ರೇಣುಕಾಚಾರ್ಯರ ಧಾರ್ಮಿಕ ಚಿಂತನೆಗಳು ಮಾದರಿ: ವರಸದ್ಯೋಜಾತ ಶಿವಾಚಾರ್ಯರು

KannadaprabhaNewsNetwork |  
Published : Mar 13, 2025, 12:46 AM IST
ಹರಪನಹಳ್ಳಿ ಪಟ್ಟಣದ ತಾಲೂಕು ಪಂಚಾಯ್ತಿಯ ಸಾಮರ್ಥ್ಯ ಸೌಧದಲ್ಲಿ ಬುಧವಾರ ನಡೆದ ಆದಿಜಗದ್ಗುರು ರೇಣುಕಾಚಾರ್ಯ ಹಾಗೂ ನಾರಾಯಣ ಯತೀಂದ್ರರವರ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಎಸಿ ಚಿದಾನಂದಗುರುಸ್ವಾಮಿ ಉದ್ಘಾಟಿಸಿದರು. | Kannada Prabha

ಸಾರಾಂಶ

ಆದಿಜಗದ್ಗುರು ರೇಣುಕಾಚಾರ್ಯರ ಧಾರ್ಮಿಕ ಚಿಂತನೆಗಳು ಮಾದರಿಯಾಗಿವೆ.

ಕನ್ನಡಪ್ರಭ ವಾರ್ತೆ ಹರಪನಹಳ್ಳಿ

ಆದಿಜಗದ್ಗುರು ರೇಣುಕಾಚಾರ್ಯರ ಧಾರ್ಮಿಕ ಚಿಂತನೆಗಳು ಮಾದರಿಯಾಗಿವೆ ಎಂದು ಸ್ಥಳೀಯ ತೆಗ್ಗಿನ ಮಠ ಸಂಸ್ಥಾನದ ಪೀಠಾಧ್ಯಕ್ಷ ವರಸದ್ಯೋಜಾತ ಶಿವಾಚಾರ್ಯರು ತಿಳಿಸಿದರು.

ಪಟ್ಟಣದ ತಾಲೂಕು ಪಂಚಾಯಿತಿಯ ಸಾಮರ್ಥ್ಯ ಸೌಧದಲ್ಲಿ ಬುಧವಾರ ನಡೆದ ಆದಿಜಗದ್ಗುರು ರೇಣುಕಾಚಾರ್ಯ ಹಾಗೂ ನಾರಾಯಣ ಯತೀಂದ್ರರವರ ಜಯಂತ್ಯೋತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.

ರೇಣುಕಾಚಾರ್ಯರು ನಿತ್ಯದ ಬದುಕಿನಲ್ಲಿ ಭಕ್ತರ ಸಮಸ್ಯೆಯನ್ನು ತೊಳೆಯುವ ಗುರುವಾಗಿದ್ದಾರೆ. ಗುರುವಿನ ಮಹತ್ವವನ್ನು ನರಮಾನವನ ರೂಪದಲ್ಲಿ ತಿಳಿಸಿದರು. ಧರ್ಮ ಸಹಿಷ್ಣುತೆ, ಮತ ಸಹಿಷ್ಣುತೆ ಯಾರು ತಾಳುತ್ತಿಲ್ಲ, ದೇಶದಲ್ಲಿನ ಪ್ರಜೆಗಳು ಅಸೂಯೆಯ ಮುನ್ನುಡೆಗೆ ನಾಂದಿಯಾಡುತ್ತಿದ್ದೇವೆ, ಜಾತಿ-ಮತಗಳಲ್ಲಿ ಭಿನ್ನತೆ ಕಾಣುತ್ತಿದ್ದೇವೆ ಎಂದು ಹೇಳಿದರು.

ರೇಣುಕಾಚಾರ್ಯರ ಮಹಿಮೆಯನ್ನು ಪದಗಳಲ್ಲಿ ವರ್ಣಿಸುವುದು ಅಸಾಧ್ಯ. ಶಿವನಷ್ಠೇ ಶಕ್ತಿಯನ್ನು ಅವರು ಹೊಂದಿದ್ದರು ಎಂದ ಅವರು, ಅಖಂಡ ಮನುಕುಲ ಕರುಣೆಯಲ್ಲಿ ತೇಲಲು ಕಾರಣೀಭೂತರಾಗಿದ್ದಾರೆ. ಸ್ತ್ರೀಯರ ಮೇಲೆ ವಿಶೇಷವಾದ ಒಲವನ್ನು ಹೊಂದಿ ಸಾಮಾಜಿಕ ನ್ಯಾಯವನ್ನು ಒದಗಿಸಿದರು. ವೀರಶೈವ ಸಮಾಜಕ್ಕೆ ಮದುವೆ, ಆಚಾರ-ವಿಚಾರ, ಸಂಸ್ಕಾರವನ್ನು ಬಳುವಳಿಯಾಗಿ ನೀಡಿದರು ಎಂದು ಹೇಳಿದರು.

