ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಶಿಕ್ಷಕರನ್ನು ಗೌರವಿಸಿ

KannadaprabhaNewsNetwork |  
Published : Dec 08, 2023, 01:45 AM IST
5ಡಿಡಬ್ಲೂಡಿ4ಕರ್ನಾಟಕ ರಾಜ್ಯ ಪ್ರಾಥಮಿಕ ಶಿಕ್ಷಕರ ಸಂಘದ ಜಿಲ್ಲಾ ಘಟಕ ಏರ್ಪಡಿಸಿದ “ಶಿಕ್ಷಣ ಪುನಶ್ಚೇತನ ಶಿಬಿರ” ಉದ್ಘಾಟನೆ. | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಧಾರವಾಡವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಶಿಕ್ಷಕರನ್ನು ಗೌರವಿಸಿದರೆ ದೇಶದ ಭವಿಷ್ಯ ಉಜ್ವಲವಾಗುತ್ತದೆ ಎಂದು ಮುಂಡರಗಿ ತೋಂಟದಾರ್ಯ ಮಠದ ನಿಜಗುಣಾನಂದ ಸ್ವಾಮೀಜಿ ಹೇಳಿದರು.ಕರ್ನಾಟಕ ರಾಜ್ಯ ಪ್ರಾಥಮಿಕ ಶಿಕ್ಷಕರ ಸಂಘದ ಜಿಲ್ಲಾ ಘಟಕ ಏರ್ಪಡಿಸಿದ ಶಿಕ್ಷಣ ಪುನಶ್ಚೇತನ ಶಿಬಿರ ಉದ್ಘಾಟಿಸಿ ಮಾತನಾಡಿದರು.ಶಿಕ್ಷಕ-ಶಿಕ್ಷಣ ಸಂಸ್ಕೃತಿಯ ಸಾಕಾರ ರೂಪವಾಗಿದ್ದು,ಇಂತಹ ಶಿಕ್ಷಕರನ್ನು ಗುರುತಿಸಿ ಗೌರವಿಸಬೇಕು.ಶಿಕ್ಷಕರು ಸಹನಶೀಲರು, ಸಾಧಕರು. ಧಾರ್ಮಿಕ ಧರ್ಮ ಗುರುಗಳು ಸಹ ಸಮಾಜ ಸುಧಾರಣೆಯ ಶಿಕ್ಷಕರು.ಶಿಕ್ಷಕರು ಪವಾಡ,ನಂಬಿಕೆ, ಮೌಢ್ಯಗಳಿಂದ ಹೊರ ಬಂದು ಉತ್ತಮ ಸಮಾಜದ ನಿರ್ಮಾಣ ಮಾಡಬೇಕು ಎಂದರು.

ಶಿಕ್ಷಣ ಪುನಶ್ಚೇತನ ಶಿಬಿರ ಉದ್ಘಾಟಿಸಿದ ನಿಜಗುಣಾನಂದ ಶ್ರೀಗಳು

ಕನ್ನಡಪ್ರಭ ವಾರ್ತೆ ಧಾರವಾಡ

ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಶಿಕ್ಷಕರನ್ನು ಗೌರವಿಸಿದರೆ ದೇಶದ ಭವಿಷ್ಯ ಉಜ್ವಲವಾಗುತ್ತದೆ ಎಂದು ಮುಂಡರಗಿ ತೋಂಟದಾರ್ಯ ಮಠದ ನಿಜಗುಣಾನಂದ ಸ್ವಾಮೀಜಿ ಹೇಳಿದರು.

