ವಕ್ಫ್ ಆಸ್ತಿ ಅತಿಕ್ರಮಣ ತೆರವಿಗೆ ಮನವಿ

KannadaprabhaNewsNetwork | Published : Jul 4, 2024 1:14 AM

ಸಾರಾಂಶ

ಕನ್ನಡಪ್ರಭ ವಾರ್ತೆ ಇಳಕಲ್ಲ ಪಟ್ಟಣದ ಮುರ್ತುಜಾ ಷಾ ಖಾದ್ರಿ ದರ್ಗಾದಲ್ಲಿ ಹಾಗೂ ವಕ್ಫ್‌ ಆಸ್ತಿಯ ನಿರ್ವಹಣೆ ಇಲ್ಲದ್ದರಿಂದ ಕಳೆದೆರಡು ತಿಂಗಳಿನಿಂದ ತ್ಯಾಜ್ಯ ತುಂಬಿದ್ದು, ಆಸ್ತಿಯಲ್ಲಿ ವಕ್ಫ್ ಮಂಡಳಿ ಅನುಮತಿ ಇಲ್ಲದೆ ಕೆಲವರು ಅನಧಿಕೃತ ಕೈಗಾರಿಕೆ ಆರಂಭಿಸಿದ್ದಾರೆ. ಕೆಲವರು ವಕ್ಫ್ ಕಾಯ್ದೆಯನ್ನು ಸಂಪೂರ್ಣ ಉಲ್ಲಂಘಿಸಲಾಗಿದೆ. ಈ ಬಗ್ಗೆ ಕ್ರಮಕೈಗೊಳ್ಳುವಂತೆ ತಹಸೀಲ್ದಾರ್‌ ಹಾಗೂ ದರ್ಗಾದ ಆಡಳಿತಾಧಿಕಾರಿಗೆ ಜಿಲ್ಲಾ ವಕ್ಫ್ ಮಂಡಳಿಯ ಅಧ್ಯಕ್ಷ ಮೆಹಬೂಬ ಸರಕಾವಸ ಮನವಿ ಸಲ್ಲಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಇಳಕಲ್ಲ

ಪಟ್ಟಣದ ಮುರ್ತುಜಾ ಷಾ ಖಾದ್ರಿ ದರ್ಗಾದಲ್ಲಿ ಹಾಗೂ ವಕ್ಫ್‌ ಆಸ್ತಿಯ ನಿರ್ವಹಣೆ ಇಲ್ಲದ್ದರಿಂದ ಕಳೆದೆರಡು ತಿಂಗಳಿನಿಂದ ತ್ಯಾಜ್ಯ ತುಂಬಿದ್ದು, ಆಸ್ತಿಯಲ್ಲಿ ವಕ್ಫ್ ಮಂಡಳಿ ಅನುಮತಿ ಇಲ್ಲದೆ ಕೆಲವರು ಅನಧಿಕೃತ ಕೈಗಾರಿಕೆ ಆರಂಭಿಸಿದ್ದಾರೆ. ಕೆಲವರು ವಕ್ಫ್ ಕಾಯ್ದೆಯನ್ನು ಸಂಪೂರ್ಣ ಉಲ್ಲಂಘಿಸಲಾಗಿದೆ. ಈ ಬಗ್ಗೆ ಕ್ರಮಕೈಗೊಳ್ಳುವಂತೆ ತಹಸೀಲ್ದಾರ್‌ ಹಾಗೂ ದರ್ಗಾದ ಆಡಳಿತಾಧಿಕಾರಿಗೆ ಜಿಲ್ಲಾ ವಕ್ಫ್ ಮಂಡಳಿಯ ಅಧ್ಯಕ್ಷ ಮೆಹಬೂಬ ಸರಕಾವಸ ಮನವಿ ಸಲ್ಲಿಸಿದ್ದಾರೆ.

ಪಟ್ಟಣದಲ್ಲಿ ಮಾಧ್ಯಮಗಳಿಗೆ ಈ ಬಗ್ಗೆ ಮಾಹಿತಿ ನೀಡಿರುವ ಅವರು, ತಾನು ಸ್ಥಳ ಪರಿಶೀಲನೆ ಸಂದರ್ಭದಲ್ಲಿ ಮಸೀದಿಯಲ್ಲಿ ಧ್ವನಿವರ್ಧಕ ಹಾಗೂ ಯುಪಿಎಸ್ ದುರಸ್ತಿಯಲ್ಲಿವೆ. ಬಲ್ಬ್‌ಗಳು ಕೆಟ್ಟಿದ್ದು, ಸ್ವಚ್ಛತೆ ಕೂಡ ಇಲ್ಲದಿರುವುದನ್ನು ಪೌರಾಯುಕ್ತರ ಗಮನಕ್ಕೆ ತಂದಿದ್ದಾಗಿ ತಿಳಿಸಿದರು.

