ಕನ್ನಡ ಪ್ರಭವಾರ್ತೆ ಮುಧೋಳ
ಶುಕ್ರವಾರ ಪ್ರತಿಭಟನೆ ಮೂಲಕ ತಹಸೀಲ್ದಾರ್ ಕಚೇರಿ ಆಗಮಿಸಿದ ಪದಾಧಿಕಾರಿಗಳು, ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.
ಡಿಎಸ್‌ಎಸ್ ಬೆಳಗಾವಿ ವಿಭಾಗ ಸಂಚಾಲಕ ಗಣೇಶ ಮೇತ್ರಿ ಮಾತನಾಡಿ, ದೇಶದ ಪ್ರಧಾನಿಯವರು ಕಳೆದ ವರ್ಷ ಹರ್ ಘರ್ ತಿರಂಗಾ ಆಭಿಯಾನಕ್ಕೆ ಪ್ರೇರೆಪಿಸಿದ್ದನ್ನು ಮರೆತಿರುವ ಸಿ.ಟಿ.ರವಿ ಅದೇ ತಿರಂಗಾ ಧ್ವಜಕ್ಕೆ ಅವಮಾನ ಮಾಡಿ ತಾಲಿಬಾನಿ ಧ್ವಜಕ್ಕೆ ಹೋಲಿಸಿ ಅವಮಾನ ಮಾಡುವ ರೀತಿಯಲ್ಲಿ ಮಾತನಾಡಿರುವುದು ಭಾರತೀಯರೆಲ್ಲರ ಮನಸ್ಸಿಗೆ ನೋವು, ಆತಂಕ ಮತ್ತು ಆಘಾತ ತಂದಿದೆ. ದೇಶವಿರೋಧಿ ಹೇಳಿಕೆ ನೀಡುವ ಮೂಲಕ ಕೋಮು ಗಲಭೆ ಮತ್ತು ಸಮಾಜದಲ್ಲಿ ಅಶಾಂತಿ ಉಂಟುಮಾಡುವ ಹುನ್ನಾರ ಕಂಡುಬರುತ್ತಿದ್ದು, ಕೂಡಲೇ ದೇಶದ್ರೋಹ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.ದಲಿತ ಸಾಹಿತ್ಯ ಪರಿಷತ್ ಅಧ್ಯಕ್ಷ ಲಕ್ಷ್ಮಣ ಮಾಲಗಿ, ಪ್ರಮುಖರಾದ ಪ್ರಕಾಶ ತಳಗೇರಿ, ರವಿ ಕಾಂಬಳೆ ಮಾತನಾಡಿ ಸಿ.ಟಿ.ರವಿಯವರ ಮೇಲೆ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದರು.
ಕುಮಾರ ಕಾಳಮ್ಮನವರ, ಮಂಜುನಾಥ ಬಾವಿದಂಡಿ, ಸದಾಶಿವ ತಳಗೇರಿ, ಯಶವಂತ ಮಾದರ, ಹುಸನಪ್ಪ ಅವರಾದಿ, ಮಾದೇವ ರೂಗಿ, ಹಣಮಂತ ಪೂಜಾರಿ, ಶಿವಾನಂದ ಮ್ಯಾಗೇರಿ, ಶೇಖರ ಕಾಂಬಳೆ ಇತರರು ಇದ್ದರು.