ಚಿಕ್ಕಮಗಳೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗಳ (ಸರ್ಕಾರಿ ಮೆಡಿಕಲ್ ಕಾಲೇಜು) ಡೀನ್ ಹರೀಶ್‌ರಿಂದ ವರದಿ
ಆರೋಗ್ಯ ಇಲಾಖೆ ಉನ್ನತ ಶ್ರೇಣಿಯ ಅಧಿಕಾರಿ ಎಂದು ಹೇಳಿಕೊಂಡ ನಕಲಿ ಐಎಎಸ್ ಮಿಥುನ್ ಈ ಹಿಂದಿನ ಜಿಲ್ಲಾ ಸರ್ಜನ್ ಡಾ.ಎಚ್.ಬಿ. ಚಂದ್ರಶೇಖರ್ ಅವರೊಂದಿಗೆ ಜಿಲ್ಲಾ ಆಸ್ಪತ್ರೆಗೆ ಆಗ್ಗಾಗೆ ಭೇಟಿ ನೀಡುತ್ತಿದ್ದರು ಎಂದು ಜಿಲ್ಲಾಧಿಕಾರಿಗಳಿಗೆ ಸಲ್ಲಿಕೆಯಾಗಿರುವ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಅಷ್ಟೇ ಅಲ್ಲದೇ ಡಾ.ಚಂದ್ರಶೇಖರ್ ಅವರೊಂದಿಗೆ ಮಿಥುನ್ ಒಡನಾಟದಿಂದ ಪ್ರಭಾವಿತರಾಗಿ ಶ್ರೇಯಸ್ ಮೆಡಿಕಲ್ ಶಾಪ್ ಮಾಲೀಕರ ಸತೀಶ್ ಸಹ ಮಿಥುನ್‌ನೊಂದಿಗೆ ಹಣಕಾಸಿ ವ್ಯವಹಾರ ನಡೆಸಿದ್ದಾರೆ ಎಂದು ಪ್ರಕರಣದ ಕುರಿತು ಜಿಲ್ಲಾಧಿಕಾರಿಗೆ ಸಲ್ಲಿಕೆಯಾಗಿರುವ ವರದಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.ವರದಿಯೊಂದಿಗೆ ಈ ಹಿಂದಿನ ಜಿಲ್ಲಾಸರ್ಜನ್ ಡಾ.ಎಚ್.ಬಿ.ಚಂದ್ರಶೇಖರ್ ಹಾಗೂ ಶ್ರೇಯಸ್ ಮೆಡಿಕಲ್ ಶಾಪ್ ಮಾಲೀಕರ ಸತೀಶ್ ಅವರ ಸಮಜಾಯಿಷಿ ಸಹ ಪಡೆದು ಜಿಲ್ಲಾಧಿಕಾರಿಗಳಿಗೆ ಚಿಕ್ಕಮಗಳೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗಳ (ಸರ್ಕಾರಿ ಮೆಡಿಕಲ್ ಕಾಲೇಜು) ಡೀನ್ ಹರೀಶ್ ಸಲ್ಲಿಕೆ ಮಾಡಿದ್ದಾರೆ.
