ಸರ್ಕಾರ ಎಸ್ಕಾಂಗಳ ಕೆಪಿಟಿಡಿಎಲ್ ಪಿಂಚಣಿದಾರರ ಟ್ರಸ್ಟ್‌ಗೆ ನೀಡಬೇಕಾಗಿರುವ ಬಾಕಿ ಹಣವನ್ನು ಕೆಇಆರ್‌ಸಿ ಮೂಲಕ ಆದಷ್ಟು ಶೀಘ್ರ ಬಿಡುಗಡೆ ಮಾಡಬೇಕು.
ರಾಣಿಬೆನ್ನೂರು: ಹಿರಿಯ ಪಿಂಚಣಿದಾರರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವ ಮೂಲಕ ಕ್ರಿಯಾಶೀಲ ಜೀವನ ನಡೆಸಬೇಕು ಎಂದು ಬೆಂಗಳೂರಿನ ಕವಿಮಂ ಪಿಂಚಣಿದಾರರ ಸಂಘ ಕೇಂದ್ರ ಸಮಿತಿ ರಾಜ್ಯಾಧ್ಯಕ್ಷ ಬಿ.ಪಿ. ಕುಮಾರಸ್ವಾಮಿ ತಿಳಿಸಿದರು.ನಗರದ ಕೆಇಬಿ ವಿನಾಯಕ ದೇವಸ್ಥಾನ ಪಕ್ಕದ ಪ್ರಾರ್ಥನಾ ಮಂದಿರದಲ್ಲಿ ಗುರುವಾರ ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿ ಪಿಂಚಣಿದಾರರ ಸಂಘ ಪ್ರಾದೇಶಿಕ ಸಮಿತಿ ವತಿಯಿಂದ ಏರ್ಪಡಿಸಿದ್ದ ಕವಿಮಂ ಪಿಂಚಣಿದಾರರ 13ನೇ ವರ್ಷದ ಸರ್ವ ಸದಸ್ಯರ ಸಭೆ ಹಾಗೂ 80 ವರ್ಷ ಪೂರೈಸಿದ ಹಿರಿಯ ಪಿಂಚಣಿದಾರರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ಸರ್ಕಾರ ಎಸ್ಕಾಂಗಳ ಕೆಪಿಟಿಡಿಎಲ್ ಪಿಂಚಣಿದಾರರ ಟ್ರಸ್ಟ್‌ಗೆ ನೀಡಬೇಕಾಗಿರುವ ಬಾಕಿ ಹಣವನ್ನು ಕೆಇಆರ್‌ಸಿ ಮೂಲಕ ಆದಷ್ಟು ಶೀಘ್ರ ಬಿಡುಗಡೆ ಮಾಡಬೇಕು. ಪ್ರಸ್ತುತ ಹೆಸ್ಕಾಂ ಕಂಪನಿಯಿಂದ ಟ್ರಸ್ಟ್‌ಗೆ ₹80 ಕೋಟಿ ಜಮಾ ಆಗಬೇಕಾಗಿದೆ. ನಿವೃತ್ತ ನೌಕರರಿಗೆ ಆನ್‌ಲೈನ್ ಮೆಡಿಕಲ್ ಸೌಲಭ್ಯ ಕಲ್ಪಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದರು. ಹುಬ್ಬಳ್ಳಿ ಹೆಸ್ಕಾಂ ಕಾರ್ಪೋರೇಟ್ ಕಛೇರಿ ಅಧೀಕ್ಷಕ ಎಂಜಿನಿಯರ್ ಎನ್.ಸಿ. ಬೆಳಕೇರಿ, ಕವಿಮಂ ಪಿಂಚಣಿದಾರರ ಸಂಘ ಕೇಂದ್ರ ಸಮಿತಿ ಉಪಾಧ್ಯಕ್ಷ ಕೆ. ವೀರಭದ್ರಪ್ಪ, ಪ್ರಧಾನ ಕಾರ್ಯದರ್ಶಿ ಬೋರೇಗೌಡ, ಜಂಟಿ ಕಾರ್ಯದರ್ಶಿ ಎಸ್. ಶ್ಯಾಮರಾವ್, ಕವಿಮಂ ಪಿಂಚಣಿದಾರರ ಸಂಘ ಕೇಂದ್ರ ಕಾರ್ಯಕಾರಿ ಸದಸ್ಯ ಎಚ್.ಎಂ. ತಿಪ್ಪಯ್ಯ, ಹೆಸ್ಕಾ ವಿಭಾಗೀಯ ಕಚೇರಿ ಕಾನಿ ಎಂಜಿನಿಯರ್ ಪ್ರಭಾಕರ ಎಂ.ಎಸ್., ಲೆಕ್ಕಾಧಿಕಾರಿ ರಾಜು, ಕವಿಮಂ ನೌಕರರ ಸಂಘ ಕೇಂದ್ರ ಸಮಿತಿ ಮಾಜಿ ಕಾರ್ಯಾಧ್ಯಕ್ಷ ವಿಜಯಕುಮಾರ ಮುದಕಣ್ಣನವರ, ಜೆಸ್ಕಾಂ ನಿವೃತ್ತ ಲೆಕ್ಕಾಧಿಕಾರಿ ಆರ್.ಎಲ್. ತೆಂಬದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಕವಿಮಂ ಪಿಂಚಣಿದಾರರ ಪ್ರಾದೇಶಿಕ ಸಮಿತಿ ಅಧ್ಯಕ್ಷ ಪಿ.ಬಿ. ಮಣಕಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕವಿಮಂ ನೌಕರರ ಸಂಘದ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯ ಮಂಜುನಾಥ ಸಣ್ಣಿಂಗಮ್ಮನವರ, ಸ್ಥಳೀಯ ಸಮಿತಿ ಅಧ್ಯಕ್ಷ ಮಂಜುನಾಥ ಬಾರ್ಕಿ, ಕಾರ್ಯದರ್ಶಿ ಬೀರಪ್ಪ ತಿಪ್ಪಣ್ಣನವರ, ಎಸ್.ಬಿ. ಹೊಳಿಯಣ್ಣನವರ, ಮಂಜು ತಹಸೀಲ್ದಾರ, ಪಿ.ಎಸ್. ಸುಲಾಖೆ, ಎಂ.ಆರ್. ಮುರುಗೇಶ, ಎಲ್.ಆರ್. ಸಾಲಿ, ಎನ್.ಎ. ಗುರನ್ನಿ, ಜಿ. ಬಸವರಾಜು, ಗುತ್ತೇಪ್ಪ ಐರಣಿ ಮತ್ತಿತರರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.