ಖಾಸಗಿ, ಕ್ರೀಡೆಯಲ್ಲೂ ಮೀಸಲಾತಿ ಅಗತ್ಯ: ನಟ ಚೇತನ್‌

KannadaprabhaNewsNetwork |  
Published : Aug 04, 2025, 11:45 PM IST
೪ಶಿರಾ೨: ಶಿರಾ ನಗರದ ಬಾಬು ಜಗಜೀವನ ರಾಮ್ ಭವನದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಛತ್ರಪತಿ ಸಾಹು ಮಹಾರಾಜ್ ಅವರ ೨೫೧ನೇ ಜಯಂತಿ, ಪ್ರೋ. ಬಿ.ಕೃಷ್ಣಪ್ಪ ಅವರ ೮೭ನೇ ಜಯಂತಿ ಹಾಗೂ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರ ಸಮಾವೇಶ ಏರ್ಪಡಿಸಲಾಗಿತ್ತು. ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ, ದಲಿತ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ, ಜಿಲ್ಲಾಧ್ಯಕ್ಷ ಟೈರ್ ರಂಗನಾಥ್ ಸೇರಿದಂತೆ ಹಲವರು ಭಾಗವಹಿಸಿದ್ದರು. | Kannada Prabha

ಸಾರಾಂಶ

ಪರಿಶಿಷ್ಟ ಜಾತಿ ಸಮುದಾಯಗಳಿಗೆ ಒಳಮೀಸಲಾತಿ ಜಾರಿ ಮಾಡಿ, ಖಾಸಗಿ, ಕ್ರೀಡಾ ವಲಯದಲ್ಲೂ ಸಹ ಮೀಸಲಾತಿ ನೀಡಬೇಕು. ಮೀಸಲಾತಿ ಅನ್ಯಾಯದ ವ್ಯವಸ್ಥೆಯನ್ನು ಸರಿಪಡಿಸುತ್ತದೆ. ಮೀಸಲಾತಿ ಎನ್ನುವುದೇ ನಿಜವಾದ ಮೆರಿಟ್ ಎಂದು ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಹೇಳಿದರು.

