ಹೈನುಗಾರರ ಸಮಸ್ಯೆಗೆ ಸ್ಪಂದಿಸಲು ಮೊದಲ ಆದ್ಯತೆ: ಡಾಲು ರವಿ

KannadaprabhaNewsNetwork | Published : Mar 7, 2025 12:45 AM

ಸಾರಾಂಶ

ಮನ್ಮುಲ್ ಚುನಾವಣೆಯಲ್ಲಿ ರೈತರು ನಮಗೆ ಆಶೀರ್ವಾದ ಮಾಡಿದ್ದಾರೆ. ಅನ್ನದಾತನಿಗೆ ಮೋಸ ಮಾಡಿದರೆ ಇಡೀ ಸಮಾಜಕ್ಕೆ ಮಾಡಿದ ದ್ರೋಹ. ಹೈನುಗಾರರ ಸಮಸ್ಯೆಗೆ ಸ್ಪಂದಿಸಲು ಮೊದಲ ಆದ್ಯತೆ ನೀಡಲಾಗುವುದು.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ರಾಜ್ಯದಲ್ಲಿ ಮಂಡ್ಯ ಎಂದರೆ ಹೈನುಗಾರಿಕೆ ಬಲು ಪ್ರಸಿದ್ಧಿ ಹೊಂದಿದ್ದು, ಹೈನುಗಾರರ ಸಮಸ್ಯೆಗೆ ಸ್ಪಂದಿಸಲು ಮೊದಲ ಆದ್ಯತೆ ನೀಡುವುದಾಗಿ ಮನ್ಮುಲ್ ನೂತನ ನಿರ್ದೇಶಕ ಡಾಲುರವಿ ಹೇಳಿದರು.

ಲಕ್ಷ್ಮೀಪುರ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘ, ಅಭಿಮಾನಿಗಳಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಮನ್ಮುಲ್ ಚುನಾವಣೆಯಲ್ಲಿ ರೈತರು ನಮಗೆ ಆಶೀರ್ವಾದ ಮಾಡಿದ್ದಾರೆ. ಅನ್ನದಾತನಿಗೆ ಮೋಸ ಮಾಡಿದರೆ ಇಡೀ ಸಮಾಜಕ್ಕೆ ಮಾಡಿದ ದ್ರೋಹ. ಹೈನುಗಾರರ ಸಮಸ್ಯೆಗೆ ಸ್ಪಂದಿಸಲು ಮೊದಲ ಆದ್ಯತೆ ನೀಡಲಾಗುವುದು ಎಂದರು.

ಈ ವೇಳೆ ಮನ್ಮುಲ್ ನಿರ್ದೇಶಕ ಎಂ.ಡಿ.ಹರೀಶ್, ಮಾಜಿ ಅಧ್ಯಕ್ಷಚನ್ನಿಂಗೇಗೌಡ, ತಾಪಂ ಮಾಜಿ ಸದಸ್ಯ ಗೂಡೆಹೊಸಹಳ್ಳಿ ಜವರಾಯಿಗೌಡ, ಮುಖಂಡರಾದ ಹಾದನೂರು ಪರಮೇಶ್, ಅಂಬರೀಷ್, ರಕ್ಷಿತ್, ಸ್ವಾಮಿಗೌಡ, ಮನ್ಮುಲ್‌ ಉಪವ್ಯವಸ್ಥಾಪಕ ಪ್ರಸಾದ್, ಮಾರ್ಗ ವಿಸ್ತರಣಾಧಿಕಾರಿ ಗುರುರಾಜ್ ಸುರಗಿಹಳ್ಳಿ, ನಾಗಪ್ಪಅಲ್ಲಿಬಾವಿ, ಮಧು, ರಾಘವೇಂದ್ರ, ಭಾವನಾ, ಅಣ್ಣಪ್ಪ, ಕುಮಾರ್, ಹರೀಶ್‌ ಇದ್ದರು.

