ಬ್ಯಾಡಗಿ: ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎನ್ನುವ ಧ್ಯೇಯದ ಮೂಲಕ ರೇಣುಕಾಚಾರ್ಯರು ಸಮಸ್ತ ಕುಲಕ್ಕೂ ಧರ್ಮಸಂದೇಶ ನೀಡುವ ಮೂಲಕ ಪೂಜ್ಯನೀಯವಾಗಿದ್ದಾರೆ ಎಂದು ಮುಪ್ಪಿನಸ್ವಾಮಿ ಮಠದ ಮಲ್ಲಿಕಾರ್ಜುನ ಶ್ರೀಗಳು ತಿಳಿಸಿದರು.ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಬೇಡಜಂಗಮ ಕ್ಷೇಮಾಭಿವೃದ್ಧಿ ಸಂಘ ಹಾಗೂ ಪಂಚಾಚಾರ್ಯ ವೇದಿಕೆ ಆಶ್ರಯದಲ್ಲಿ ಬುಧವಾರ ರೇಣುಕಾಚಾರ್ಯ ಜಯಂತ್ಯುತ್ಸವ, ಯುಗಮಾನೋತ್ಸವ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.ಸನಾತನ ಕಾಲದಿಂದಲೂ ಶರಣ ಪರಂಪರೆ ಉತ್ತಮ ಸಂಸ್ಕಾರ ನೀಡಿದ್ದು, ಶಿವಶರಣರ ನಡೆನುಡಿ, ಆಚಾರ ವಿಚಾರಗಳು ಪ್ರಸಕ್ತ ಸಮಾಜಕ್ಕೆ ಅಗತ್ಯವಾಗಿವೆ. ರೇಣುಕಾಚಾರ್ಯರು ಮಠಾಧೀಶರಿಗೆ ಹಾಗೂ ಶರಣರಿಗೆ ದೀಕ್ಷಾ ಸಂಸ್ಕಾರ ನೀಡಿದ್ದಾರೆ. ಧರ್ಮ ಆಚರಣೆಗಳನ್ನು ಪಾಲಿಸಿದಲ್ಲಿ ಧರ್ಮ ಉಳಿಯಲಿದೆ ಎಂದರು. ಸಿದ್ಧಾಂತ ಶಿಖಾಮಣಿ ಪ್ರವಚನಕಾರ ಎಚ್.ಎಂ. ಸಿದ್ದಲಿಂಗಸ್ವಾಮಿ ಮಾತನಾಡಿ, ರೇಣುಕಾಚಾರ್ಯರು ಸಿದ್ಧಾಂತ ಶಿಖಾಮಣಿ ಧರ್ಮಗ್ರಂಥದಲ್ಲಿ ಸಾವಿರಾರು ಶ್ಲೋಕಗಳನ್ನು ರಚಿಸಿದ್ದಾರೆ. ಗ್ರಂಥದಲ್ಲಿ 28 ಆಗಮ ಶಾಸ್ತ್ರಗಳನ್ನು ಒಳಗೊಂಡಿದೆ. ಮಾನವ ದೇವನಾಗುವ ಹಾಗೂ ಜೀವನ ನಿದರ್ಶನ ಸಂದೇಶಗಳನ್ನು ಅಳವಡಿಸಿದೆ ಎಂದರು.ತಹಸೀಲ್ದಾರ್ ಫೀರೋಜ್‌ಷಾ ಸೋಮನಕಟ್ಟೆ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಸದಸ್ಯರಾದ ವಿನಯ ಹಿರೇಮಠ, ಕವಿತಾ ಸೊಪ್ಪಿನಮಠ, ಜಂಗಮ ಸಮಾಜದ ಪದಾಧಿಕಾರಿಗಳಾದ ಗಂಗಾಧರ ಶರ್ಮಾ ಹಿರೇಮಠ, ಶಂಭಯ್ಯ ಮುದೇನೂರುಮಠ, ಶರಣಯ್ಯ ಬೂದಿಹಾಳಮಠ, ಚನ್ನಬಸಯ್ಯ ಪ್ಯಾಟಿಮಠ, ವಿ.ಎಂ. ಹನಗೋಡಿಮಠ, ಮೃತ್ಯುಂಜಯ ಹಿರೇಮಠ, ಮಂಜಯ್ಯಸ್ವಾಮಿ ಹಿರೇಮಠ, ಗಿರೀಶಸ್ವಾಮಿ ಇಂಡಿಮಠ, ಪಂಚಮಸಾಲಿ ಸಮಾಜದ ತಾಲೂಕಾಧ್ಯಕ್ಷ ತಿರಕಪ್ಪ ಮರಬಸಣ್ಣನವರ, ಭೋವಿ ಸಮಾಜದ ಜಿಲ್ಲಾಧ್ಯಕ್ಷ ಮಂಜುನಾಥ ಬೋವಿ, ವಿಶ್ವಕರ್ಮ ಸಮಾಜದ ತಾಲೂಕಾಧ್ಯಕ್ಷ ಜಕಣಾಚಾರ್ಯ ಬಡಿಗೇರ, ವೀರಶೈವ ಲಿಂಗಾಯತ ಸಮಾಜದ ತಾಲೂಕಾಧ್ಯಕ್ಷ ವಿಶ್ವನಾಥ ಅಂಕಲಕೋಟಿ, ರಾಜಣ್ಣ ಕಳ್ಯಾಳ, ಮೋಹನ ಬಿನ್ನಾಳ ಇದ್ದರು.
