ಮುಂಡರಗಿ: ನನ್ನ ಅಧಿಕಾರವಧಿಯಲ್ಲಿ ಈ ಭಾಗದ ಆಸ್ಪತ್ರೆ, ವೈದ್ಯರ ಸಮಸ್ಯೆ ಸೇರಿದಂತೆ ಯಾವುದೇ ಕೆಲಸ ಕಾರ್ಯಗಳನ್ನು ಅತ್ಯಂತ ಬದ್ಧತೆಯಿಂದ ನೆರವೇರಿಸುವ ಮೂಲಕ ನಿಮ್ಮ ಋಣ ತೀರಿಸುವೆ ಎಂದು ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯ ಡಾ. ವಿರೇಶ ಹಂಚಿನಾಳ ಹೇಳಿದರು.
ನನ್ನ ಗೆಲುವಿಗೆ ನಿಮ್ಮ ಮತದ ಜತೆಗೆ ರಾಜ್ಯದ ಎಲ್ಲ ಜಿಲ್ಲೆಗಳ ವೈದ್ಯ ಮತದಾರರ ಆಶೀರ್ವಾದ ಕಾರಣವಾಗಿದೆ. ಹೀಗಾಗಿ ನಾನು ನಿಮ್ಮೆಲ್ಲರಿಗೂ ಮತ್ತು ರಾಜ್ಯದ ಎಲ್ಲ ವೈದ್ಯ ಮತದಾರರಿಗೂ ಚಿರಋಣಿಯಾಗಿರುವೆ ಎಂದರು.
ಇದೇ ಸಂದರ್ಭದಲ್ಲಿ ಗದಗ ಜಿಲ್ಲೆಗೆ ನೂತನವಾಗಿ ಆಯುಷ್ಯ ಅಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿರುವ ಡಾ.ಜೈಪಾಲ್ ಸಮೋರೇಖರ್ ಹಾಗೂ ಕೊಪ್ಪಳ ಜಿಲ್ಲಾ ಆಯುಷ್ಯ ಅಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿರುವ ಡಾ. ಪಿ.ಬಿ.ಹಿರೇಗೌಡ್ರ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.ತಾಲೂಕು ಆಯುಷ್ ವೈದ್ಯರ ಸಂಘದ ಅಧ್ಯಕ್ಷ ಡಾ. ಚಂದ್ರಕಾಂತ ಇಟಗಿ ಮಾತನಾಡಿ, ಉತ್ತರ ಕರ್ನಾಟಕ ಭಾಗದವರಿಗೆ ಅಧಿಕಾರ ಎಂಬುದು ಅತ್ಯಂತ ದುರ್ಲಬ ಎನ್ನುವ ವಾತಾವರಣದಲ್ಲಿ ನಮ್ಮವರೇ ಆದ ಡಾ. ವಿರೇಶ ಹಂಚಿನಾಳ ಪ್ರಥಮ ಬಾರಿಗೆ ಚುನಾವಣೆಗೆ ಸ್ಪರ್ಧಿಸಿ ಅತ್ಯಂತ ಹೆಚ್ಚಿನ ಮತಗಳಿಂದ ಗೆಲುವು ಸಾಧಿಸಿ ಸೆನೆಟ್ ಸದಸ್ಯರಾಗಿ ಆಯ್ಕೆಯಾಗಿರುವುದು ನಮ್ಮೆಲ್ಲರಿಗೂ ಹೆಮ್ಮೆ ತರುವಂತದ್ದು, ಅವರಿಂದ ಜಿಲ್ಲೆಗೆ ಹಾಗೂ ತಾಲೂಕಿಗೆ ಅನುಕೂಲವಾಗಲಿದೆ ಎಂದರು.
ಆಯುಷ್ ವೈದ್ಯ ಸಂಘದ ಗೌರವಾಧ್ಯಕ್ಷ ಡಾ. ವೈ.ಎಸ್.ಮೇಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯ ಅಧಿಕಾರಿ ಡಾ.ಲಕ್ಷ್ಮಣ ಪೂಜಾರ, ಡಾ. ಅರವಿಂದ ಹಂಚಿನಾಳ, ಡಾ. ಜಗದೀಶ ಹಂಚಿನಾಳ, ಡಾ. ಸಿ.ಸಿ.ವಾಚದಮಠ, ಡಾ. ವಿಜಯಕುಮಾರ ಗಿಂಡಿಮಠ, ಡಾ.ಶರತ್ ಮೇಟಿ, ಡಾ.ವಿಶ್ವನಾಥ ಕೋಳೂರುಮಠ, ಡಾ.ಎ.ಬಿ. ಶಿವಶಟ್ಟರ್, ಡಾ ಚಂದ್ರು ಮೇಟಿ, ಡಾ. ರಮೇಶ ಕೊಪ್ಪಳ, ಡಾ.ವೀರೇಶ ಸಜ್ಜನರ, ಡಾ.ವಿರಾಟ್ ಅರ್ಕಸಾಲಿ, ಡಾ. ಅಭಿಷೇಕ ಹಿರೇಮಠ, ಡಾ.ನಾಗಭೂಷಣ ಬಗರೆ, ಡಾ. ಶಂಕರ್ ಭಾವಿಮನಿ, ಡಾ. ಪೂರ್ಣಿಮಾ ಗಿಂಡಿಮಠ, ಡಾ. ಜ್ಯೋತಿ ಕೊಪ್ಪಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಡಾ. ಈರಣ್ಣ ಸರ್ವೆ ನಿರೂಪಿಸಿ, ಡಾ.ನಂದಿತಾ ಹಂಚಿನಾಳ ವಂದಿಸಿದರು.