ಸಚಿವರ ಹೇಳಿಕೆಯ ಮೇರೆಗೆ ರಾಜೀನಾಮೆ ಹಿಂದಕ್ಕೆ: ಅಫ್ಸರಮಿಯ್ಯ

KannadaprabhaNewsNetwork |  
Published : Sep 22, 2026, 01:30 AM IST
ಚಿತ್ರ 21ಬಿಡಿಆರ್61 | Kannada Prabha

ಸಾರಾಂಶ

ಬಿ.ಎಸ್.ಎಸ್.ಕೆ ಕಾರ್ಖಾನೆ ಹಾಗೂ ಡಿ.ಸಿ.ಸಿ ಬ್ಯಾಂಕ್ ಎರಡು ರೈತರದ್ದೆ ಇದೆ. ಇದಕ್ಕೆ ಬ್ಯಾಂಕಿಗೆ ರಾಜೀನಾಮೆ ನೀಡಿದರೆ ಪರಿಹಾರ ಅಲ್ಲ ಎಂದು ಜಿಲ್ಲಾ ಉಸ್ತವಾರಿ ಸಚಿವ ಈಶ್ವರ ಬಿ.ಖಂಡ್ರೆ ಹೇಳಿಕೆಯ ಮೇರೆಗೆ ಹಿಂಪಡೆಯಲಾಗಿದೆ ಎಂದು ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ಅಫ್ಸರಮಿಯ್ಯ ಮಾಹಿತಿ ನೀಡಿದರು.

ಹುಮನಾಬಾದ್: ಬಿ.ಎಸ್.ಎಸ್.ಕೆ ಕಾರ್ಖಾನೆ ಹಾಗೂ ಡಿ.ಸಿ.ಸಿ ಬ್ಯಾಂಕ್ ಎರಡು ರೈತರದ್ದೆ ಇದೆ. ಇದಕ್ಕೆ ಬ್ಯಾಂಕಿಗೆ ರಾಜೀನಾಮೆ ನೀಡಿದರೆ ಪರಿಹಾರ ಅಲ್ಲ ಎಂದು ಜಿಲ್ಲಾ ಉಸ್ತವಾರಿ ಸಚಿವ ಈಶ್ವರ ಬಿ.ಖಂಡ್ರೆ ಹೇಳಿಕೆಯ ಮೇರೆಗೆ ಹಿಂಪಡೆಯಲಾಗಿದೆ ಎಂದು ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ಅಫ್ಸರಮಿಯ್ಯ ಮಾಹಿತಿ ನೀಡಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬ್ಲಾಕ್‌ ಕಾಂಗ್ರಸ್‌ನಿಂದ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ಮಂಡಲ ಅಧ್ಯಕ್ಷ ಇಲ್ಲಸಲ್ಲದ ಆರೋಪ ಮಾಡಿ ಎಲ್ಲರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಅವರಲ್ಲಿ ಮಾಹಿತಿ ಕೊರತೆ ಇದೆ ಎಂದರು. ಈಶ್ವರ ಖಂಡ್ರೆ ಅವರು ಡಿಸಿಸಿ ಬ್ಯಾಂಕ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ ಎಲ್ಲ ಸದಸ್ಯರನ್ನು ಕರೆಯಿಸಿ ಶೀಘ್ರದಲ್ಲೆ ರೈತರ ಜೀವನಾಡಿಯಾದ ಬಿ.ಎಸ್.ಎಸ್.ಕೆ ಉಳಿಯಬೇಕು ಜೊತೆಗೆ ರೈತರ ಬ್ಯಾಂಕ್ ಇರುವ ಡಿಸಿಸಿ ಬ್ಯಾಂಕ್ ಉಳಿಯಬೇಕು ಇದಕ್ಕೆ ರಾಜೀನಾಮೆ ಪರಿಹಾರ ಅಲ್ಲ ಎಂದು ಹೇಳಿಕೆ ಹಿನ್ನಲೆ ಹಿಂಪಡೆಯಲಾಗಿದೆ. ಇದರಲ್ಲಿ ಯಾವುದೇ ಗೊಂದಲ ಅಥವಾ ಉದ್ದೇಶ ಇಲ್ಲ ಎಂದರು. ಕೇವಲ ಪಾದಯಾತ್ರೆಯಿಂದ ಕಾರ್ಖಾನೆ ಪ್ರಾರಂಭ ಆಗುವುದಿಲ್ಲ. ಸರ್ಕಾರದ ಮೇಲೆ ಒತ್ತಡ ಹಾಕಬೇಕಾಗುತ್ತದೆ. ಅದಕ್ಕೆ ಮಾಜಿ ಸಚಿವ ರಾಜಶೇಖರ ಪಾಟೀಲ್ ನೇತೃತ್ವದಲ್ಲಿ ರೈತರ ನಿಯೋಗ ಹೋಗಿ ಮುಖ್ಯಮಂತ್ರಿ ಹಾಗೂ ಸಕ್ಕರೆ ಸಚಿವರಿಗೆ ಭೇಟಿಯಾಗಿ ಕೆಲಸ ಮಾಡಬೇಕಾಗುತ್ತದೆ ಆಗ ಕಾರ್ಖಾನೆ ಉಳಿಯಲಿದೆ ಎಂದರು. ಯುವ ಕಾಂಗ್ರೆಸ್ ಅಧ್ಯಕ್ಷ ಉಮೇಶ ಜಂಬಗಿ, ಲಕ್ಷ್ಮಣ ಸಿಂಗೆ, ಸಂತೋಷ ಅತಿವಾಳ, ಶಿವರಾಜ ಸೇರಿದಂತೆ ಅನೇಕರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಡ್ಡಾಯ..ವೈಜ್ಞಾನಿಕ ಪ್ರಸ್ತಾವನೆ ಸಲ್ಲಿಕೆಯಲ್ಲಿ ರಾಜ್ಯ ಹಿಂದೆ: ಡಾ.ಧನಂಜಯ ಸರ್ಜಿ
ನವೀನ ಮಾದರಿಯ ಕೃಷಿ ಪದ್ಧತಿಯಿಂದ ಹೆಚ್ಚು ಲಾಭ: ಡಾ. ತುಷಾರ್ ಕಾಂತಿ ಬೆಹರಾ