ಇಂದಿನಿಂದ ಮಡುವಿನಕೋಡಿ ಮಾರ್ಗದಲ್ಲಿ ವಿದ್ಯುತ್ ಸರಬರಾಜು

ಕೆ.ಆರ್ ಪೇಟೆ:

ತಾಲೂಕಿನ ಮಡುವಿನಕೋಡಿ ಗ್ರಾಮ ವ್ಯಾಪ್ತಿಯಲ್ಲಿ ನೂತನವಾಗಿ ಸ್ಥಾಪಿಸಲಾಗುತ್ತಿರುವ 1x8 ಎಂ.ವಿ.ಎ. 66/11 ಕೆ.ವಿ. ಉಪಕೇಂದ್ರಕ್ಕೆ ನೂತನವಾಗಿ ನಿರ್ಮಾಣಗೊಂಡಿರುವ 66 ಕೆವಿ ಲಿಲೋ ವಿದ್ಯುತ್ ಮಾರ್ಗದಲ್ಲಿ ಮಾರ್ಚ್ 7 ರಂದು ಅಥವಾ ಆನಂತರ ದಿನಗಳಲ್ಲಿ ವಿದ್ಯುತ್ ಹರಿಸಲಾಗುತ್ತದೆ.

ಈ 66 ಕೆ.ವಿ. ದ್ವಿಮುಕ ವಿದ್ಯುತ್ ಮಾರ್ಗವು ಕೆಳಕಂಡ ಗ್ರಾಮೀಣ ಪ್ರದೇಶಗಳಾದ ಹರಿಹರಪುರ, ಡೊಡ್ಡಯಾಚೇನಹಳ್ಳಿ, ಮಡುವಿಕೋಡಿ ಹಾಗೂ ಇತ್ಯಾದಿ ಗ್ರಾಮಗಳ ವ್ಯಾಪ್ತಿಯಲ್ಲಿ ಹಾದು ಹೋಗುತ್ತದೆ.

ಮಾ.7 ರಂದು ರಂದು ಅಥವಾ ಆನಂತರದ ದಿನಗಳಲ್ಲಿ ವಿದ್ಯುತ್ ಗೋಪುರಗಳ ಮೇಲೆ ವಿದ್ಯುತ್ ವಾಹಕವು ಚಾಲನೆಗೊಳ್ಳುವುದರಿಂದ ಸಾರ್ವಜನಿಕರು ಗೋಪುರಗಳಿಗೆ ದನಕರುಗಳನ್ನು ಕಟ್ಟುವುದಾಗಲಿ, ಲೋಹದ ಪಟ್ಟಿಯನ್ನು ತೆಗೆಯುವುದಾಗಲಿ, ಗೋಪುರಗಳನ್ನು ಹತ್ತುವುದಾಗಲಿ, ತಂತಿಗಳನ್ನು ಮುಟ್ಟುವುದಾಗಲಿ, ಗೋಪುರಗಳ ಕೆಳಗಡೆ ಮರಗಿಡಗಳನ್ನು ನೆಡುವುದಾಗಲಿ, ಗೋಪುರಗಳ ಬಳಿ ಹಗ್ಗ ಮುಂತಾದವುಗಳನ್ನು ಎಳೆಯುವುದಾಗಲಿ, ಗಾಳಿಪಟವನ್ನು ಗೋಪುರದ ಹತ್ತಿರ ಹಾರಿಸುವುದಾಗಲಿ ಮಾಡಿದರೆ ಅದು ತುಂಬಾ ಅಪಾಯಕಾರಿ ಹಾಗೂ ಪ್ರಾಣ ಹಾನಿ ಉಂಟಾಗುವ ಸಾಧ್ಯತೆ ಇರುತ್ತದೆ.

ಈ ಸೂಚನೆ ಉಲ್ಲಂಘಿಸಿ ಉಂಟಾಗುವ ಯಾವುದೇ ತರಹದ ಅಪಘಾತ ಅಥವಾ ಪ್ರಾಣ ಹಾನಿಗೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಜವಾಬ್ದಾರರಲ್ಲ ಎಂದು ಜಿಲ್ಲಾ ಯೋಜನೆಗಳು ವಿಭಾಗದ ಕಾರ್ಯನಿರ್ವಾಹ ಇಂಜಿನಿಯರ್ ತಿಳಿಸಿದ್ದಾರೆ.

Share this article