ಮುಂಡರಗಿ: ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ನೌಕರರ ವಿವಿಧ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿ ಸೋಮವಾರ ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಮುಂಡರಗಿ ತಾಲೂಕಿನ ಬಹುತೇಕ ಎಲ್ಲ ಇಲಾಖೆ ನೌಕರರನ್ನು ಲೋಕಸಭೆ ಚುನಾವಣೆ ಕರ್ತವ್ಯಕ್ಕೆ ನಿಯೋಜನೆ ಮಾಡಿದ್ದು, ಮುಂಡರಗಿ ತಾಲೂಕು ಅರ್ಧಭಾಗ ರೋಣ, ಇನ್ನರ್ಧ ಭಾಗ ಶಿರಹಟ್ಟಿಗೆ ಬರುವುದರಿಂದ ಚುನಾವಣೆ ಕರ್ತವ್ಯಕ್ಕೆ ಹೋಗುವವರಿಗೆ ಎರಡು ಕ್ಷೇತ್ರಗಳಲ್ಲಿ ತರಬೇತಿಗೆ ಹಾಕುವುದರಿಂದ ತರಬೇತಿಗೆ ಹಾಜರಾಗಲು ನಿಗದಿತ ಸಮಯಕ್ಕೆ ಬಸ್ಸಿನ ವ್ಯವಸ್ಥೆ ಇಲ್ಲದೆ ಇದ್ದುದರಿಂದ ಚುನಾವಣೆ ಕರ್ತವ್ಯದ ಮೇರೆಗೆ ತರಬೇತಿ ತೆರಳುವವರಿಗೆ ತೊಂದರೆಯಾಗುತ್ತದೆ. ಆದ್ದರಿಂದ ತರಬೇತಿಗೆ ನಿಯೋಜನೆಗೊಂಡಿರುವ ನೌಕರರನ್ನು ಶಿರಹಟ್ಟಿ ಹಾಗೂ ರೋಣ ಪಟ್ಟಣಕ್ಕೆ ಕರೆದುಕೊಂಡು ಹೋಗಿ ಬರಲು ವಾಹನದ ವ್ಯವಸ್ಥೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ತಾಲೂಕು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನಾಗರಾಜ ಹಳ್ಳಿಕೇರಿ, ಕಾರ್ಯದರ್ಶಿ ಶಂಕರ ಸರ್ವದೆ, ತಾಲೂಕು ಪ್ರಾ.ಶಾ. ಶಿಕ್ಷಕರ ಸಂಘದ ಅಧ್ಯಕ್ಷ ಶಿವಕುಮಾರ ಸಜ್ಜನರ, ಫಕ್ರುದ್ದೀನ್ ನದಾಫ್, ಎ.ಡಿ. ಬಂಡಿ, ಎಂ.ಆರ್. ಕುಲಕರ್ಣಿ, ನಾಗೇಂದ್ರ ಪಟ್ಟಣಶೆಟ್ಟಿ, ಎಚ್.ಎಂ. ಪಾಟೀಲ, ವಿ.ಎನ್. ಪೂಜಾರ, ಎಸ್.ಸಿ. ಹರ್ತಿ, ವಿ.ಎ. ಕುಂಬಾರ, ಶ್ರೀಧರ ದಾನಿ, ಅರ್ಜುನ ಮುತ್ತಾನವರ, ಬಸವರಾಜ ಹೆಬ್ಬಲಿ, ಎಚ್.ಎಂ.
ಕಾತರಕಿ, ಮನೋಹರ ಎಸ್, ವಿಶ್ವನಾಥ ಉಳ್ಳಾಗಡ್ಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ತಹಸೀಲ್ದಾರ್ ಧನಂಜಯ ಮಾಲಗತ್ತಿಯವರಿಗೆ ಮನವಿ ಪತ್ರ ಸಲ್ಲಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.