ಸಹಕಾರ ಸಂಸ್ಥೆ ಅಧ್ಯಕ್ಷ ಸ್ಥಾನಕ್ಕೆ ಮೀಸಲಾತಿ

KannadaprabhaNewsNetwork |  
Published : Aug 10, 2025, 01:30 AM IST
ತುಮಕೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ತಮ್ಮ ಅಭಿನಂದನಾ ಗ್ರಂಥಕ್ಕೆ ಲೇಖನ ಬರೆದವರನ್ನು ಗೌರವಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಕೆ.ಎನ್. ರಾಜಣ್ಣ | Kannada Prabha

ಸಾರಾಂಶ

ಸಹಕಾರಿ ಆಂದೋಲನದಲ್ಲಿ ತಿದ್ದುಪಡಿ ತರುತ್ತಿದ್ದೇವೆ. ಗ್ರಾಮ ಪಂಚಾಯ್ತಿ ಅಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಇರುವಂತೆ ಸರ್ಕಾರದ ಸೌಲಭ್ಯ ಪಡೆಯುತ್ತಿರುವ ಸಹಕಾರ ಸಂಸ್ಥೆಗಳ ಅಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ತರುವ ಬಿಲ್ ಮಾಡಿದ್ದೇವೆ. ಮುಂದಿನ ಅಧಿವೇಶನದಲ್ಲಿ ಜರೂರಾಗಿ ಕಾಯಿದೆ ಮಾಡಲು ಬದ್ಧವಾಗಿದ್ದೇವೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದರು.

ಕನ್ನಡಪ್ರಭ ವಾರ್ತೆ ತುಮಕೂರು

ಸಹಕಾರಿ ಆಂದೋಲನದಲ್ಲಿ ತಿದ್ದುಪಡಿ ತರುತ್ತಿದ್ದೇವೆ. ಗ್ರಾಮ ಪಂಚಾಯ್ತಿ ಅಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಇರುವಂತೆ ಸರ್ಕಾರದ ಸೌಲಭ್ಯ ಪಡೆಯುತ್ತಿರುವ ಸಹಕಾರ ಸಂಸ್ಥೆಗಳ ಅಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ತರುವ ಬಿಲ್ ಮಾಡಿದ್ದೇವೆ. ಮುಂದಿನ ಅಧಿವೇಶನದಲ್ಲಿ ಜರೂರಾಗಿ ಕಾಯಿದೆ ಮಾಡಲು ಬದ್ಧವಾಗಿದ್ದೇವೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದರು. ಸಚಿವಕೆ.ಎನ್.ರಾಜಣ್ಣನವರ 75 ನೇ ವರ್ಷದ ಅಮೃತ ಮಹೋತ್ಸವದ ಅಂಗವಾಗಿ ಹೊರತಂದ ಗೌರವ ಗ್ರಂಥ ಸಹಕಾರ ಸಾರ್ವಭೌಮಕ್ಕೆ ಬರಹಗಳನ್ನು ನೀಡಿದ ಲೇಖಕರನ್ನು ಅಭಿನಂದಿಸಲು ಸಂಪಾದನಾ ಸಮಿತಿ ನಗರದಲ್ಲಿಶನಿವಾರ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದರು. ಅಶಕ್ತರಿಗೆ, ಅಸಹಾಯಕರಿಗೆ ಸಹಾಯ ಮಾಡುವಂತಹ ಶಕ್ತಿ ಹಾಗೂ ಹೆಚ್ಚಿನ ಅವಕಾಶ ಸಹಕಾರಿಗಳಿಗೆ ಇರುತ್ತದೆ. ಈ ಕ್ಷೇತ್ರದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವವರಿಗೆ ಜನಪ್ರಿಯತೆ, ಜನಬೆಂಬಲವೂ ದೊರೆಯುತ್ತದೆ. ಸಹಕಾರಿಗಳಿಗೆ ಜಾತಿ, ಪಕ್ಷದ ಭೇದ ಇರುವುದಿಲ್ಲ. ಸಹಕಾರಿಗಳು ಜನರಿಗೆ ಸ್ಪಂದಿಸಿ ಕೆಲಸ ಮಾಡಬೇಕು ಎಂದು ಹೇಳಿದರು.

ನಾನು ತುಮಕೂರು ಡಿಸಿಸಿ ಬ್ಯಾಂಕ್‌ ಅಧ್ಯಕ್ಷನಾಗಿದ್ದ ಅವಧಿಯಲ್ಲಿ ನಮ್ಮದೇ ಕಾಂಗ್ರೆಸ್ ಸರ್ಕಾರ ಎರಡು ಬಾರಿ ಡಿಸಿಸಿ ಬ್ಯಾಂಕ್‌ಅನ್ನು ಸೂಪರ್ ಸೀಡ್ ಮಾಡಿತ್ತು. ರಾಜಕಾರಣದಲ್ಲಿ ಯಾರನ್ನಾದರೂ ಬೆಳೆಯಲು ಬಿಡುತ್ತಾರೆ ಎಂಬುದು ಅನುಮಾನ. ಆದರೆ, ನನಗೆ ಬುದ್ಧಿ ಕಲಿಸಲು, ನನ್ನಲ್ಲಿ ಗಟ್ಟಿತನ ಹೆಚ್ಚಿಸಿಕೊಳ್ಳಲು ಇಂತಹ ಘಟನೆಗಳು ಸಹಕಾರಿಯಾಗುತ್ತವೆ ಎಂದು ಭಾವಿಸುತ್ತೇನೆ. ಈ ಅನುಭವದ ಆಧಾರದ ಮೇಲೆಯೇ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಹೇಳಿದರು.

ಹಾಸನ ಜಿಲ್ಲಾ ಉಸ್ತುವಾರಿಯ ಜವಾಬ್ದಾರಿಯನ್ನು ತ್ಯಜಿಸಿದ್ದೇನೆ. ಆ ಜಿಲ್ಲೆಯ ಉಸ್ತುವಾರಿಯಿಂದ ಯಾರೂ ನನ್ನನ್ನು ತೆಗೆದು ಹಾಕಿದ್ದಲ್ಲ, ನಾನೇ ತೆಗೆಸಿ ಹಾಕಿಕೊಂಡಿದ್ದು. ಹಾಸನ ಜಿಲ್ಲೆಯಲ್ಲಿ ಉಸ್ತುವಾರಿ ಮಂತ್ರಿಯಾಗಿ ಜವಾಬ್ದಾರಿಯಿಂದ ಕೆಲಸ ಮಾಡಿದ ಸಮಾಧಾನವಿದೆ. ಹಾಸನದವರು ಉತ್ತಮ ನಡವಳಿಕೆಯುಳ್ಳ ಜನ. ಹಾಸನಾಂಬ ಉತ್ಸವ ದೊಡ್ಡ ಉತ್ಸವ. ಆ ಉತ್ಸವ ನಿರ್ವಹಿಸುವುದು ದೊಡ್ಡ ಜವಾಬ್ದಾರಿ ಎಂದು ಕೆ.ಎನ್.ರಾಜಣ್ಣ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕ್ಷೇತ್ರದ ಕೆಲಸವನ್ನು ತಲೆಮೇಲೆ ಹೊತ್ತು ಮಾಡುವೆ
ಜಾತಿ ವೈಷಮ್ಯಕ್ಕೆ ಅವಕಾಶವಿಲ್ಲ:ಡಾ. ತೌಫೀಕ್‌ ಪಾರ್ಥನಳ್ಳಿ