ಕಳೆದ ಐದಾರು ತಿಂಗಳಿನಿಂದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮೆಡಿಕಲ್ ಶಾಪ್ ಮಾಲೀಕರಿಗೆ ಸರ್ಕಾರಿ ಆಸ್ಪತ್ರೆಗಳಿಗೆ ಔಷಧಿ ಪೂರೈಕೆ ಟೆಂಡರ್ ಕೊಡಿಸುವುದಾಗಿ ಹೇಳಿ ಲಕ್ಷಾಂತರ ರು. ವಸೂಲಿ ಮಾಡಿದ ನಕಲಿ ಐಎಎಸ್ ಅಧಿಕಾರಿ ಮಿಥುನ್‌ನನ್ನು ಮೆಡಿಕಲ್ ಶಾಪ್ ಮಾಲೀಕರಿಗೆ ಪರಿಚಯ ಮಾಡಿದ್ದು, ಜಿಲ್ಲಾ ಸರ್ಜನ್ ಡಾ.ಎಚ್.ಬಿ.ಚಂದ್ರಶೇಖರ್ ಎಂಬ ಆರೋಪ ಕೇಳಿ ಬಂದಿದೆ. ಜತೆಗೆ, ಆರೋಗ್ಯ ಇಲಾಖೆ ಐಎಎಸ್ ಅಧಿಕಾರಿ ಎಂದು ಕೇಳಿಕೊಂಡಿದ್ದ ಮಿಥುನ್ ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಯ ಆಡಳಿತ ಚಟುವಟಿಕೆಯಲ್ಲಿ ಹಸ್ತಕ್ಷೇಪ ಮಾಡಿರುವ ಬಗ್ಗೆ ಆರೋಪ ಕೇಳಿ ಬಂದಿತ್ತು.ಮಿಥುನ್ ಬೆಂಗಳೂರಿನ ಅಮೃತ್ ಹಳ್ಳಿ ಪೊಲೀಸ್ ಠಾಣೆಯಲ್ಲಿ ಬಂಧನವಾಗಿ ನಕಲಿ ಐಎಎಸ್ ಎಂದು ತಿಳಿಯುತ್ತಿದ್ದಂತೆ ಜಿಲ್ಲಾ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಪ್ರತಿಭಟನೆ ಸಹ ನಡೆಸಿ ಡಾ.ಚಂದ್ರಶೇಖರ್ ಅಮಾನತುಗೊಳಿಸಿ, ಬಂಧಿಸಬೇಕೆಂದು ಆಗ್ರಹಿಸಿದ್ದರು.
ಅದರಂತೆ ಡೀನ್ ಹರೀಶ್, ಎಚ್.ಬಿ.ಚಂದ್ರಶೇಖರ್ ಅವರನ್ನು ಜಿಲ್ಲಾ ಸರ್ಜನ್ ಹುದ್ದೆಯಿಂದ ಬಿಡುಗಡೆ ಮಾಡಿ, ಆ ಹುದ್ದೆಗೆ ಜಿಲ್ಲಾ ಆಸ್ಪತ್ರೆಯ ರುಕ್ಮಿಣಿಯಮ್ಮ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಸರ್ಜನ್ ಡಾ.ಚಂದ್ರಶೇಖರ್ ಸಾಲಿಮಠ್ ಎಸ್ ಅನ್ನು ಪ್ರಭಾರಿಯಾಗಿ ನಿಯೋಜಿಸಲಾಗಿತ್ತು. ಜತೆಗೆ, ಪ್ರಕರಣದ ಕುರಿತು ವರದಿ ನೀಡುವಂತೆ ಮೆಡಿಕಲ್ ಕಾಲೇಜ್ ಡೀನ್ ಇದೀಗ, ಜಿಲ್ಲಾ ಸರ್ಜನ್ ಹುದ್ದೆಗೆ ಪ್ರಭಾರಿಯಾಗಿ ನಿಯೋಜನೆಗೊಂಡಿರುವ ಡಾ.ಚಂದ್ರಶೇಖರ್ ಸಾಲಿಮಠ್ ಗೆ ನಿರ್ದೇಶಿಸಿದ್ದರು. ಅದರಂತೆ ಡಾ.ಚಂದ್ರಶೇಖರ್ ಸಾಲಿಮಠ್ ಪರಿಶೀಲಿಸಿ ವರದಿ ಸಲ್ಲಿಕೆ ಮಾಡಿದ್ದಾರೆ.---ಬಾಕ್ಸ್--
ಈ ಬೆಳವಣಿಗೆಯ ನಡುವೆ ನಕಲಿ ಐಎಎಸ್ ಅಧಿಕಾರಿ ಮಿಥುನ್ ಮತ್ತು ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆ ಮಾಜಿ ಸರ್ಜನ್ ಡಾ.ಚಂದ್ರಶೇಖರ್ ವಿರುದ್ಧ ಚಿಕ್ಕಮಗಳೂರು ಜಿಲ್ಲಾಸ್ಪತ್ರೆ ಮುಖ್ಯ ದಂತ ಆರೋಗ್ಯಾಧಿಕಾರಿ ಡಾ. ಪ್ರೇಮಕುಮಾರ್ ಅವರಿಗೆ ಈ ಜೋಡಿ ಲಕ್ಷಾಂತರ ರೂಪಾಯಿ ವಂಚಿಸಿರುವ ಕುರಿತು ಡಾ. ಪ್ರೇಮಕುಮಾರ್ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಯುತ್ತಿದೆ.ಫೋಟೋ