ಹತ್ತಿ ಮೇಲಿನ ಸೆಸ್‌,ಜಿಎಸ್‌ಟಿ ತೆಗೆದು ಹಾಕಿ

KannadaprabhaNewsNetwork | Published : Aug 10, 2024 1:37 AM

ಸಾರಾಂಶ

ಕನ್ನಡಪ್ರಭ ವಾರ್ತೆ ಮೂಡಲಗಿ ಭಾರತ ಹತ್ತಿ ಉತ್ಪಾದನೆಯಲ್ಲಿ ಸಾವಲಂಬನೆ ಸಾಧಿಸಲು ಹತ್ತಿಯ ಮೇಲೆ ಈಗಿರುವ ಎಪಿಎಂಸಿ ಸೆಸ್ ಮತ್ತು ಜಿಎಸ್‌ಟಿಯನ್ನು ತೆಗೆದು ಹಾಕಬೇಕು. ಜೊತೆಗೆ ವಿದೇಶಗಳಿಂದ ಕಚ್ಚಾ ಹತ್ತಿ ಆಮದು ನಿಷೇಧಿಸಿ ರೈತರ ಗಂಭೀರ ಸಮಸ್ಯೆ ಎದುರಿಸುತ್ತಿರುವ ಹತ್ತಿ ಬೆಳಗಾರ ರೈತರ ಹಿತ ಕಾಪಾಡಬೇಕು. ಜೊತೆಗೆ 4000 ಹತ್ತಿ ಜಿನ್ನಿಂಗ್ ಸಂಬಂಧಿತ ಸಣ್ಣ ಕೈಗಾರಿಕೆಗಳು, 3000 ನೂಲುವ ಗಿರಿಣಿಗಳು ಸೇರಿ ದೇಶಿ ಜವಳಿ ಉದ್ಯಮವನ್ನು ರಕ್ಷಿಸಬೇಕೆಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ಮೂಡಲಗಿಭಾರತ ಹತ್ತಿ ಉತ್ಪಾದನೆಯಲ್ಲಿ ಸಾವಲಂಬನೆ ಸಾಧಿಸಲು ಹತ್ತಿಯ ಮೇಲೆ ಈಗಿರುವ ಎಪಿಎಂಸಿ ಸೆಸ್ ಮತ್ತು ಜಿಎಸ್‌ಟಿಯನ್ನು ತೆಗೆದು ಹಾಕಬೇಕು. ಜೊತೆಗೆ ವಿದೇಶಗಳಿಂದ ಕಚ್ಚಾ ಹತ್ತಿ ಆಮದು ನಿಷೇಧಿಸಿ ರೈತರ ಗಂಭೀರ ಸಮಸ್ಯೆ ಎದುರಿಸುತ್ತಿರುವ ಹತ್ತಿ ಬೆಳಗಾರ ರೈತರ ಹಿತ ಕಾಪಾಡಬೇಕು. ಜೊತೆಗೆ 4000 ಹತ್ತಿ ಜಿನ್ನಿಂಗ್ ಸಂಬಂಧಿತ ಸಣ್ಣ ಕೈಗಾರಿಕೆಗಳು, 3000 ನೂಲುವ ಗಿರಿಣಿಗಳು ಸೇರಿ ದೇಶಿ ಜವಳಿ ಉದ್ಯಮವನ್ನು ರಕ್ಷಿಸಬೇಕೆಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.ರಾಜ್ಯಸಭೆಯ ಮಳೆಗಾಲದ ಅಧಿವೇಶನದ ವಿಶೇಷ ವೇಳೆಯಲ್ಲಿ ಮಾತನಾಡಿದ ಅವರು, ಭಾರತದ ಜನಸಂಖ್ಯೆಯ ಶೇ.48 ಜನ ಕೃಷಿ ಮತ್ತು ಕೃಷಿ ಸಂಬಂಧಿತ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಹೀಗಾಗಿ, ಈ ಕ್ಷೇತ್ರದ ಬಲವರ್ಧನೆಗಾಗಿ ಕಳೆದ 10 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಕೃಷಿ ಕ್ಷೇತ್ರಕ್ಕೆ ದೊಡ್ಡ ಪ್ರಮಾಣದ ಅನುದಾನ ನೀಡಲಾಗಿದೆ. ಜೊತೆಗೆ ಕೃಷಿ ಕ್ಷೇತ್ರದ ನಂತರ ಜವಳಿ ಉದ್ಯಮ ದೇಶದಲ್ಲಿ 2ನೇ ಅತಿ ದೊಡ್ಡ ಉದ್ಯೋಗ ಒದಗಿಸುವ ಕ್ಷೇತ್ರ. ಇಂತಹ ಹತ್ತಿ ಬೆಳೆಯ ಉತ್ಪಾದನೆ ಕಡಿಮೆಯಾಗುತ್ತಿರುವ ಕಾರಣ ಪೂರಕವಾಗಿರುವ ಹತ್ತಿ ಜಿನ್ನಿಂಗ್ ಸಂಬಂಧಿ ಸಣ್ಣ ಕೈಗಾರಿಕೆಗಳು ಮತ್ತು ನೂಲುವ ಗಿರಣಿಗಳು ಅಳಿವಿನ ಅಂಚಿಗೆ ಬಂದಿವೆ ಎಂದು ಕಳವಳ ವ್ಯಕ್ತಪಡಿಸಿದರು.ಮಾಜಿ ಪ್ರಧಾನಿ ದಿ. ಅಟಲ್ ಬಿಹಾರಿ ವಾಜಪೇಯಿ ಅವರು ಮಿಷನ್ ಕಾಟನ್ ತಂತ್ರಜ್ಞಾನ ಪರಿಚಯಿಸಿದ ನಂತರ ಹತ್ತಿ ಬೆಳೆಯ ವಿಶಿಷ್ಟ ಯೋಜನೆಯೂ ಪ್ರತಿ ಹೆಕ್ಟೇರ್‌ಗೆ 275 ಕೆಜಿಯಿಂದ 585 ಕೆಜಿಗೆ ಹೆಚ್ಚಿಸುವ ಮೂಲಕ ದೇಶವು ವಿಶ್ವದ ಅತಿದೊಡ್ಡ ಹತ್ತಿ ಉತ್ಪಾದಕರ ಸಾಲಿನಲ್ಲಿ ಸೇರುವುದಕ್ಕೆ ಅವಕಾಶ ಮಾಡಿಕೊಟ್ಟಿತು. ಭಾರತೀಯ ರೈತರು ಪ್ರತಿ ಹೆಕ್ಟೇರಿಗೆ 400 ಕೆಜಿ ಇಳುವರಿ ಪಡೆದು ₹ 40 ಸಾವಿರ ಪಡೆಯುತ್ತಾರೆ. ಪರಿಣಾಮ ಜವಳಿ ಉದ್ಯಮಗಳು ಹೊರ ದೇಶಗಳಿಂದ ಕಡಿಮೆ ಬೆಲೆಗೆ ಹತ್ತಿಯನ್ನು ಆಮದು ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಕ್ರಮೇಣ ದೇಶದಲ್ಲಿ ಹತ್ತಿ ಬೆಳೆಯ ಕ್ಷೇತ್ರ ಮತ್ತು ಇಳುವರಿ ಕಡಿಮೆಯಾಗುತ್ತಾ ಸಾಗುತ್ತಿದೆ. ಗುಣಮಟ್ಟದ ಬೀಜ ಹಾಗೂ ಕೀಟನಾಶಕಗಳನ್ನು ಒದಗಿಸಲು ಕೃಷಿ ವಿಜ್ಞಾನ ಕೇಂದ್ರಗಳು, ಕೃಷಿ ವಿಶ್ವವಿದ್ಯಾಲಯಗಳು ರೈತರ ನೆರವಿಗೆ ಬರಬೇಕಾಗಿದೆ ಎಂದು ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದರು.

Share this article