ಶಿಕ್ಷಕರನ್ನು ಗೌರವಿಸುವುದು ನಮ್ಮ ಜವಾಬ್ದಾರಿ

KannadaprabhaNewsNetwork |  
Published : Sep 06, 2025, 01:00 AM IST
ಪಟ್ಟಣದ ಕನ್ನಡ ಸಂಘದ ವೇಧಿಕೆಯಲ್ಲಿ ಶಾಲಾ ಶಿಕ್ಷಣ ಇಲಾಖೆ, ತಾಲ್ಲೂಕು ಶಿಕ್ಷಕರ ದಿನಾಚರಣೆ ಸಮಿತಿಯು ಏರ್ಪಡಿಸಲಾಗಿದ್ದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ರವರ ೧೩೮ನೇ ಜಯಂತಿ ಮತ್ತು ಶಿಕ್ಷಕರ ದಿನಚಾರಣೆ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನಸಮಾರಂಭವನ್ನು  ಶಾಸಕ ಸಿ.ಬಿ.ಸುರೇಶ್‌ಬಾಬು ಉದ್ಘಾಟಿಸಿದರು. | Kannada Prabha

ಸಾರಾಂಶ

ವ್ಯಕ್ತಿಯನ್ನು ಶಕ್ತಿಯನ್ನಾಗಿಸಿ ಆತನಿಂದ ಉತ್ತಮ ಸಮಾಜ ನಿರ್ಮಿಸುವ ಸಾಮರ್ಥ್ಯ ಹೊರಹೊಮ್ಮಲು ಕಾರಣ ಶಿಕ್ಷಕರಾಗಿದ್ದು ಅವರನ್ನು ಗೌರವಿಸುವುದು ಜವಾಬ್ದಾರಿಯುತ ಸಮಾಜದ ಕರ್ತವ್ಯ ಎಂದು ಶಾಸಕ ಸಿ.ಬಿ.ಸುರೇಶ್‌ಬಾಬು ತಿಳಿಸಿದರು.

ಕನ್ನಡಪ್ರಭ ವಾರ್ತೆ ಚಿಕ್ಕನಾಯಕನಹಳ್ಳಿ

ವ್ಯಕ್ತಿಯನ್ನು ಶಕ್ತಿಯನ್ನಾಗಿಸಿ ಆತನಿಂದ ಉತ್ತಮ ಸಮಾಜ ನಿರ್ಮಿಸುವ ಸಾಮರ್ಥ್ಯ ಹೊರಹೊಮ್ಮಲು ಕಾರಣ ಶಿಕ್ಷಕರಾಗಿದ್ದು ಅವರನ್ನು ಗೌರವಿಸುವುದು ಜವಾಬ್ದಾರಿಯುತ ಸಮಾಜದ ಕರ್ತವ್ಯ ಎಂದು ಶಾಸಕ ಸಿ.ಬಿ.ಸುರೇಶ್‌ಬಾಬು ತಿಳಿಸಿದರು.

ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ಶಾಲಾ ಶಿಕ್ಷಣ ಇಲಾಖೆ, ತಾಲೂಕು ಶಿಕ್ಷಕರ ದಿನಾಚರಣೆ ಸಮಿತಿ ಏರ್ಪಡಿಸಲಾಗಿದ್ದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ರವರ ೧೩೮ನೇ ಜಯಂತಿ, ಶಿಕ್ಷಕರ ದಿನಚಾರಣೆ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶಿಕ್ಷಕ ವೃತ್ತಿಗೆ ತನ್ನದೇ ಆದ ಗೌರವ ಇದ್ದು ಅದನ್ನು ಉಳಿಸುವಂತಹ ಕೆಲಸ ಮಾಡಿ. ನಿಮ್ಮ ವೃತ್ತಿಯನ್ನು ಗೌರವಿಸಿ ಅದರಿಂದ ನಿಮಗೂ ಗೌರವ. ಈಡೀ ರಾಜ್ಯದಲ್ಲಿ ಉಡುಪಿಯನ್ನು ಬಿಟ್ಟರೆ ನಮ್ಮ ತಾಲೂಕಿನಲ್ಲೇ ಶಿಕ್ಷಕರ ಸಂಘ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲೂ ಯಾವುದಾದರೊಂದು ಪ್ರತಿಭೆ ಇರುತ್ತದೆ. ಅದನ್ನು ಗುರುತಿಸಿ ಹೊರತೆಗೆಯುವ ಕೆಲಸ ಶಿಕ್ಷಕರು ಮಾಡಬೇಕು ಎಂದರು.

