ಶಿರಾಳಕೊಪ್ಪದಲ್ಲಿ ಸಂಭ್ರಮದ ಗಣರಾಜ್ಯ ದಿನ

KannadaprabhaNewsNetwork |  
Published : Jan 27, 2025, 12:47 AM IST
ಗಣರಾಜ್ಯೋತ್ಸವ ಆಚರಣೆ.- | Kannada Prabha

ಸಾರಾಂಶ

ಶಿರಾಳಕೊಪ್ಪ ಪಟ್ಟಣದಲ್ಲಿ ೭೬ನೇ ಗಣರಾಜ್ಯೋತ್ಸವವನ್ನು ಅತ್ಯಂತ ಸಂಭ್ರಮದಿಂದ ಆಚರಣೆ ಮಾಡಲಾಯಿತು. ಇಂದಿರಾಗಾಂಧಿ ಕೀಡಾಂಗಣದಲ್ಲಿ ನಡೆದ ಧ್ವಜಾರೋಹಣವನ್ನು ಪುರಸಭೆ ಅಧ್ಯಕ್ಷೆ ಮಮತಾ ನಿಂಗಪ್ಪ ನೆರವೇರಿಸಿದರು.

ವಿವಿಧ ಶಾಲೆ ಮಕ್ಕಳಿಂದ ಮಹಾ ಪುರುಷರ ದಿರಿಸು

ಕನ್ನಡಪ್ರಭ ವಾರ್ತೆ ಶಿರಾಳಕೊಪ್ಪ

ಶಿರಾಳಕೊಪ್ಪ ಪಟ್ಟಣದಲ್ಲಿ ೭೬ನೇ ಗಣರಾಜ್ಯೋತ್ಸವವನ್ನು ಅತ್ಯಂತ ಸಂಭ್ರಮದಿಂದ ಆಚರಣೆ ಮಾಡಲಾಯಿತು. ಇಂದಿರಾಗಾಂಧಿ ಕೀಡಾಂಗಣದಲ್ಲಿ ನಡೆದ ಧ್ವಜಾರೋಹಣವನ್ನು ಪುರಸಭೆ ಅಧ್ಯಕ್ಷೆ ಮಮತಾ ನಿಂಗಪ್ಪ ನೆರವೇರಿಸಿದರು.

ನಂತರ ಮುಖ್ಯಾಧಿಕಾರಿ ಹೇಮಂತ್ ಡೊಳ್ಳೆ ಮಾತನಾಡಿ, ಜನರಿಂದ ಜನರಿಗಾಗಿ ಜನರಿಗೋಸ್ಕರ ಇರುವಂತಹ ದೇಶ ನಮ್ಮದು.ಇಲ್ಲಿ ಇರುವಂತಹ ನಾವೆಲ್ಲರೂ ಸಹೋದರರಂತೆ ಇದ್ದು ದೇಶದ ಪ್ರಗತಿಗೆ ಶ್ರಮಿಸಬೇಕು ಎಂಬುದೇ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಆವರ ಆಶಯವಾಗಿದೆ ಎಂದರು.

ಪ್ರಾರಂಭದಲ್ಲಿ ಪಟ್ಟಣದ ವಿವಿದ ಶಾಲೆಯ ಮಕ್ಕಳು ದೇಶದ ಮಹಾ ಪುರುಷರ ಪೋಷಾಕು ಧರಿಸಿದರು. ಪ್ರಭಾತ್ ಪೇರಿಯಲ್ಲಿ ಸಾವಿರಾರು ಮಕ್ಕಳು ಭಾಗವಹಿಸಿದ್ದು, ಸೊರಬ ರಸ್ತೆಯ ಇಂದಿರಾಗಾಂಧಿ ಕ್ರೀಡಾಂಗಣದಲ್ಲಿ ಕೊನೆಗೊಂಡಿತು.

ಪುರಸಭೆ ಉಪಾಧ್ಯಕ್ಷ ಮುಸೀರ್ ಅಹಮದ್‌, ಇದೊಂದು ರಾಷ್ಟ್ರೀಯ ಹಬ್ಬ, ಕೆಲವು ಶಾಲೆಯ ಶಿಕ್ಷಕರು ಹಾಗೂ ಆಡಳಿತ ಮಂಡಳಿಗಳಿಗೆ ಕರೆಕೊಟ್ಟರೂ ಗೈರು ಆಗಿದ್ದಾರೆ. ಅದಿಕಾರಿಗಳು ಅಂತಹವರಿಗೆ ನೋಟಿಸ್‌ ಕೊಟ್ಟು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಪಪಂ ಮಾಜಿ ಸದಸ್ಯ ಗಂಗಾಧರ ಶೆಟ್ಟರ್ ಮಾತನಾಡಿ, ಪುರಸಭೆಯಿಂದ ಈ ಹಿಂದೆ ರಾಷ್ಟ್ರೀಯ ಕಾರ್ಯಕ್ರಮಗಳಿಗೆ ಪಟ್ಟಣದ ಸ್ವಾತಂತ್ರ್ಯ ಹೋರಾಟಗಾರರು, ಪುರಸಬೆ ಮಾಜಿ ಅಧ್ಯಕ್ಷರು, ಸದಸ್ಯರನ್ನು ಪ್ರಮುಖರನ್ನು ಆಹ್ವಾನಿಸಲಾಗುತ್ತಿತ್ತು. ಆದರೆ ಈಗ ಆ ವ್ಯವಸ್ಥೆ ದೂರವಾಗಿರುವದು ವಿಷಾದದ ಸಂಗತಿ ಎಂದರು.

ಉಪಾಧ್ಯಕ್ಷ ಮುದಸೀರ್ ಅಹಮದ್, ಮಹಬಲೇಶ್, ಮಕಬುಲ್ ಸಾಬ್, ನಿರ್ಮಲಾ ಪ್ರಕಾಶ್, ಪುರಸಭೆ ಮ್ಯಾನೇಜರ್ ನಿರಂಜನ್ ಸೇರಿದಂತೆ ಹಲವಾರು ಪ್ರಮುಖರು ಎಲ್ಲಾ ಶಾಲೆ ಕಾಲೇಜಿನ ಶಿಕ್ಷಕರು ಭಾಗವಹಿಸಿದ್ದರು.ಪೋಟೋಕ್ಯಾಪ್ಷನ್-೨೬ಕೆ.ಎಸ್ ಎಚ್ ಆರ್-೧-೨-ಪಟ್ಟಣದ ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ಪುರಸಭೆಯಿಂದ ನಡೆದ ಧ್ವಜಾರೋಹಣವನ್ನು ಪುರಸಭೆ ಅಧ್ಯೆಕ್ಷೆ ಮಮತಾ ನಿಂಗಪ್ಪ ನೆರವೇರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!