ಕನ್ನಡಪ್ರಭ ವಾರ್ತೆ ಹನೂರು
ಭಾರತೀಯ ಕಿಸಾನ್ ಸಂಘ ಹನೂರು ತಾಲೂಕು ಘಟಕದ ವತಿಯಿಂದ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಶಾಸಕ ಎಂಆರ್ ಮಂಜುನಾಥ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.ಹನೂರು ಕ್ಷೇತ್ರದ ಅಭಿವೃದ್ಧಿಗೆ ನನ್ನದೇ ಆದ ಚಿಂತನೆಯನ್ನು ಇಟ್ಟಿಕೊಂಡಿರುವೆ ವಿವಿಧ ಇಲಾಖೆವಾರು ರೈತರಿಗೆ ಸಿಗಬೇಕಿರುವ ಎಲ್ಲಾ ಅನುಕೂಲಗಳನ್ನು ಕಲ್ಪಿಸಲು ಸದಾ ಸಿದ್ದನಿದ್ದು ಕ್ಷೇತ್ರದ ಅಭಿವೃದ್ಧಿಯಲ್ಲಿ ಎಲ್ಲರೂ ಒಗ್ಗೂಡಿ ಶ್ರಮಿಸೋಣ ಸರ್ಕಾರದಲ್ಲಿ ಅನುದಾನ ಕೊರೆತೆ ಇದ್ದು, ಅನುದಾನ ಲಭ್ಯತೆಯ ಆಧಾರದ ಮೇಲೆ ಅಭಿವೃದ್ದಿ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು ಮುಂದಿನ ಸಭೆ ಕರೆದು ಸಮಸ್ಯೆಗಳ ಬಗ್ಗೆ ಅವಲೋಕನ ಮಾಡಿದಾಗ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ನಿಮ್ಮೆಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡುವೆ ಎಂದರು.ಹನೂರು ತಾಲೂಕಿನ ವಿವಿಧ ಗ್ರಾಮಕ್ಕೆ ಸಂಪರ್ಕಕಲ್ಪಿಸುವ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿದ್ದು ಡಾಂಬರೀಕರಣ ಮಾಡಬೇಕು, ರಾಮನಗುಡ್ಡೆ, ಕೆರೆ ಉಬ್ಬೆ ಹುಣಸೆ, ಕೆರೆ ಅಜ್ಜಿಪುರದ, ಉಡುತೋರೆ ಹಳ್ಳ, ಬಂಡಳ್ಳಿ ಕೆರೆ, ಹಲಗಪುರ ಕೆರೆ, ಹೂಗ್ಯಂನ ಯರಂಬಾಡಿ ಕೆರೆ, ಮಾರ್ಟಳ್ಳಿಯ ಕೀರೆಪಾತಿ ಕೆರೆ, ಮುಂತಾದ ಕೆರೆಗಳಿಗೆ ನೀರು ತುಂಬಿಸಲು ಏತ ನೀರಾವರಿ ಯೋಜನೆಯನ್ನು ಜಾರಿಗೆ ತರಬೇಕು. ರೈತರು ಅನೇಕರು ದೇಸಿ ಗೋವುಗಳನ್ನು ಸಾಕುತ್ತಿದ್ದು ಮೇಯಿಸಲು ಅರಣ್ಯವನ್ನು ಅವಲಂಬಿಸಿರುತ್ತಾರೆ. ಕೆಲವು ತಿಂಗಳಿಂದ ಅರಣ್ಯ ಇಲಾಖೆ ಅರಣ್ಯದಲ್ಲಿ ಮೇಯಿಸುವುದಕ್ಕೆ ನಿರ್ಬಂಧಿಸಿರುತ್ತಾರೆ. ವಿಧಾನಸಭೆಯಲ್ಲಿ ಚರ್ಚೆ ಮಾಡಿ ಗೋವುಗಳನ್ನು ಕಾಡಿನಲ್ಲಿ ಮೇಯಿಸುವುದಕ್ಕೆ ಅನುವು ಕಲ್ಪಿಸಿಕೊಡಿ ಎಂದು ಸಮಸ್ಯೆಗಳನ್ನು ಬಗೆಹರಿಸುವಂತೆ ಕಿಸಾನ್ ಸಂಘದ ಪದಾಧಿಕಾರಿಗಳು ಶಾಸಕರಲ್ಲಿ ಕೋರಿದರು.ಈ ವೇಳೆ ತಾಲೂಕು ಅಧ್ಯಕ್ಷ ಹರೀಶ್, ಗೌರವಾಧ್ಯಕ್ಷ ವಿಶ್ವ, ಜಿಲ್ಲಾ ಕಾರ್ಯದರ್ಶಿ ಭೋಸ್ಕೋ, ಜಿಲ್ಲಾ ಸಮಿತಿ ಸದಸ್ಯರಾದ ಮಣಿಗಾರ್ ಪ್ರಸಾದ್, ರೈತ ಮಹಿಳಾ ಸವಿತಾ, ಯರಂಬಾಡಿ ವಸಂತ್, ಮಹೇಶ್ ಸೇರಿದಂತೆ ಹಲವರು ಹಾಜರಿದ್ದರು.