ಸರಿಯಾಗಿ ರಾಜೀನಾಮೆ ಕೊಡಿಸಿ, ಇಲ್ಲವೆ ಬೂರ್ಖಾ ಧರಿಸಿ

KannadaprabhaNewsNetwork |  
Published : May 11, 2025, 11:47 PM IST
ಯತ್ನಾಳ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಕಾಟಾಚಾರಕ್ಕೆ ರಾಜೀನಾಮೆ ನಾಟಕ ಮಾಡಿರುವ ನಿಮ್ಮ ನಾಯಕನಿಂದ ಧೈರ್ಯವಿದ್ದರೆ ಸರಿಯಾಗಿ ರಾಜೀನಾಮೆ ಕೊಡಿಸಿ, ಸ್ಪೀಕರಿಂದ ಅಂಗೀಕರಿಸಿ ನೈಜ ಹೋರಾಟಕ್ಕೆ ಬನ್ನಿ. ಇಲ್ಲವೆ ಕೈಲಾಗದವರೆಂದು ಬುರ್ಖಾ, ಹಿಜಾಬ್ ಧರಿಸಿ ಎಂದು ಪಾಲಿಕೆ ಅನರ್ಹ ಸದಸ್ಯರಾದ ಪ್ರೇಮಾನಂದ ಬಿರಾದಾರ, ರಾಜಶೇಖರ ಕುರಿಯವರ, ಗಿರೀಶ ಪಾಟೀಲ ಮುಸ್ಲಿಂ ಮುಖಂಡರಾದ ಎಂ.ಸಿ.ಮುಲ್ಲಾ, ಎಸ್.ಎಂ.ಪಾಟೀಲ ಗಣಿಹಾರಗೆ ಸವಾಲು ಹಾಕಿದ್ದಾರೆ.

ಕನ್ನಡಪ್ರಭ ವಾರ್ತೆ ವಿಜಯಪುರ

ಕಾಟಾಚಾರಕ್ಕೆ ರಾಜೀನಾಮೆ ನಾಟಕ ಮಾಡಿರುವ ನಿಮ್ಮ ನಾಯಕನಿಂದ ಧೈರ್ಯವಿದ್ದರೆ ಸರಿಯಾಗಿ ರಾಜೀನಾಮೆ ಕೊಡಿಸಿ, ಸ್ಪೀಕರಿಂದ ಅಂಗೀಕರಿಸಿ ನೈಜ ಹೋರಾಟಕ್ಕೆ ಬನ್ನಿ. ಇಲ್ಲವೆ ಕೈಲಾಗದವರೆಂದು ಬುರ್ಖಾ, ಹಿಜಾಬ್ ಧರಿಸಿ ಎಂದು ಪಾಲಿಕೆ ಅನರ್ಹ ಸದಸ್ಯರಾದ ಪ್ರೇಮಾನಂದ ಬಿರಾದಾರ, ರಾಜಶೇಖರ ಕುರಿಯವರ, ಗಿರೀಶ ಪಾಟೀಲ ಮುಸ್ಲಿಂ ಮುಖಂಡರಾದ ಎಂ.ಸಿ.ಮುಲ್ಲಾ, ಎಸ್.ಎಂ.ಪಾಟೀಲ ಗಣಿಹಾರಗೆ ಸವಾಲು ಹಾಕಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಶಾಸಕ ಬಸನಗೌಡ ಪಾಟೀಲ ಯತ್ನಾಳರು ಕಳೆದ ವಿಧಾನಸಭೆ ಚುನಾವಣೆಯಲ್ಲೇ ತಾಕತ್ತು ಇದ್ದವರು ತಮ್ಮ ವಿರುದ್ಧ ಸ್ಪರ್ಧೆಗೆ ಬನ್ನಿ ಎಂದು ಆಹ್ವಾನ ನೀಡಿದ್ದರು. ಆಗ ಸ್ಪರ್ಧಿಸುವ ಧಮ್ ತೋರದವರು, ಮುಸ್ಲಿಮರನ್ನು ಮೆಚ್ಚಿಸಲೋ, ಒಣ ಪ್ರಚಾರಕ್ಕೋ ಯತ್ನಾಳರ ವಿರುದ್ಧ ಸ್ಪರ್ಧಿಸುವುದಾಗಿ ಹೇಳಿದ್ದಾರೆ. ರಾಜೀನಾಮೆ ಕೊಟ್ಟು, ಸ್ಪೀಕರಿಂದ ಅಂಗೀಕಾರವಾದರೆ ಅವರ ಕ್ಷೇತ್ರಗಳಲ್ಲೇ ನಿಲ್ಲಲು ಸಿದ್ದ ಎಂದು ಯತ್ನಾಳರು ಸವಾಲ್ ಹಾಕಿದ್ದರು. ಎಂದು ವಾಗ್ದಾಳಿ ನಡೆಸಿದ್ದಾರೆ.

ಹೇಗಾದರೂ ಕುತಂತ್ರನದಿಂದ ವಿಜಯಪುರ ನಗರವನ್ನು ತಮ್ಮ ಸಮುದಾಯದ ತೆಕ್ಕೆಗೆ ತೆಗೆದುಕೊಳ್ಳುವ ದುರ್ಬುದ್ಧಿ ಹೊಂದಿದ್ದಾರೆ. ಅದು ಎಂದಿಗೂ ಸಾಧ್ಯವಾಗದು. ಹಗಲುಗನಸು ಕಾಣುವುದನ್ನು ನಿಲ್ಲಿಸಿ ಎಂದು ಪ್ರೇಮಾನಂದ ಬಿರಾದಾರ ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.

-----

ಕೋಟ್

ಯತ್ನಾಳರು ಎಲ್ಲಿಯೂ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡುವ ಬಗ್ಗೆ ಮಾತನಾಡಿಲ್ಲ. ಆದರೆ, ನಿಮ್ಮ ನಾಯಕರು ಸವಾಲ್ ಎದುರಿಸಲಾಗದೆ, ಮಾನ ಉಳಿಸಿಕೊಳ್ಳಲು ಕಾಟಾಚಾರದ ರಾಜೀನಾಮೆ ನಾಟಕ ಮಾಡಿದ್ದಾರೆ. ನಿಜವಾಗಿಯೂ ನಿಮಗೆ ಧಮ್ ಇದ್ದರೆ, ನಿಮ್ಮ ನಾಯಕನಿಂದ ರಾಜೀನಾಮೆ ಕೊಡಿಸಿ, ಸ್ಪೀಕರ್ ಅವರಿಂದ ಅಂಗೀಕಾರ ಆಗಲಿ. ಹಿಂದೂ ಹುಲಿ ತಾಕತ್ತು ಮತ್ತೊಮ್ಮೆ ನೋಡುವಿರಂತೆ. ರಾಜೀನಾಮೆ ಕೊಟ್ಟು ಸವಾಲು ಎದುರಿಸಲು ಆಗದಿದ್ದರೆ, ನಾವು ಕಳುಹಿಸಿರುವ ಬುರ್ಖಾ, ಹಿಜಾಬ್ ಧರಿಸಿ ಅಡ್ಡಾಡಿ.

ಪ್ರೇಮಾನಂದ ಬಿರಾದಾರ, ಶಾಸಕ ಯತ್ನಾಳ ಬೆಂಬಲಿಗ

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