ಗ್ರಾಮಕ್ಕೆ ಮೈಕ್ರೋ ಪೈನಾನ್ಸ್‌ ಪ್ರವೇಶಕ್ಕೆ ನಿರ್ಬಂಧ : ರೈತ ಸಂಘದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ

KannadaprabhaNewsNetwork |  
Published : Feb 15, 2025, 12:34 AM ISTUpdated : Feb 15, 2025, 01:07 PM IST
೧೪ಕೆಎಲ್‌ಆರ್-೨ಮೈಕ್ರೋ ಪೈನಾನ್ಸ್ ಕಂಪನಿಗಳ ಊರೊಳಗೆ ಕಾಲಿಟ್ಟರೆ ನಿಮಗೆ ಉಳಿಗಾಲ ವಿಲ್ಲಎಂದು ಪ್ರತಿ ಹಳ್ಳಿಯಲ್ಲಿ ನಾಮಫಲಕಗಳನ್ನು ಬರಿಸಬೇಕೆಂದು ರೈತ ಸಂಘದಿಂದ ಎಡಿಸಿ ಮಂಗಳರಿಗೆ ಮನವಿಸಲ್ಲಿಸುತ್ತಿರುವುದು. | Kannada Prabha

ಸಾರಾಂಶ

ರೈತರ ಸಮಸ್ಯೆಗಳ ವಿರುದ್ಧ ಹೋರಾಡಿ ಪ್ರೊ.ನಂಜುಂಡಸ್ವಾಮಿ, ಸರ್ಕಾರಗಳಿಗೆ ಪ್ರತಿ ಸಭೆಗಳಲ್ಲೂ ಬಾರ್‌ಕೋಲ್ ನನ್ನ ರೂಲ್ ಆಫ್ ಲಾ ಎಂಬ ಎಚ್ಚರಿಕೆ ನೀಡುತ್ತಿದ್ದರು.  

 ಕೋಲಾರ : ಮೈಕ್ರೋ ಪೈನಾನ್ಸ್ ಕಂಪನಿಗಳ ಊರೊಳಗೆ ಕಾಲಿಟ್ಟರೆ ನಿಮಗೆ ಉಳಿಗಾಲ ವಿಲ್ಲಎಂದು ಪ್ರತಿ ಹಳ್ಳಿಯಲ್ಲಿ ನಾಮಫಲಕ ನೇತುಹಾಕುವಂತೆ ರೈತ ಸಂಘದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ ಹೇಳಿದರು. 

ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರೊ.ಎಂ.ಡಿ.ನಂಜುಂಡಸ್ವಾಮಿ ೮೯ನೆ ಜನ್ಮದಿನವನ್ನು ಮೈಕ್ರೋ ಪೈನಾನ್ಸ್ ಕಂಪನಿಗಳಿಗೆ ಎಚ್ಚರಿಕೆಯ ದಿನವಾಗಿ ಆಚರಿಸಿ ಮಾತನಾಡಿದರು.

ರೈತರ ಸಮಸ್ಯೆಗಳ ವಿರುದ್ಧ ಹೋರಾಡಿ ಪ್ರೊ.ನಂಜುಂಡಸ್ವಾಮಿ, ಸರ್ಕಾರಗಳಿಗೆ ಪ್ರತಿ ಸಭೆಗಳಲ್ಲೂ ಬಾರ್‌ಕೋಲ್ ನನ್ನ ರೂಲ್ ಆಫ್ ಲಾ ಎಂಬ ಎಚ್ಚರಿಕೆ ನೀಡುತ್ತಿದ್ದರು. ಪ್ರತಿ ಹಳ್ಳಿಯಲ್ಲೂ ರೈತ ಸಂಘವಿದೆ, ಮೈಕ್ರೋ ಫೈನಾನ್ಸ್‌ಗಳು ಎಚ್ಚರದಿಂದ ಇರಬೇಕು. ಸಾಲ ವಸೂಲಾತಿ ನೆಪದಲ್ಲಿ ರೈತ ಕೂಲಿ ಕಾರ್ಮಿಕರ ಅನ್ನ, ಆಹಾರ, ಉದ್ಯೋಗ, ಕಿತ್ತುಕೊಳ್ಳಲು ಬಂದರೆ ನಿಮಗೆ ಉಳಿಗಾಲ ವಿಲ್ಲ ಎಂಬ ಎಚ್ಚರಿಕೆಯನ್ನು ನೀಡಿದರು. ಬೆಳೆಗೆ ವೈಜ್ಞಾನಿಕ ದರ ನೀಡಿ

ರೈತರು ಬೆಳೆಯುವ ಬೆಳೆಗೆ ಸಬ್ಸಿಡಿ ಬೇಡ ವೈಜ್ಞಾನಿಕ ಬೆಲೆ ಬೇಕು ಬರ ಪರಿಹಾರ ಕೂಲಿ ನೀತಿ ನಿಗಧಿಯಾಗುವ ವರೆಗೂ ನಿಮ್ಮ ಸಾಲ ಕೃತಕಸಾಲ ನಮ್ಮ ಸ್ವಾಭಿಮಾನದ ಹರಾಜು ಮಾಡಲು ಮುಂದಾದರೆ ಅಥವಾ ಬಡವರ ಪ್ರಾಣಕ್ಕೆ ಕುತ್ತಾಗಿದೆ ಎಂದರು.ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕರಿ, ಮೈಕ್ರೋ ಪೈನಾನ್ಸ್ ಹಾವಳಿಯ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಸಭೆ ನಡೆಸಿ ಸಮಸ್ಯೆ ಬಗೆ ಹರಿಸುವ ಜೊತೆಗೆ ನಕಲಿ ಬಿತ್ತನೆ ಬೀಜ ಕೆ.ಸಿ.ವ್ಯಾಲಿ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೊಸ ವರ್ಷ: ದೇವಾಲಯಗಳಿಗೆ ಭಕ್ತರ ದಾಂಗುಡಿ
ಜಿ ರಾಮ್‌ ಜಿ, ಅನುದಾನ ಕಡಿತ ವಿರುದ್ಧ ಇಂದು ರಾಜ್ಯ ಸಂಪುಟದಲ್ಲಿ ನಿರ್ಣಯ?