ಕನ್ನಡಪ್ರಭ ವಾರ್ತೆ ಕಾರ್ಕಳ
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದು ಕೊಂಡಿರುವ ವಿ.ಸುನೀಲ್ ಕುಮಾರ್, ಸತ್ಯಮೇವ ಜಯತೆ ಎಂದು ಸಂವಿಧಾನದ ಪುಸ್ತಕ ಹಿಡಿದುಕೊಂಡು ಓಡಾಡುವ ಪಕ್ಷದಲ್ಲಿ ಸತ್ಯಕ್ಕೆ ಬೆಲೆ ಇಲ್ಲ ಎಂಬುದು ಇತ್ತೀಚಿನ ಘಟನೆಯಿಂದ ಮತ್ತೊಮ್ಮೆ ಸಾಬೀತಾಗಿದೆ. ಸತ್ಯವನ್ನು ಒಪ್ಪಿಕೊಂಡ ಸಚಿವನನ್ನು ವಜಾಗೊಳಿಸುವುದು ಕಾಂಗ್ರೆಸ್‌ನ ನೈತಿಕ ದಿವಾಳಿತನದ ಉದಾಹರಣೆ ಎಂದು ಟೀಕಿಸಿದ್ದಾರೆ.
ಸತ್ಯ ಹೇಳಿದ ಕಾರಣಕ್ಕೆ ಸಚಿವ ಸ್ಥಾನ ಕಳೆದುಕೊಳ್ಳಬೇಕಾದರೆ, ಅದು ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗಿದೆ. ಜನರಿಗೆ ನಿಖರವಾದ ಮಾಹಿತಿ ನೀಡಿದವರನ್ನು ಗೌರವಿಸುವ ಬದಲು, ಅವರನ್ನು ರಾಜಕೀಯ ಬಲಿಯಾಡು ಮಾಡುವ ಪದ್ಧತಿ ದುರ್ಭಾಗ್ಯಕರ. ಈ ಬೆಳವಣಿಗೆ ರಾಜ್ಯ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ರಾಜಣ್ಣ ಅವರ ರಾಜೀನಾಮೆ ಕಾಂಗ್ರೆಸ್ ಒಳ ಗೊಂದಲಕ್ಕೆ ಹೊಸ ಬಣ್ಣ ತುಂಬಿದೆ ಎಂದಿದ್ದಾರೆ.