ಕನ್ನಡಪ್ರಭ ವಾರ್ತೆ ಶಿರಾ

ಪರಿಶಿಷ್ಟ ಜಾತಿ ಸಮುದಾಯಗಳಿಗೆ ಒಳಮೀಸಲಾತಿ ಜಾರಿ ಮಾಡಿ, ಖಾಸಗಿ, ಕ್ರೀಡಾ ವಲಯದಲ್ಲೂ ಸಹ ಮೀಸಲಾತಿ ನೀಡಬೇಕು. ಮೀಸಲಾತಿ ಅನ್ಯಾಯದ ವ್ಯವಸ್ಥೆಯನ್ನು ಸರಿಪಡಿಸುತ್ತದೆ. ಮೀಸಲಾತಿ ಎನ್ನುವುದೇ ನಿಜವಾದ ಮೆರಿಟ್ ಎಂದು ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಹೇಳಿದರು. ಅವರು ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ನಗರದ ಬಾಬು ಜಗಜೀವನ ರಾಮ್ ಭವನದಲ್ಲಿ ಏರ್ಪಡಿಸಿದ್ದ ಛತ್ರಪತಿ ಸಾಹು ಮಹಾರಾಜ್ ಅವರ ೨೫೧ನೇ ಜಯಂತಿ, ಪ್ರೋ. ಬಿ.ಕೃಷ್ಣಪ್ಪ ಅವರ ೮೭ನೇ ಜಯಂತಿ ಹಾಗೂ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಶಿಕ್ಷಣದಿಂದ ವಂಚಿತ ಸಮುದಾಯಗಳಿಗೆ ಶಿಕ್ಷಣದ ನ್ಯಾಯಬೇಕು. ಶಿಕ್ಷಣದಿಂದ ಅಸಮಾನತೆ ಹೋಗಲಾಡಿಸಬೇಕು. ಡಾ.ಬಿ.ಆರ್.ಅಂಬೇಡ್ಕರ್, ಸಾಹು ಮಹಾರಾಜ್, ಪ್ರೋ. ಬಿ.ಕೃಷ್ಣಪ್ಪ ಅವರ ಸಿದ್ಧಾಂತ ಸಮಾನತೆಯ ಕನಸು ಅದನ್ನು ಈಡೇರಿಸುವ ಕೆಲಸವಾಗಬೇಕು. ಇದಕ್ಕೆಲ್ಲಾ ಶಾಶ್ವತ ಪರಿಹಾರ ಬೇಕೆಂದರೆ ದಲಿತರ ಅಧಿಕಾರ ಹಿಡಿಯಬೇಕು. ಅದೂ ಕೂಡ ಅಂಬೇಡ್ಕರ್, ಸಾಹು ಮಹರಾಜ್, ಪ್ರೋ. ಬಿ.ಕೃಷ್ಣಪ್ಪ ಅವರ ಹಾದಿಯಲ್ಲಿ ಎಂದರು. ಒಳಮೀಸಲಾತಿ ವಿಚಾರದಲ್ಲಿ ಸರಕಾರಗಳ ಇಚ್ಚಾಶಕ್ತಿ ಕೊರತೆ ಕಾಣುತ್ತಿದೆ. ಒಳಮೀಸಲಾತಿಯು ಪ.ಜಾತಿ, ಪ.ಪಂಗಡ ಸೇರಿದಂತೆ ಎಲ್ಲಾ ಜನಾಂಗದಲ್ಲೂ ಬೇಕು. ಸರಕಾರಗಳು ಜಾಣ ಕುರುಡುತನ ತೋರಿಸುತ್ತಿವೆ. ಉತ್ತಮ ಸಮ ಸಮಾಜ ಸ್ಥಾಪಿಸುವ ಸರಕಾರಗಳು ಬೇಕಿದೆ. ಒಳಮೀಸಲಾತಿ ಜಾರಿಗೆ ಬಂದರೆ ಅದೇ ಸಾಮಾಜಿಕ ನ್ಯಾಯವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಳ ಮೀಸಲಾತಿ ಜಾರಿಗೆ ತರಬೇಕು ಎಂದು ಚೇತನ್ ಅಹಿಂಸಾ ಹೇಳಿದರು. ದಲಿತ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲಿ ಈ ದೇಶದ ಮೂಲನಿವಾಸಿಗಳಲ್ಲದ ಬ್ರಾಹ್ಮಣರಿಗೆ ನೂರಕ್ಕೆ ನೂರರಷ್ಟು ಮೀಸಲಾತಿ ನೀಡಲಾಗಿತ್ತು. ಅದರಲ್ಲಿ ಶೇ. ೫೦ ರಷ್ಟು ಮೀಸಲಾತಿಯನ್ನು ರದ್ದುಪಡಿಸಿದವರು ಛತ್ರಪತಿ ಸಾಹು ಮಹರಾಜರು. ಅಲ್ಲದೆ ಸಾಮಾಜಿಕ ಪರಿವರ್ತನೆಕಾರರು, ಉಳುವವನಿಗೆ ಭೂಮಿ, ವಿಧವಾ ವೇತನ, ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಿದವರು ಎಂದರು.ಕಾರ್ಯಕ್ರಮದಲ್ಲಿ ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಟೈರ್ ರಂಗನಾಥ್, ರಾಜ್ಯ ಪ್ರಧಾನ ಕಾರ್ಯದರ್ಶಿ ಕೃಷ್ಣಪ್ಪ, ತಾಲೂಕು ಅಧ್ಯಕ್ಷ ತಿಪ್ಪೇಸ್ವಾಮಿ ಶಿವಾಜಿನಗರ, ಸಂಚಾಲಕ ರಾಜು.ಕೆ, ನಗರಸಭೆ ಸದಸ್ಯೆ ಗಿರಿಜ ವಿಜಯಕುಮಾರ್, ಮುಖಂಡರಾದ ಪೆದ್ದರಾಜು, ಅಪ್ಪಿ ರಂಗನಾಥ್, ರಾಜು, ರಂಗಾಪುರ ಶ್ರೀಧರ್, ಕರಿರಾಮನಹಳ್ಳಿ ಭೂತರಾಜು, ನಗರ ಪದಾಧಿಕಾರಿಗಳಾದ ಕಾರ್ತಿಕ, ತಿಪ್ಪೇಶ್.ಕೆ.ಕೆ, ಜಯರಾಯ್, ನಿತಿನ್ ತಿಪ್ಪೇಶ್, ಕುಮಾರ್, ರಂಗನಾಥ ಮೌರ್ಯ, ಮಹೇಶ್ ಸೇರಿದಂತೆ ಹಲವರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