ದಾಂಡೇಲಿ: ದಾಂಡೇಲಿ ತಾಲೂಕಿನ ಆಲೂರು ಗ್ರಾ.ಪಂ ವ್ಯಾಪ್ತಿಗೆ ಬರುವ ಹಾಲಮಡ್ಡಿ ಮತ್ತು ಕೇರವಾಡ ಗ್ರಾಮಗಳ ಕುಡಿಯುವ ನೀರಿನ ಟ್ಯಾಂಕ್‌ಗಳನ್ನು ಕೂಡಲೇ ಸ್ವಚ್ಛಗೊಳಿಸಬೇಕೆಂದು ಆಗ್ರಹಿಸಿ, ಯುವ ಕರ್ನಾಟಕ ಭೀಮ್ ಸೇನೆ ಯುವ ಶಕ್ತಿ ಸಂಘದ ವತಿಯಿಂದ ಆಲೂರು ಗ್ರಾಮ ಪಂಚಾಯತ್‌ನ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಬುಧವಾರ ಮನವಿ ಪತ್ರ ಸಲ್ಲಿಸಲಾಯಿತು.
ಜನರ ಆರೋಗ್ಯದ ದೃಷ್ಟಿಯಿಂದ ಕೂಡಲೇ ಎರಡೂ ಗ್ರಾಮಗಳ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸಿ, ಶುದ್ಧ ಕುಡಿಯುವ ನೀರು ಪೂರೈಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಮುನ್ನಾ ಬಾಬಾಸಾಬ್ ಸಾಂಕ್ಲಾ, ದಾಂಡೇಲಿ ತಾಲೂಕಾಧ್ಯಕ್ಷ ಗುರುನಾಥ ಘಾಡಿ, ಸಂಘಟನೆಯ ಪ್ರಮುಖರಾದ ಅಶೋಕ ಚಿಕ್ಕಪ್ಪದೋಳ, ರಾಬರ್ಟ್ ಮಹಾದಾಸ, ಬಾನು ಅಮ್ಜಾದ್‌ಸಾಬ್ ವರದಿ, ಖಾಸಿಂ ಶೇಖ್, ವಿಜಯ್ ಎಂ., ಸಾದಿಕ್ ಆರ್.ಸಿ. ವಿಜಯ್ ಮಲ್ಕಾ, ಹರೀಶ್ ಮಸಾಲೆಗಾರ್, ಸಾದಿಕ್ ಚಪ್ಪರಬಂದ್, ರಾಬರ್ಟ್ ಮಾದಾಸ್, ಮೌಲಾ ಮತ್ತು ವಿನಯ್ ಬಚ್ಚಲ್ ಉಪಸ್ಥಿರಿದ್ದರು.