ಕರ್ನಾಟಕ ರಾಜ್ಯ ಪ್ರಾಥಮಿಕ ಶಿಕ್ಷಕರ ಸಂಘದ ಜಿಲ್ಲಾ ಘಟಕ ಏರ್ಪಡಿಸಿದ ಶಿಕ್ಷಣ ಪುನಶ್ಚೇತನ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಶಿಕ್ಷಕ-ಶಿಕ್ಷಣ ಸಂಸ್ಕೃತಿಯ ಸಾಕಾರ ರೂಪವಾಗಿದ್ದು,ಇಂತಹ ಶಿಕ್ಷಕರನ್ನು ಗುರುತಿಸಿ ಗೌರವಿಸಬೇಕು.ಶಿಕ್ಷಕರು ಸಹನಶೀಲರು, ಸಾಧಕರು. ಧಾರ್ಮಿಕ ಧರ್ಮ ಗುರುಗಳು ಸಹ ಸಮಾಜ ಸುಧಾರಣೆಯ ಶಿಕ್ಷಕರು.ಶಿಕ್ಷಕರು ಪವಾಡ,ನಂಬಿಕೆ, ಮೌಢ್ಯಗಳಿಂದ ಹೊರ ಬಂದು ಉತ್ತಮ ಸಮಾಜದ ನಿರ್ಮಾಣ ಮಾಡಬೇಕು ಎಂದರು.

ಅಖಿಲ ಭಾರತ ಶಿಕ್ಷಕರ ಫೆಡರೇಶನ ಕಾರ್ಯಾಧ್ಯಕ್ಷ ಬಸವರಾಜ ಗುರಿಕಾರ ಮಾತನಾಡಿ, ಸಾಮಾಜಿಕ ನ್ಯಾಯ ಪರಿಪಾಲನೆ, ನವ ಸಮಾಜದ ನಿರ್ಮಾಣ ಮಾಡುವ ಗುರಿಯನ್ನು ನಿಜಗುಣಾಂದ ಮಹಾಸ್ವಾಮಿಗಳು ಹೊಂದಿದ್ದಾರೆ.ಪ್ರಗತಿ ಪರ ವಿಚಾರಧಾರೆಯು ನಮ್ಮಲ್ಲರಿಗೆ ಸ್ಫೂರ್ತಿದಾಯಕ. ಶಿಕ್ಷಕರಿಗೆ, ಮುಖ್ಯೋಪಾಧ್ಯಾಯರಿಗೆ ಕಾರ್ಯದ ಒತ್ತಡ ಜಾಸ್ತಿ ಇದ್ದು, ಇದರಿಂದ ಗುಣಾತ್ಮಕ ಶಿಕ್ಷಣ ನೀಡುವುದು ಕಷ್ಟಸಾಧ್ಯವಾಗುತ್ತದೆ. ಶಿಕ್ಷಣ ಪುನಶ್ಚೇತನ ಶಿಬಿರದಿಂದ ಶಿಕ್ಷಕರಿಗೆ ಅನುಕೂಲವಾಗಿದ್ದು ಶಿಕ್ಷಣೇತರ ಕಾರ್ಯಗಳಿಂದ ಶಿಕ್ಷಕರುಗಳನ್ನು ಮುಕ್ತಗೊಳಿಸಬೇಕು ಎಂದರು.

ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಎಸ್. ಕೆಳದಿಮಠ, ವ್ಯವಸ್ಥೆಯನ್ನು ಸರಿಮಾಡಿಕೊಂಡು ವಿದ್ಯಾರ್ಥಿಗಳಿಗೆ ಬೋಧನೆ ಮಾಡಿ ಶಿಕ್ಷಣದ ಗುಣಮಟ್ಟ ಹೆಚ್ಚಿಸಬೇಕು ಎಂದರು.

ಜಿಲ್ಲಾಧ್ಯಕ್ಷ ವಿ.ಎಫ್. ಚುಳಕಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯರಾದ ಜಯಶ್ರೀ ಕಾರೇಕರ, ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಕುಮಾರ ಸಿಂದಗಿ, ರಾಮಕೃಷ್ಣ ಸದಲಗಿ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಸ್.ಎಫ್. ಸಿದ್ಧನಗೌಡರ, ವೈ.ಎಚ್‌. ಬಣವಿ, ಕಾಂಚನಾ ರಾಯ್ಕರ, ಎಚ್.ಪಿ. ನದಾಫ, ಜಗದೀಶ ವಿರಕ್ತಮಠ ಮತ್ತಿತರರು ಇದ್ದರು. ಕಾರ್ಯದರ್ಶಿ ರಾಜಶೇಖರ ಹೊನ್ನಪ್ಪನವರ ಸ್ವಾಗತಿಸಿದರು. ಎಸ್.ಬಿ ಕೇಸರಿ ನಿರೂಪಿಸಿದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