ಮೈಸೂರಿನ ಹಿರಿಯ ಸಾಹಿತಿ ಡಾ.ಬಿ.ವಿ.ವಸಂತಕುಮಾರ್ ಮಾತನಾಡಿ, ಪ್ರಪಂಚದಲ್ಲಿ ಗುರುವಿಗೆ ದೇವರ ಸ್ಥಾನಮಾನ ನೀಡಿ ಗೌರವಿಸುವಂತಹ ದೇಶ ನಮ್ಮದು. ಭಾರತದ ಆತ್ಮವೆಂದರೆ ಅದು ಅರಿವು. ಅಂತಹ ಅರಿವಿನ ಜ್ಞಾನವನ್ನು ಮೂಡಿಸುವವರು ಶಿಕ್ಷಕರು. ರೈತನು ಅನ್ನದ ಬೀಜವನ್ನು ಬಿತ್ತುವಂತೆ ಶಿಕ್ಷಕರು ಅಕ್ಷರದ ಬೀಜವನ್ನು ಬಿತ್ತುವ ಮೂಲಕ ಹೊಸ ತಲೆ ಮಾರಿನ ಉದಯಕ್ಕೆ ಕಾರಣವಾಗುತ್ತಾರೆ. ಅಕ್ಷರವೆಂದರೆ ಅದು ನಾಶವಿಲ್ಲದ್ದು ಅಂತಸ್ತಿನಿಂದ ದೊಡ್ಡವರಾದವರು ಬಹಳ ದಿನ ಆ ಸ್ಥಾನದಲ್ಲಿ ಉಳಿಯುಲು ಸಾಧ್ಯವಿಲ್ಲ. ಆದರೆ ಅದೇ ಅಕ್ಷರ ಜ್ಞಾನದಿಂದ ದೊಡ್ಡವರಾದವರು ಕೊನೆತನಕವೂ ಪೂಜನೀಯರಾಗಿರುವುದು ಈ ರಾಷ್ಟ್ರದ ವಿಶೇಷ ಎಂದರು. ಗ್ಯಾರಂಟಿ ಯೋಜನೆ ಅದ್ಯಕ್ಷ ಸಿ.ಡಿ.ಚಂದ್ರಶೇಖರ್ ಮಾತನಾಡಿ, ಕೇವಲ ಅಂಕಗಳಿಗೆ ಶಿಕ್ಷಣ ಸೀಮಿತವಾಗದೇ ಸಾಮಾಜಿಕ ಪ್ರಜ್ಞೆಯನ್ನು ಬೆಳೆಸಬೇಕು. ೧೮೪೮ರಲ್ಲಿ ಹೆಣ್ಣುಮಕ್ಕಳ ಶಾಲೆಗಳನ್ನು ತೆರೆದು ಅವರಿಗೆ ಶಿಕ್ಷಣ ಸಿಗುವಂತೆ ಮಾಡಿದಂತಹ ಸಾವಿತ್ರಿಬಾಯಿ ಪುಲೆಯವರನ್ನು ಇಂದು ನೆನಪು ಮಾಡಿಕೊಳ್ಳಬೇಕು ಎಂದರು.

ಬಿಇಒ ಕಾಂತರಾಜು ಎಸ್ ಮಾತನಾಡಿದರು. ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರಿಗೆ ಸನ್ಮಾನವನ್ನು ಮಾಡಲಾಯಿತು. ಈ ವೇಳೆ ಗವಿರಂಗಯ್ಯ, ಕ್ಷೇತ್ರ ಸಮನ್ವಾಯಾಧಿಕಾರಿ ನರಸಿಂಹಯ್ಯ, ಕೇಶವಮೂರ್ತಿ, ಗಂಗಾಧರಯ್ಯ, ವೆಂಕಟರಮಣಯ್ಯ, ಶಿವಕುಮಾರ್, ಸುರೇಶ್, ತಿಮ್ಮರಾಜು, ಪಂಚಾಕ್ಷರಿ, ದುರ್ಗಯ್ಯ, ರಂಗಪ್ಪ, ಶಿವಕುಮಾರ್ ಇತರರಿದ್ದರು.

PREV

Recommended Stories

ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅಡ್ಡಿ: 9ರಂದು ಬೃಹತ್ ಜನಾಗ್ರಹ ಸಭೆ
ಮೋದಿ ಸರ್ಕಾರದಿಂದ ಜಿಎಸ್‌ಟಿ ಇಳಿಕೆ ಐತಿಹಾಸಿಕ ಕೊಡುಗೆ: ಶಾಸಕ ವೇದವ್ಯಾಸ್‌ ಕಾಮತ್