಗಳ ಮೇಲೆ ಅಳವಡಿಸಿದ್ದ ಗುಟ್ಕಾ, ಪಾನ್ ಮಸಾಲಾ, ಒಳ ಉಡುಪುಗಳ ಜಾಹೀರಾತುಗಳ ಭಿತ್ತಿಪತ್ರಗಳನ್ನು ಹರಿದು ಹಾಕಲಾಯಿತು. ಜೊತೆಗೆ ಕೆಲ ಬಸ್‌ಗಳಲ್ಲಿ ಅಳವಡಿಸಿದ್ದ ಜ್ಯೋತಿಷ್ಯ, ಗುಪ್ತರೋಗ ಮತ್ತಿತರ ಖೊಟ್ಟಿ ಜಾಹೀರಾತು ಪತ್ರಗಳನ್ನು ಕಿತ್ತುಹಾಕಲಾಯಿತು.ಸಂಘಟನೆಯ ಪದಾಧಿಕಾರಿಗಳು ಮಾತನಾಡಿ, ಬಸ್‌ಗಳಲ್ಲಿ ವಿದ್ಯಾರ್ಥಿಗಳು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಸುತ್ತಾರೆ. ಆದರೆ, ಸರ್ಕಾರಿ ಸ್ವಾಮ್ಯದ ವಾಯುವ್ಯ ಸಾರಿಗೆ ಸಂಸ್ಥೆಯವರು ಹಣ ನೀಡುತ್ತಾರೆ ಎಂಬ ಕಾರಣಕ್ಕೆ ಅಸಂಬದ್ಧ ಜಾಹೀರಾತುಗಳನ್ನು ಬಸ್‌ಗಳಲ್ಲಿ ಅಳವಡಿಸಲು ಅನುಮತಿ ನೀಡಿರುವುದು ಸರಿಯಲ್ಲ. ಮುಂದಿನ ದಿನಗಳಲ್ಲಿ ಬಸ್‌ಗಳಲ್ಲಿ ಸಮಾಜಕ್ಕೆ ತಪ್ಪು ಸಂದೇಶ ನೀಡುವ ಜಾಹೀರಾತುಗಳು ಕಂಡುಬಂದಲ್ಲಿ ರಸ್ತೆ ತಡೆ ನಡೆಸಲಾಗುವುದು ಎಂದು ಎಚ್ಚರಿಸಿದರು.ಈ ಸಂದರ್ಭದಲ್ಲಿ ಜೀವಪ್ಪ ಕೋಳಿ, ಮಾರುತಿ ಬೆಕ್ಕಿನಕೇರಿ ಮತ್ತಿತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.