ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಸಾರ್ವಜನಿಕ ಸಮಸ್ಯೆ ಪರಿಹರಿಸಲು ಮನವಿ

KannadaprabhaNewsNetwork |  
Published : Mar 22, 2024, 01:02 AM IST
ಮನವಿ21 | Kannada Prabha

ಸಾರಾಂಶ

ಉಡುಪಿ ಜಿಲ್ಲಾಸ್ಪತ್ರೆಯಲ್ಲಿರುವ ಮೂಲಭೂತ ಸಮಸ್ಯೆಗಳನ್ನು ಬಗೆ ಹರಿಸುವಂತೆ ಕೋರಿ ನಗರಸಭಾ ಸದಸ್ಯ ವಿಜಯ ಕೊಡವೂರು ನೇತೃತ್ವದಲ್ಲಿ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಹಾಗೂ ಉಡುಪಿ ಜಿಲ್ಲಾಸ್ಪತ್ರೆ ಗೆ ನೂತನವಾಗಿ ನಿಯುಕ್ತಿಗೊಂಡ ಸರ್ಜನ್ ಡಾ. ಅಶೋಕ್ ಎಚ್. ಅವರಿಗೆ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಉಡುಪಿಕಳೆದ ಹಲವು ತಿಂಗಳಿನಿಂದ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಪೂರ್ಣ ಕಾಲಿಕ ಸರ್ಜನ್ ನಿಯುಕ್ತಿ ಇಲ್ಲದ ಕಾರಣ ಆಸ್ಪತ್ರೆಯಲ್ಲಿ ಸಾಕಷ್ಟು ಅವ್ಯವಸ್ಥೆ ಆಗಿದ್ದು, ಆಸ್ಪತ್ರೆಗೆ ಬರುವ ರೋಗಿಗಳು ತೊಂದರೆ ಅನುಭವಿಸುತ್ತಿದ್ದರು. ಈ ಸಮಸ್ಯೆಯನ್ನು ಪರಿಹರಿಸಿ ಸಾರ್ವಜನಿಕರಿಗೆ ಉತ್ತಮ ಸೇವೆಯನ್ನು ನೀಡುವಂತೆ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಹಾಗೂ ಉಡುಪಿ ಜಿಲ್ಲಾಸ್ಪತ್ರೆ ಗೆ ನೂತನವಾಗಿ ನಿಯುಕ್ತಿಗೊಂಡ ಸರ್ಜನ್ ಡಾ. ಅಶೋಕ್ ಎಚ್. ಅವರಿಗೆ ನಗರಸಭಾ ಸದಸ್ಯ ವಿಜಯ ಕೊಡವೂರು ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.

