ನರಸಿಂಹರಾಜಪುರ ವೃತ್ತಕ್ಕೆ ಬೇಗಾನೆ ರಾಮಯ್ಯ ಹೆಸರಿಡಲು ಮನವಿ

KannadaprabhaNewsNetwork |  
Published : Oct 17, 2025, 01:00 AM IST
 ನರಸಿಂಹರಾಜಪುರ ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅದ್ಯಕ್ಷ ಪ್ರಶಾಂತಶೆಟ್ಟಿ, ಮುಖ್ಯಾಧಿಕಾರಿ  ಆರ್.ವಿ.ಮಂಜುನಾಥ್ ಅವರಿಗೆ ಬೇಗಾನೆ ರಾಮಯ್ಯ ಅವರ ಅಭಿಮಾನಿ ಬಳಗದ  ಪ್ರಧಾನ ಸಂಚಾಲಕ ಅಭಿನವ ಗಿರಿರಾಜ್, ಸಹ ಸಂಚಾಲಕ ಕೆ.ಎ.ಅಬೂಬಕರ್ ಮನವಿ ಪತ್ರ ನೀಡಿದರು. | Kannada Prabha

ಸಾರಾಂಶ

ನರಸಿಂಹರಾಜಪುರ, ಪಟ್ಟಣ ವ್ಯಾಪ್ತಿಯ ಯಾವುದಾದರೂ ಒಂದು ವೃತ್ತಕ್ಕೆ ಮಾಜಿ ಸಚಿವ ಬೇಗಾನೆ ರಾಮಯ್ಯ ಹೆಸರು ನಾಮಕರಣ ಮಾಡಲು ಒತ್ತಾಯಿಸಿ ಬೇಗಾನೆ ರಾಮಯ್ಯ ಅಭಿಮಾನಿ ಬಳಗದವರು ಮಂಗಳವಾರ ಪಟ್ಟಣ ಪಂಚಾಯಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ ಶೆಟ್ಟಿ, ಮುಖ್ಯಾಧಿಕಾರಿ ಆರ್.ವಿ.ಮಂಜುನಾಥ್ ಅವರಿಗೆ ಮನವಿ ಸಲ್ಲಿಸಿದರು.

ಬೇಗಾನೆ ರಾಮಯ್ಯ ಅಭಿಮಾನಿ ಬಳಗದ ಪ್ರಧಾನ ಸಂಚಾಲಕ ಅಭಿನವ ಗಿರಿರಾಜ್

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಪಟ್ಟಣ ವ್ಯಾಪ್ತಿಯ ಯಾವುದಾದರೂ ಒಂದು ವೃತ್ತಕ್ಕೆ ಮಾಜಿ ಸಚಿವ ಬೇಗಾನೆ ರಾಮಯ್ಯ ಹೆಸರು ನಾಮಕರಣ ಮಾಡಲು ಒತ್ತಾಯಿಸಿ ಬೇಗಾನೆ ರಾಮಯ್ಯ ಅಭಿಮಾನಿ ಬಳಗದವರು ಮಂಗಳವಾರ ಪಟ್ಟಣ ಪಂಚಾಯಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ ಶೆಟ್ಟಿ, ಮುಖ್ಯಾಧಿಕಾರಿ ಆರ್.ವಿ.ಮಂಜುನಾಥ್ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಬೇಗಾನೆ ರಾಮಯ್ಯ ಅಭಿಮಾನಿ ಬಳಗದ ಪ್ರಧಾನ ಸಂಚಾಲಕ ಅಭಿನವ ಗಿರಿರಾಜ್ ಮಾತನಾಡಿ, ಬೇಗಾನೆ ರಾಮಯ್ಯ ಅವರು ಈ ವರ್ಷ ಏಪ್ರಿಲ್ 24 ರಂದು ಇಹಲೋಕ ತ್ಯಜಿಸಿದ್ದಾರೆ. ಬೇಗಾನೆ ರಾಮಯ್ಯ ಅವರು 1978 ರಲ್ಲಿ ಶೃಂಗೇರಿ ವಿಧಾನ ಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿ ನಂತರ ಗ್ರಾಮೀಣ ಅಭಿವೃದ್ಧಿ ಸಚಿವರಾಗಿ ಪ್ರತಿ ಹಳ್ಳಿ ಗಳಿಗೆ ಬೋರ್ ವೆಲ್ ನೀಡುವ ಮೂಲಕ ಬೋರ್ ವೆಲ್‌ ರಾಮಯ್ಯ ಎಂದು ಪ್ರಸಿದ್ಧಿ ಪಡೆದಿದ್ದರು. ಅವರು ಎನ್‌.ಆರ್‌.ಪುರವನ್ನು ತಮ್ಮ ಕರ್ಮಭೂಮಿಯನ್ನಾಗಿ ಮಾಡಿಕೊಂಡಿದ್ದರು. ಅವರ ನೆನಪಿಗೆ ಪಟ್ಟಣದ ಯಾವುದಾದರೂ ಒಂದು ವೃತ್ತಕ್ಕೆ ಬೇಗಾನೆ ರಾಮಯ್ಯ ವೃತ್ತ ಎಂದು ಹೆಸರು ಇಡಬೇಕು. ಅತಿ ಶೀಘ್ರದಲ್ಲೇ ಬೇಗಾನೆ ರಾಮಯ್ಯ ನುಡಿ ನಮನ ಕಾರ್ಯಕ್ರಮ ಆಯೋಜಿಸ ಲಾಗುವುದು ಎಂದರು.

ಬೇಗಾನೆ ಅಭಿಮಾನಿ ಬಳಗದ ಸಂಚಾಲಕ ಕೆ.ಎ.ಅಬೂಬಕರ್ ಮಾತನಾಡಿ, ಬೇಗಾನೆ ರಾಮಯ್ಯ ಅವರ ಜನಪರ ಖಾಳಜಿ,ಸೇವಾ ಮನೋಭಾವ ಗುರುತಿಸಿ ಅವರ ನೆನಪಿನಲ್ಲಿ ಹಲವು ಕಾರ್ಯಕ್ರಮ ನಡೆಸಲಾಗುವುದು ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜೈಲಲ್ಲೂ ದರ್ಶನ್‌ಗೆ ‘ಅಭಿಮಾನಿಗಳು’ ಕಾಟ!
ನಾಳೆ ಹಲವು ಸಾಧಕರಿಗೆ ಗಾಂಧಿ ಪುರಸ್ಕಾರ ಪ್ರದಾನ