ರೇಣುಕಾಚಾರ್ಯರು ಕೇವಲ ಒಂದು ಸಮುದಾಯಕ್ಕೆ ಮೀಸಲಾದವರಲ್ಲ. ಮೊದಲನೆ ರೇಣುಕಾಚಾರ್ಯ ಪ್ರಶಸ್ತಿಯನ್ನು ಶೈಕ್ಷಣಿಕ ಸಾಧನೆಯನ್ನು ಗುರುತಿಸಿ ಹರಪನಹಳ್ಳಿಯ ತೆಗ್ಗನಮಠ ಸಂಸ್ಥಾನದ ಅಂದಿನ ಪೀಠಾಧಿಪತಿ ಚಂದ್ರಮೌಳೀಶ್ವರ ಸ್ವಾಮೀಜಿಯವರೆಗೆ ನೀಡಲಾಗಿತ್ತು, ಅದು ನಮ್ಮ ನಿಮ್ಮೆಲ್ಲರ ಹೆಮ್ಮೆಯ ಸಂಗತಿ ಎಂದರು.

ಉಪವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿ ಮಾತನಾಡಿ, ಭಾರತ ಕಂಡ ಶ್ರೇಷ್ಠ ಯೋಗಿಗಳ ಜಯಂತಿ ಆಚರಣೆ ಮಾಡುತ್ತಿರುವುದು ಸಂತಸದ ಸಂಗತಿ. ಜಗತ್ತಿನಲ್ಲಿ ಅಧರ್ಮ ತಾಂಡವಾಡುತ್ತಿದ್ದ ವೇಳೆಯಲ್ಲಿ ಧರ್ಮದ ರಕ್ಷಣೆಗಾಗಿ ಜನ್ಮ ತಾಳಿದ ಮಹಾನ್ ಪುರುಷರು ಇವರಾಗಿದ್ದಾರೆ ಎಂದರು.

ನಿವೃತ್ತ ಉಪನ್ಯಾಸಕ ಎಂಪಿಎಂ ಶಾಂತವೀರಯ್ಯ ಉಪನ್ಯಾಸ ನೀಡಿ, ಇಂದಿನ ಯುವ ಪೀಳಿಗೆಯಲ್ಲಿ ಸಂಸ್ಕಾರದ ಕೊರತೆ ಕಾಣುತ್ತಿರುವುದು ಬೇಸರದ ಸಂಗತಿ. ಎಷ್ಠೇ ಉನ್ನತ ವ್ಯಾಸಂಗ ಪಡೆದರೂ ನಮ್ಮ ಸನಾತನ ಧರ್ಮದ ಸಂಸ್ಕೃತಿ, ಸಂಸ್ಕಾರದ ಬಗ್ಗೆ ಮಕ್ಕಳಿಗೆ ತಿಳಿಸಬೇಕು ಎಂದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಎಂ. ರಾಜಶೇಖರ ಮಾತನಾಡಿದರು. ಚಿರಸ್ಥಹಳ್ಳಿಯ ಮಲ್ಲಿಕಾರ್ಜುನ ಸ್ವಾಮಿ ಕಲ್ಮಠ ಪ್ರಾಸ್ತಾವಿಕವಾಗಿ ಮಾತನಾಡಿದರು, ತಹಶೀಲ್ದಾರ್ ಬಿ.ವಿ. ಗಿರೀಶ್ ಬಾಬು, ಟಿಎಚ್ ಎಂ ಮಲ್ಲಿಕಾರ್ಜುನಯ್ಯ, ಶಿವಾನಂದ ಸ್ವಾಮಿ ಟಿಎಚ್ ಎಂ., ಟಿ.ಎಂ. ಚಂದ್ರಶೇಖರಯ್ಯ, ಸಿ.ಎಂ. ಕೊಟ್ರಯ್ಯ, ಎಚ್.ಎಂ. ಜಗದೀಶ, ಎ. ಎಸ್.ಎಂ. ಗುರು ಪ್ರಸಾದ, ಗೊಂಗಡಿ ನಾಗರಾಜ, ಪಟೆಲ್ ಬೆಟ್ಟನಗೌಡ, ಲತಾ ಟಿಎಚ್‌ಎಂ, ಬಲಿಜ ಸಮಾಜ ಮುಖಂಡರು ಸೇರಿದಂತೆ ಇತರರು ಭಾಗವಹಿಸಿದ್ದರು.

PREV

Recommended Stories

ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...
ಇಬ್ಬರು ಪುತ್ರರಿದ್ದ ತಾಯಿಗೆ ಹಸಿರು ಸೀರೆ, ಬಳೆ ಉಡಿ ತುಂಬಿ : ವಂದತಿ!