ಆಯುಷ್ಮಾನ್ ಭಾರತ್ ಯೋಜನೆಯ ಬಗ್ಗೆ ಜನರಿಗೆ ಸರಿಯಾಗಿ ಮಾಹಿತಿ ನೀಡಿ, ಯೋಜನೆಯ ಸದುಪಯೋಗ ಪಡೆಯಲು ವಿಳಂಭವಿಲ್ಲದೇ ಮಾರ್ಗದರ್ಶನ ನೀಡಬೇಕು, ತುರ್ತು ಸಂದರ್ಭಗಳಲ್ಲಿ ಖಾಸಗಿ ಆಸ್ಪತ್ರೆಗಳಿಗೆ ಹೋದವರಿಗೆ ಯಾವುದೇ ತೊಂದರೆ ನೀಡದೇ ಬೇಕಾದ ಶಿಫಾರಸು ಪತ್ರಗಳನ್ನು ನೀಡಬೇಕು. ಬ್ಲಡ್ ಬ್ಯಾಂಕ್ ನಲ್ಲಿ ರಕ್ತದ ನಿರ್ವಹಣೆಯಲ್ಲಿ ಸಾಕಷ್ಟು ನ್ಯೂನ್ಯತೆಗಳಿದ್ದು, ವೈದ್ಯಾಧಿಕಾರಿಗಳು ಸಾರ್ವಜನಿಕರಿಗೆ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ ಮತ್ತು ಕೇವಲ ಒಂದು ಯುನಿಟ್ ರಕ್ತವನ್ನು ಯಾವುದೇ ರಕ್ತದಾನಿಯ ಮರುಪೂರೈಕೆ ಇಲ್ಲದೆ ನೀಡುತ್ತಿದ್ದು, ಹೆಚ್ಚುವರಿ ರಕ್ತ ಬೇಕಾದಲ್ಲಿ ಕಡ್ಡಾಯವಾಗಿ ರಕ್ತದಾನಿಯನ್ನು ಕರೆ ತರುವಂತೆ ಒತ್ತಾಯಿಸುವುದು. ಸಂಜೆ 4 ಗಂಟೆಯ ನಂತರ ರಕ್ತನಿಧಿ ವಿಭಾಗದಲ್ಲಿ ರಕ್ತದಾನಕ್ಕೆ ಅವಕಾಶ ಇಲ್ಲದಿರುವುದು, ರಕ್ತದ ತುರ್ತು ಅವಶ್ಯಕತೆ ಇದ್ದರೂ ವೈದ್ಯರು ಸಂಪರ್ಕಕ್ಕೆ ಸಿಗದಿರುವುದು ಮುಂತಾದ ಸಮಸ್ಯೆಗಳನ್ನು ಮನವಿಯಲ್ಲಿ ತಿಳಿಸಲಾಗಿದೆ.ಲ್ಯಾಬ್ ರಿಪೋರ್ಟ್ ಗಳನ್ನು ನೀಡುವಲ್ಲಿ ಬಹಳ ವಿಳಂಬವನ್ನು ತೋರಿಸುತ್ತಿದ್ದು, ಸಾಮಾನ್ಯ ರಕ್ತ ಪರೀಕ್ಷೆಯ ರಿಪೋರ್ಟ್ ಗಳಿಗೂ 2 ದಿನ ತೆಗೆದುಕೊಳ್ಳುತ್ತಿದ್ದಾರೆ. ಸ್ಕ್ಯಾನಿಂಗ್ ಸೆಂಟರ್‌ನಲ್ಲಿ ಸಿಬ್ಬಂದಿ ಕೊರತೆ ಇದ್ದು, ರೋಗಿಗಳು ಬಹಳ ಹೊತ್ತು ಕಾಯುವ ಪರಿಸ್ಥಿತಿ ಇದೆ ಎಂದು ಮನವಿಯಲ್ಲಿ ದೂರಲಾಗಿದೆ.ಉಡುಪಿ ಜಿಲ್ಲೆಯ ಇತರ ರಕ್ತನಿಧಿ ಕೇಂದ್ರಗಳಲ್ಲಿ ಸಂಜೆ 7 ಗಂಟೆ ವರೆಗೆ ರಕ್ತದಾನಕ್ಕೆ ಅವಕಾಶವಿದ್ದು, ಜಿಲ್ಲಾ ಆಸ್ಪತ್ರೆಯಲ್ಲೂ ಅವಕಾಶ ನೀಡಬೇಕು. ಔಷಧದ ಲಭ್ಯತೆಯ ಕೊರತೆ ಇದ್ದು, ತಕ್ಷಣ ಔಷಧಗಳು ಲಭ್ಯವಾಗುವಂತೆ ಮಾಡಬೇಕು. ಆಸ್ಪತ್ರೆಯ ಶುಚಿತ್ವ ಮತ್ತು ಸ್ವಚ್ಛತೆಯ ಬಗ್ಗೆ ಹೆಚ್ಚಿನ ಗಮನ ಕೊಡಬೇಕು. ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಸಿಬ್ಬಂದಿಗಳ ವೇತನವನ್ನು ಸರಿಯಾದ ಸಮಯಕ್ಕೆ ನೀಡಿ ಆಸ್ಪತ್ರೆಗೆ ಬರುವ ರೋಗಿಗಳ ಸೇವೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಲಾಗಿದೆ.ಈ ಸಂದರ್ಭ ಸಮಾಜ ಸೇವಕರಾದ ಸತೀಶ್ ಸಾಲ್ಯಾನ್ ಮಣಿಪಾಲ, ರತ್ನಾಕರ್ ಶೆಟ್ಟಿ ಆತ್ರಾಡಿ, ಪ್ರಜೀತ್ ಮಲ್ಪೆ, ಅನಿಲ್ ಹನುಮಂತ ನಗರ ಮೊದಲಾದವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಡವರ ಸೂರಿಗಾಗಿ ₹4 ಲಕ್ಷ ಅನುದಾನ: ಸಚಿವ ಜಮೀರ್ ಅಹಮದ್
ಗುರುವೇ ಗತಿ ಎಂದಾಗ ಸಕಲ ಜ್ಞಾನ ಸಿಗಲು ಸಾಧ್ಯ: ಗುರುರಾಜ ಗುರೂಜಿ