ರಾಜಶೇಖರ ಹಾಲೇವಾಡಿಮಠ, ನೇತ್ರಾ ಆರಾಧ್ಯಮಠ, ನಾಗರತ್ನಮ್ಮ ಗುರುಪಾದದೇವರಮಠ ಕಾರ್ಯಕ್ರಮ ನಿರ್ವಹಿಸಿದರು.ಮಠ, ಮಂದಿರಗಳು ಸಂಸ್ಕಾರ ನೀಡುವ ತಾಣಗಳುಶಿಗ್ಗಾಂವಿ: ಅರಿವಿನ, ಅಧ್ಯಾತ್ಮ, ವಚನಗಳ ಹಂದರದ ಮಂಟಪವೇ ಅನುಭವ ಮಂಟಪ. ವಚನಗಳನ್ನು ತಿಳಿದಾಗ ಜ್ಞಾನ ಹೆಚ್ಚಿಸುವ ಜತೆಗೆ ಬದುಕು ಪಾವನವಾಗುತ್ತದೆ ಎಂದು ವಿರಕ್ತಮಠದ ಬಸವದೇವರು ತಿಳಿಸಿದರು.ಪಟ್ಟಣದ ವಿರಕ್ತಮಠದಲ್ಲಿ ೩೨ನೇ ಶರಣ ಸಂಸ್ಕೃತಿ ಉತ್ಸವ- ೨೦೨೫ ಅಂಗವಾಗಿ ನಡೆದ ಧರ್ಮ ಸಮಾರಂಭದಲ್ಲಿ ಮಾತನಾಡಿ, ಮನುಷ್ಯನಿಗೆ ಸಂಸ್ಕಾರ, ಸಂಸ್ಕೃತಿ ನೀಡುವ ಕೇಂದ್ರಗಳೆಂದರೆ ಮಠ ಮಂದಿರಗಳು ಎಂದರು.ಮಹಾಂತೇಶ ಶಾಸ್ತ್ರಿಗಳು ಕಲ್ಲೂರ ಪ್ರವಚನ ನೀಡಿ, ಅಧ್ಯಾತ್ಮದ ಗಾಳಿ ಸಿಗಬೇಕಾದರೆ ವಿರಕ್ತಮಠಕ್ಕೆ ಭೇಟಿ ನೀಡಬೇಕು. ಯಾರು ಭಕ್ತಿ, ಭಾವದಿಂದ ಸ್ಮರಿಸುತ್ತಾರೆಯೋ ಅವರ ಮನಸ್ಸಿನಲ್ಲಿ ಮಂತ್ರಾಲಯವಿದೆ. ಜೀವನ ಬಹಳ ಪವಿತ್ರವಾದದು. ಪಾವಿತ್ರ್ಯತೆ ಇದ್ದರೆ ಹೆಚ್ಚಿನ ಗೌರವ ಸಿಗುತ್ತದೆ ಎಂದರು.ಸಂಗನಬಸವ ಸ್ವಾಮಿಗಳು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ನಿಡಗುಂದಿ ಕುಮಾರೇಶ್ವರ ಶ್ರೀಗಳು ಆಶೀರ್ವಚನ ನೀಡಿದರು. ಸಂಗೀತ ಸೇವೆಯನ್ನು ಗದಿಗೆಯ್ಯ ಹಿರೇಮಠ ನೀಡಿದರು. ಅವರಿಗೆ ಬಸವರಾಜ ಹೂಗಾರ ತಬಲಾ ಸಾಥ್ ನೀಡಿದರು. ನಾಗರಾಜ ಮಿಶ್ರಿಕೋಟಿ, ಈರಣ್ಣ ಯಲಿಗಾರ, ಸಿ.ವಿ. ಚಿಕ್ಕಮಠ, ಯಲ್ಲಪ್ಪ ಸಾಳುಂಕೆ, ಹೋಟೆಲ್ ಉದ್ಯಮಿ ಉಮೇಶ ಗೌಳಿ, ಕಮಲವ್ವ ಹರಿಗೊಂಡ, ಸೋಮಲಿಂಗಯ್ಯ ಹಿರೇಮಠ, ಪ್ರಸಾದ ಸೇವೆ ದಿ. ಸಂಗಪ್ಪ ಮೊರಬದ ಕುಟುಂಬ ವರ್ಗ, ಚನ್ನಬಸನಗೌಡ ತೋಟದ, ಶಿವನಗೌಡ ತೋಟದ ಸೇರಿದಂತೆ ದೇವಸ್ಥಾನದ ಸೇವಾ ಸಮಿತಿ ಸದಸ್ಯರು ಇದ್ದರು. ನಟರಾಜ ನಾಟ್ಯ ಶಾಲೆಯ ವಿದ್ಯಾರ್ಥಿಗಳಿಂದ ವಿಶೇಷ ನೃತ್ಯರೂಪಕ ನೆರವೇರಿತು. ಪ್ರೊ. ಶರೀಫ ಮಾಕಪ್ಪನವರ ನಿರೂಪಿಸಿದರು.