ಕನ್ನಡಪ್ರಭ ವಾರ್ತೆ ಮಂಡ್ಯ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನ ನೆಲಮಂಗಲದಲ್ಲಿ ವಿಮಾನ ನಿಲ್ದಾಣಕ್ಕೆ ಚಿಂತನೆ ನಡೆಸಲಾಗುತ್ತಿದೆ ಎಂದು ಕೇಂದ್ರ ಸಚಿವರು ಹೇಳುತ್ತಾರೆ. ನೆಲಮಂಗಲ ಮತ್ತು ದೇವಹನಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೇವಲ 15 ಕಿಮೀ ಅಂತರ ಇದೆ. ಅದರ ಬದಲು ಮಂಡ್ಯ-ಮದ್ದೂರು ನಡುವೆ ವಿಮಾನ ನಿಲ್ದಾಣ ಮಾಡಿದಲ್ಲಿ ಮೈಸೂರು ವಿಭಾಗ ವ್ಯಾಪ್ತಿಯಲ್ಲಿ ಆರ್ಥಿಕ ಚಟುವಟಿಕೆಗಳಿಗೆ ವೇಗ ನೀಡಲು ಅನುಕೂಲವಾಗುತ್ತದೆ ಎಂದರು.
ಈ ಬಗ್ಗೆ ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ ವಿಮಾನಯಾನ ಸಚಿವರ ಅವರನ್ನೂ ಭೇಟಿ ಮಾಡಿ ವಿಮಾನ ನಿಲ್ದಾಣ ಜೊತೆಗೆ ಮಂಡ್ಯ ನಗರದಲ್ಲಿ ಐಟಿ ಪಾರ್ಕ್ ನಿರ್ಮಿಸಲು ಸಹ ಒತ್ತಾಯಿಸಲಾಗುವುದು ಎಂದರು.ಮೈಷುಗರ್ ಹೊಸ ಕಾರ್ಖಾನೆ ನಿರ್ಮಾಣಕ್ಕೆ ಬಜೆಟ್‌ನಲ್ಲಿ ಘೋಷಣೆಯಾಗಿದೆ. ಯಾವ ಸ್ಥಳದಲ್ಲಿ ಕಾರ್ಖಾನೆ ಮಾಡಬೇಕು ಎಂಬುದರ ಬಗ್ಗೆ ತಾಂತ್ರಿಕ ತಜ್ಞರ ತಂಡ ಶೀಘ್ರ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಹೆದ್ದಾರಿ ಪ್ರಾಧಿಕಾರದಿಂದ ಮಂಡ್ಯ ನಗರದ ರಸ್ತೆ ಅಭಿವೃದ್ಧಿಗೆ ಅವೈಜ್ಞಾನಿಕ ರೀತಿಯಲ್ಲಿ ಯೋಜನೆ ರೂಪಿಸಲಾಗಿತ್ತು. ಅದನ್ನು ಪರಿವರ್ತಿಸಿ 33 ಕೋಟಿ ರು ವೆಚ್ಚದಲ್ಲಿ ರಸ್ತೆ, ಸೈಕಲ್ ಪಾತ್, ಫುಟ್‌ಪಾತ್ ಹಾಗೂ ವೃತ್ತಗಳ ಆಧುನೀಕರಣದ ಯೋಜನೆ ರೂಪಿಸಲಾಗಿದೆ ಎಂದರು.
ಪಾಂಡವಪುರ:ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಬುಧವಾರ ಸಂಜೆ ಮತ್ತೆ ವಿದೇಶಕ್ಕೆ ತೆರಳಿದ್ದು ಗುರುವಾರ ನಡೆದ ನಾಡಪ್ರಭು ಕೆಂಪೇಗೌಡರ ಜಯಂತಿಗೂ ಗೈರಾದರು.
ಒಬ್ಬ ಒಕ್ಕಲಿಗ ಸಮಾಜ ಶಾಸಕರಾಗಿರುವ ದರ್ಶನ್ ಪುಟ್ಟಣ್ಣಯ್ಯ ಅವರು ಒಕ್ಕಲಿಗ ಸಮಾಜ ಸರ್ವಚ್ಚ ನಾಯಕ ನಾಡಪ್ರಭು ಕೆಂಪೇಗೌಡ ಜಯಂತಿಗೆ ಗೈರಾಗುವ ಮೂಲಕ ಸಮಾಜಕ್ಕೆ ಅಗೌರವ ಸೂಚಿಸಿದ್ದಾರೆ ಎಂದು ಕ್ಷೇತ್ರದ ಒಕ್ಕಲಿಗ ಸಮಾಜದ ಮುಖಂಡರು ಬೇಸರ ಹೊರಹಾಕುತ್ತಿದ್ದಾರೆ.