ಕನ್ನಡಪ್ರಭ ವಾರ್ತೆ ಇಂಡಿ
ಈ ಸಂದರ್ಭದಲ್ಲಿ ಕಾರ್ಮಿಕರೊಂದಿಗೆ ಸಂವಾದ ನಡೆಸಿ ಅವರ ಕೆಲಸದ ಅನುಭವ, ಉದ್ಯೋಗಾವಕಾಶ ಹಾಗೂ ಯೋಜನೆಯಿಂದ ದೊರೆಯುತ್ತಿರುವ ಪ್ರಯೋಜನಗಳ ಕುರಿತು ಮಾಹಿತಿ ಪಡೆದದರು. ಕಾಮಗಾರಿಗಳ ಅನುಷ್ಠಾನ, ಕಾರ್ಮಿಕರ ಭಾಗವಹಿಸುವಿಕೆ ಹಾಗೂ ಯೋಜನೆಯ ಪ್ರಗತಿಯ ಕುರಿತು ಸ್ಥಳದಲ್ಲಿಯೇ ಪರಿಶೀಲನೆ ನಡೆಸಿದರು.
ಬಬಲಾದ ಗ್ರಾಪಂಗೆ ಭೇಟಿ ನೀಡಿ ಸಿಬ್ಬಂದಿಗಳ ಹಾಜರಾತಿ, ಚಲನವಲನ, ನಗದು, ಸಂದರ್ಶಕರ ವಹಿಗಳನ್ನು ಪರಿಶೀಲಿಸಿ ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗಿ ಕೆಲಸ ನಿರ್ವಹಿಸಬೇಕು. ಗ್ರಾಮ ಪಂಚಾಯತಿ ವಹಿಗಳನ್ನು ನಿಯಾಮನುಸಾರ ಸಿದ್ಧಪಡಿಸುವಂತೆ ಸಿಬ್ಬಂದಿಗೆ ಸೂಚಿಸಿದರು.ಈ ಸಂದರ್ಭದಲ್ಲಿ ಈ-ಸ್ವತ್ತು ಅಭಿಯಾನದ ಕುರಿತು ಚರ್ಚಿಸಿ, ಗ್ರಾಮೀಣ ಪ್ರದೇಶದ ಆಸ್ತಿಗಳಿಗೆ ಕಾನೂನುಬದ್ಧ ದಾಖಲೆಗಳನ್ನು ಒದಗಿಸುವುದು, ಆಸ್ತಿ ದಾಖಲೆಗಳ ವ್ಯವಸ್ಥಿತ ನಿರ್ವಹಣೆ ಹಾಗೂ ಅರ್ಹ ಫಲಾನುಭವಿಗಳಿಗೆ ಈ-ಸ್ವತ್ತು ದಾಖಲೆಗಳನ್ನು ವಿತರಿಸುವ ಕಾರ್ಯವನ್ನು ಪರಿಣಾಮಕಾರಿಯಾಗಿ ಕೈಗೊಳ್ಳುವ ಕುರಿತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚರ್ಚೆ ಚರ್ಚೆ ನಡೆಸಿದರು.
ಈ ಸಂದರ್ಭದಲ್ಲಿ ಸಹಾಯಕ ನಿರ್ದೇಶಕ ಸಂಜಯ ಖಡೆಗೆಕರ್, ಸಹಾಯಕ ನಿರ್ದೇಶಕ ಪ್ರಕಾಶ ರಾಠೋಡ, ಬಬಲಾದ ಪಿಡಿಒ ಸಿ.ಜಿ.ಪಾರೆ, ಹಂಜಗಿ ಪಿಡಿಒ ಅಮಸಿದ್ದ ಕೋಳೂರು, ಭತಗುಣಕಿ ಪಿಡಿಒ ಎಚ್.ರಜಪೂತ, ತಾಂತ್ರಿಕ ಸಂಯೋಜಕ ಸಾಹಿಲ್ ಧನಶೆಟ್ಟಿ, ತಾಂತ್ರಿಕ ಸಹಾಯಕ ಸಂಗಮೇಶ ಬಿರಾದಾರ, ಈರಣ್ಣ ಇಂಡಿ, ಅಣ್ಣಪ್ಪಗೌಡ ಪಾಟೀಲ್, ಗ್ರಾಪಂ ಸಿಬ್ಬಂದಿಗಳು ಮತ್ತು ಕೂಲಿಕಾರರು ಇದ್ದರು.