ದರ್ಗಾಗೆ ಸಂಬಂಧಿಸಿದ ಜಮೀನಿನಲ್ಲಿ ಕೈಗಾರಿಕೆಯೊಂದು ಆರಂಭಿಸಿದ್ದು, ವಕ್ಫ್‌ ಬೋರ್ಡ್‌ನಿಂದ ಇದಕ್ಕೆ ಯಾವುದೇ ಅನುಮತಿ ಪಡೆದಿಲ್ಲ. ಅಲ್ಲದೇ, ಲೀಜ್ ಮತ್ತು ಬಾಡಿಗೆಯಾಗಲಿ ಪಡೆದಿಲ್ಲ. ಇದು ವಕ್ಫ್‌ ಕಾಯ್ದೆ ಉಲ್ಲಂಘನೆಯಾಗಿದೆ ಎಂದು ದೂರಿದ ಅವರು, ಈ ಘಟಕ ನಗರಸಭೆ, ಮಾಲಿನ್ಯ ನಿಯಂತ್ರಣ ಮಂಡಳಿ, ಎಂ.ಎಸ್.ಎಮ್.ಇ ಅಗ್ನಿಶಾಮಕ ಇಲಾಖೆ ಸೇರಿದಂತೆ ವಿದ್ಯುತ ಸಹ ಪಡೆದಿರುವುದು ಕಂಡು ಬಂದಿದೆ. ತಕ್ಷಣವೆ ಪರಿಶೀಲನೆ ಮಾಡಿ ಲೈಸನ್ಸ್ ಮತ್ತು ಪರವಾನಗಿಗಳನ್ನು ಪಡೆಯಲಾಗಿದೆಯೇ ಎಂದು ತಹಸೀಲ್ದಾರ್‌ರು ತನಿಖೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.-----------------------------------

ಬಾಕ್ಸ್

ಕಾಂಪೌಂಡ್‌ಗೆ ₹ 20 ಲಕ್ಷ ಮಂಜೂರು

ವಕ್ಫ್ ಆಸ್ತಿಗಳ ರಕ್ಷಣೆಗೆ ವಕ್ಫ್ ಮಂಡಳಿಯಿಂದ ಕಂಪೌಂಡ್‌ ನಿರ್ಮಿಸಲು ಶಾಸಕ ವಿಜಯಾನಂದ ಕಾಶಪ್ಪನವರ ಮತ್ತು ಮಂಡಳಿ ಅಧ್ಯಕ್ಷ ಕೆ. ಅನ್ವರಬಾಷಾ ಅವರನ್ನು ಕೋರಿದ್ದರು. ಅದರಂತೆ ೦೨-೧೨-೨೦೨೩ ರ ಅನುಕ್ರಮ ಸಂಖ್ಯೆ ೧೬೮ರಲ್ಲಿ ₹ ೨೦ ಲಕ್ಷ ಮಂಜೂರಿ ಮಾಡಿದ್ದಾರೆ. ಆದೇಶದ ಪ್ರತಿಯಲ್ಲಿ ಅ.ನಂ.ಸಂಖ್ಯೆ: ೧೬೯ರಲ್ಲಿ ₹ ೨೦ ಲಕ್ಷ ಅನುದಾನ ಇಳಕಲ್ಲ ಅಂಜುಮನ್ ಸಂಸ್ಥೆಗೂ ಮಂಜೂರಾಗಿದ್ದು, ಈ ಆದೇಶದ ಪ್ರತಿಯನ್ನು ಇದೆ ಸಂದರ್ಭದಲ್ಲಿ ತಹಸೀಲ್ದಾರ್‌ಗೆ ಸರ್ಕಾವಸ ನೀಡಿದ್ದಾರೆ.

----------------------------------

-ಕೋಟ್‌

ವಕ್ಫ್ ಕಾಯ್ದೆಯ ಪ್ರಕಾರ ತಪ್ಪು ಮಾಡಿರುವುದು ಕಂಡು ಬಂದರೆ ಗಂಭೀರವಾಗಿ ಪರಿಗಣಿಸಲಾಗುವುದು. ಸರ್ಕಾರದ ಆದೇಶ ಮತ್ತು ನ್ಯಾಯಾಲಯದ ಆದೇಶದ ಕಟ್ಟುನಿಟ್ಟಿನ ಕ್ರಮ ಪಾಲನೆಯಲ್ಲಿ ಯಾವುದೇ ಕಾರಣಕ್ಕೂ ಹಿಂಜರಿಕೆ ಮಾಡುವುದಿಲ್ಲ.

ಸತೀಶ ಕೂಡಲಗಿ, ತಹಸೀಲ್ದಾರ್‌.

Share this article