ದೇವರಹಿಪ್ಪರಗಿ:ತಾಲೂಕಿನಲ್ಲಿ ಆಕಸ್ಮಿಕ ಬೆಂಕಿ ಅವಘಡದಿಂದ ಆಗುವ ಹಾನಿ ತಪ್ಪಿಸಲು ರಾಜ್ಯ ಅಗ್ನಿಶಾಮಕ ದಳ ಹಾಗೂ ತುರ್ತು ಸೇವೆಗಳ ಇಲಾಖೆ, ಪಟ್ಟಣದಲ್ಲಿ ಅಗ್ನಿಶಾಮಕ ಠಾಣೆ ಆರಂಭಕ್ಕೆ ಮುಂದಾಗಿದೆ. ಈ ಕುರಿತು ಕನ್ನಡಪ್ರಭ ಪತ್ರಿಕೆ ಕಳೆದ ವಾರ ತಾಲೂಕಾಗಿ 12 ವರ್ಷಗಳಾದ್ರೂ ಅಗ್ನಿಶಾಮಕ ಠಾಣೆಗಳೇ ಇಲ್ಲ ಎಂಬ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು. ವರದಿ ಫಲಶ್ರುತಿಯಾಗಿ ಬುಧವಾರ ತಹಸೀಲ್ದಾರ್ ಪ್ರಕಾಶ ಸಿಂದಗಿ ಅವರಿಗೆ ಜಿಲ್ಲಾ ಡಿಎಫ್ಒ ಶಶಿಧರ ನೀಲಗಾರ ನಿವೇಶನಕ್ಕಾಗಿ ಮನವಿ ಸಲ್ಲಿಸಿದರು.

ತಾಲೂಕಿನ ಜನರ ಬಹುದಿನಗಳ ಬೇಡಿಕೆಯಾಗಿದ್ದ ಅಗ್ನಿಶಾಮಕ ಠಾಣೆ ನಿರ್ಮಾಣಕ್ಕೆ ಶಾಸಕ ರಾಜುಗೌಡ ಪಾಟೀಲ ಕುದರಿಸಾಲವಾಡಗಿ ಅವರು ರೈತರ ಹಾಗೂ ಸಾರ್ವಜನಿಕರ ತುರ್ತು ಸೇವೆಗೆ ಅಗ್ನಿಶಾಮಕ ಠಾಣೆ ನಿರ್ಮಾಣಕ್ಕೆ ನಿವೇಶನ ಒದಗಿಸಲು ತಹಸೀಲ್ದಾರ್ ಅವರಿಗೆ ಸೂಚಿಸಿದ್ದಾರೆ. ಮುಂದಿನ ದಿನಗಳಲ್ಲಿ ಅಗ್ನಿಶಾಮಕ ಠಾಣೆ ನಿರ್ಮಾಣಕ್ಕೆ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.ಮನವಿ ಸಲ್ಲಿಸಿದ ನಂತರ ಜಿಲ್ಲಾ ಅಗ್ನಿಶಾಮಕ ದಳದ ಅಧಿಕಾರಿ ಶಶಿಧರ ನೀಲಗಾರ ಮಾತನಾಡಿ, ನೂತನ ತಾಲೂಕಿನಲ್ಲಿ ರೈತರ ಜಮೀನುಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿ ಅಪಾರ ಹಾನಿ ಸಂಭವಿಸುತ್ತಿವೆ. ಸಮೀಪದ ಜಾಗದಲ್ಲಿ ಅಗ್ನಿಶಾಮಕ ದಳದ ಕಚೇರಿಗಳಿದ್ದರೆ, ಅನುಕೂಲವಾಗಲಿದೆ. ಅದಕ್ಕಾಗಿ ತಹಸೀಲ್ದಾರ್ ಪ್ರಕಾಶ ಸಿಂದಗಿ ಹಾಗೂ ಪಪಂ ಮುಖ್ಯಾಧಿಕಾರಿ ಸುರೇಖಾ ಬಾಗಲಕೋಟ ಅವರಿಗೆ ಮನವಿ ಸಲ್ಲಿಸಿ ಪಟ್ಟಣದಲ್ಲಿ ಆದಷ್ಟು ಬೇಗ ಸೂಕ್ತ ನಿವೇಶನಕ್ಕೆ ಮನವಿ ಮಾಡಲಾಗಿದೆ. ಅಗ್ನಿಶಾಮಕ ಕಚೇರಿ ಕ್ವಾಟ್ರಸ್‌ಗಳ ನಿರ್ಮಾಣಕ್ಕೆ ಸರ್ಕಾರ ಅನುದಾನ ನೀಡಲಿದ್ದು, ಠಾಣೆ ಆರಂಭಗೊಂಡ ನಂತರ ಕೂಡಲೇ ಸಿಬ್ಬಂದಿ ನೇಮಕವಾಗಲಿದೆ ಎಂದು ತಿಳಿಸಿದರು.ನೂತನ ತಾಲೂಕಿಗೆ ಬೇಕಾದ ಕಚೇರಿಗಳ ಸಲುವಾಗಿ ಪಟ್ಟಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸ್ಥಳ ಪರಿಶೀಲನೆ ನಡೆಸಿದ್ದು, ಕೆಲ ನಿವೇಶನಗಳು ಕೋರ್ಟ್ ವಿಚಾರಣೆಯಲ್ಲಿವೆ. ಅವುಗಳನ್ನು ಶೀಘ್ರ ಸಮಸ್ಯೆ ಬಗೆಹರಿಸಲಾಗುವುದು. ಶಾಸಕರು, ಅಗ್ನಿಶಾಮಕ ಠಾಣೆ ನಿರ್ಮಾಣಕ್ಕೆ ಹಾಗೂ ಇನ್ನಿತರ ಕಚೇರಿಗಳ ಸಲುವಾಗಿ ಸೂಕ್ತ ಸ್ಥಳ ಪರಿಶೀಲಿಸಿ ನಿವೇಶನ ಒದಗಿಸಲು ಸೂಚಿಸಿದ್ದಾರೆ ಎಂಧು ತಹಸೀಲ್ದಾರ್ ಪ್ರಕಾಶ ಸಿಂದಗಿ ಹೇಳಿದರು.
-----
ಕೋಟ್
ಆಲಮೇಲಗೆ ನೂತನ ತಾಲೂಕು ಅಗ್ನಿಶಾಮಕ ಠಾಣೆಗೆ ಸರ್ಕಾರದಿಂದ ಮಂಜೂರಾತಿ ನೀಡಲಾಗಿದೆ. ಶೀಘ್ರ ನಿವೇಶನ ಒದಗಿಸುವ ಮೂಲಕ ಸಿಂದಗಿ ಮತಕ್ಷೇತ್ರದ ಜೊತೆ ನೂತನ ಆಲಮೇಲ ಪಟ್ಟಣಕ್ಕೆ ಬೇಕಾದ ಸರ್ಕಾರಿ ಕಚೇರಿಗಳ ನಿರ್ಮಾಣಕ್ಕೆ ಈ ಕುರಿತು ವಿಶೇಷ ಮುತುವರ್ಜಿ ವಹಿಸಿ ಸರ್ಕಾರದಿಂದ ಇನ್ನಷ್ಟು ಯೋಜನೆಗಳನ್ನು ಜಾರಿಗೆ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಲಾಗುವುದು.
ಅಶೋಕ ಮನಗೂಳಿ, ಸಿಂದಗಿ ಕ್ಷೇತ್ರದ ಶಾಸಕಈ ವೇಳೆ ಅಧಿಕಾರಿಗಳಾದ ಪ್ರಭು ಸಣ್ಣಕ್ಕಿ, ಮುಖಂಡರಾದ ಸೋಮು ದೇವೂರ, ಹಣಮಂತ ಹೀರಾಪೂರ ಸೇರಿ ಹಲವಾರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.