ಗೌರವ ಸನ್ಮಾನಕ್ಕೆ ಹೆಸರು ಕಳುಹಿಸಲು ಕೋರಿಕೆ

KannadaprabhaNewsNetwork |  
Published : Oct 01, 2026, 02:45 AM IST
ಕ್ರೀಡಾಜ್ಯೋತಿಯನ್ನ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ ಸ್ವೀಕರಿಸಿದರು. | Kannada Prabha

ಸಾರಾಂಶ

ಇದೇ ನವೆಂಬರ್ ತಿಂಗಳಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಉನ್ನತ ಮಟ್ಟದ ಸಮಾರಂಭವೊಂದರಲ್ಲಿ ಅರ್ಹ ವ್ಯಕ್ತಿಗಳನ್ನು ಸನ್ಮಾನಿಸಲು ನಿರ್ಧರಿಸಲಾಗಿದೆ. ಮುಖ್ಯಮಂತ್ರಿ, ಸಚಿವರು, ಜಿಲ್ಲೆಯ ಶಾಸಕರುಗಳು, ಸಂಸದರು ಪಾಲ್ಗೊಳ್ಳಲಿರುವ ಕಾರ್ಯಕ್ರಮದಲ್ಲಿ ಕೊಡವ ಸಾಹಿತ್ಯ, ಕಲೆ, ಜನಪದ, ಸಂಗೀತ, ಸಂಸ್ಕೃತಿ, ಪದ್ಧತಿ, ಆಚರಣೆ, ಸಾರ್ವಜನಿಕ ಸೇವೆ, ಸಮಾಜ ಸೇವೆ, ಆಧ್ಯಾತ್ಮ, ಶಿಕ್ಷಣ, ಆರೋಗ್ಯ, ಸೇರಿದಂತೆ ಯಾವುದೇ ಕ್ಷೇತ್ರವಾದರೂ ಸರಿ, ಕೊಡವಾಮೆಗೆ ಒತ್ತು ನೀಡುವಂತಿರಬೇಕು.

ಮಡಿಕೇರಿ : ಇದೇ ನವೆಂಬರ್ ತಿಂಗಳಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಉನ್ನತ ಮಟ್ಟದ ಸಮಾರಂಭವೊಂದರಲ್ಲಿ ಅರ್ಹ ವ್ಯಕ್ತಿಗಳನ್ನು ಸನ್ಮಾನಿಸಲು ನಿರ್ಧರಿಸಲಾಗಿದೆ. ಮುಖ್ಯಮಂತ್ರಿ, ಸಚಿವರು, ಜಿಲ್ಲೆಯ ಶಾಸಕರುಗಳು, ಸಂಸದರು ಪಾಲ್ಗೊಳ್ಳಲಿರುವ ಕಾರ್ಯಕ್ರಮದಲ್ಲಿ ಕೊಡವ ಸಾಹಿತ್ಯ, ಕಲೆ, ಜನಪದ, ಸಂಗೀತ, ಸಂಸ್ಕೃತಿ, ಪದ್ಧತಿ, ಆಚರಣೆ, ಸಾರ್ವಜನಿಕ ಸೇವೆ, ಸಮಾಜ ಸೇವೆ, ಆಧ್ಯಾತ್ಮ, ಶಿಕ್ಷಣ, ಆರೋಗ್ಯ, ಸೇರಿದಂತೆ ಯಾವುದೇ ಕ್ಷೇತ್ರವಾದರೂ ಸರಿ, ಕೊಡವಾಮೆಗೆ ಒತ್ತು ನೀಡುವಂತಿರಬೇಕು. ಕೊಡವ ಸಂಸ್ಕೃತಿ, ಜನಜೀವನ, ಪದ್ಧತಿ, ಕೊಡಗಿನ ಹೆಸರನ್ನು ಎತ್ತಿ ಹಿಡಿಯುವಂತಿರಬೇಕು. ಅರ್ಹ–ಅನುಭವಿ ವ್ಯಕ್ತಿಗಳು ಸ್ವತಃ, ಇಲ್ಲವೇ ಇಂತಹ ಅರ್ಹ ವ್ಯಕ್ತಿಗಳನ್ನು ಇತರರು, ತಮ್ಮ ಹೆಸರು ಪೂರ್ಣ ವಿಳಾಸ, ಮೊಬೈಲ್ ಸಂಖ್ಯೆಯೊಂದಿಗೆ ಶಿಫಾರಸ್ಸು ಮಾಡಬಹುದು.ಅರ್ಜಿ ಸಲ್ಲಿಸುವವರು ಪಾಸ್ ಪೋರ್ಟ್ ಫೋಟೋದೊಂದಿಗೆ ಸಂಕ್ಷಿಪ್ತವಾದ ಸ್ವವಿವರವನ್ನು ನೀಡುವುದು. ಗೌರವ ಸನ್ಮಾನಕ್ಕೆ ಆಯ್ಕೆಯಾಗುವ ವ್ಯಕ್ತಿಗಳಿಗೆ ಮೊಬೈಲ್ ಮೂಲಕ ತಿಳಿಯಪಡಿಸುವುದರ ಜೊತೆಗೆ ಕಾಗದ ಕಳುಹಿಸಲಾಗುವುದು. ಪ್ರಶಸ್ತಿಗೆ ಅರ್ಜಿ ಸಲ್ಲಿಸುವವರು ಕನಿಷ್ಠ 40 ವರ್ಷ ಮೇಲ್ಪಟ್ಟವರಾಗಿರಬೇಕು. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಈ ಗೌರವ ಸನ್ಮಾನಕ್ಕೆ ಯಾವುದೇ ಜಾತಿ-ಪಂಗಡ, ಧರ್ಮದ ತೊಡಕಿಲ್ಲ, ಕೊಡವಾಮೆಯನ್ನು ಎತ್ತಿ ಹಿಡಿಯುವ ಸೇವೆಯಾಗಿರತಕ್ಕದ್ದು ಎಂದು ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ಅವರು ತಿಳಿಸಿದ್ದಾರೆ.

ಭಾವಚಿತ್ರ ಹಾಗೂ ಸಂಕ್ಷಿಪ್ತ ವಿವರ, ವಿಳಾಸ, ಮೊಬೈಲ್ ಸಂಖ್ಯೆಯೊಂದಿಗೆ ಅರ್ಜಿ ಸಲ್ಲಿಸಲು ಅಕ್ಟೋಬರ್, 14 ಕೊನೆಯ ದಿನವಾಗಿದೆ. ಅಕಾಡೆಮಿಯ ವಿಳಾಸ ಅಧ್ಯಕ್ಷರು / ರಿಜಿಸ್ಟಾçರ್, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಜೂನಿಯರ್ ಕಾಲೇಜು ರಸ್ತೆ, ಮ್ಯಾನ್ಸ್ ಕಾಂಪೌಂಡ್ ಹತ್ತಿರ, ಸ್ಕೌಟ್ಸ್ ಮತ್ತು ಗೈಡ್ಸ್ ಭವನ, ಮಡಿಕೇರಿ-571201.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬತ್ತದ ಗದ್ದೆಗಳಲ್ಲಿ ಬೆಂಕಿ ರೋಗ ಮತ್ತು ಎಲೆಸುರುಳಿ ಹುಳುಗಳ ಬಾಧೆ ಹಾಗೂ ಪರಿಹಾರ
ಸಾರ್ವಜನಿಕ ಜಾಗೃತಿ ಮೂಡಿಸಿದ ಪೋಲೀಸ್ ಸಿಬ್ಬಂದಿ