ಕಾಲುದಾರಿ ಬಿಡಲು ಕಂದಾಯಾಧಿಕಾರಿಗಳ ಸೂಚನೆ

KannadaprabhaNewsNetwork |  
Published : Nov 21, 2026, 02:00 AM IST
19 ಟಿವಿಕೆ 3 – ತುರುವೇಕೆರೆ ತಾಲೂಕು ಮುದಿಗೆರೆಯಲ್ಲಿ ಜಮೀನುಗಳಿಗೆ ಓಡಾಡಲು ಇದ್ದ ನಕಾಶೆ ಕಾಲು ದಾರಿಯನ್ನು ಬಿಡಿಸಲು ಸ್ಥಳಕ್ಕೆ ಧಾವಿಸಿದ್ದ ಕಂದಾಯ ಇಲಾಖಾ ಅಧಿಕಾರಿಗಳು. | Kannada Prabha

ಸಾರಾಂಶ

ಜಮೀನಿಗೆ ಬೇಲಿ ಹಾಕಿರುವ ಮಾಲೀಕರಿಗೆ ಕೂಡಲೇ ಬೇಲಿಯನ್ನು ತೆರವುಗೊಳಿಸಿ ಸಾರ್ವಜನಿಕರಿಗೆ ಇರುವ ನಕಾಶೆ ಕಾಲು ದಾರಿಯನ್ನು ತೆರವು ಮಾಡಿಕೊಡಬೇಕೆಂದು ಸೂಚಿಸಿ ನೋಟೀಸ್ ನೀಡಲೂ ತೀರ್ಮಾನಕ್ಕೆ ಬರಲಾಯಿತು.

ಕನ್ನಡಪ್ರಭ ವಾರ್ತೆ ತುರುವೇಕೆರೆ

ತಾಲೂಕಿನ ದಬ್ಬೇಘಟ್ಟ ಹೋಬಳಿ ಮುದಿಗೆರೆ ಗ್ರಾಮ ವ್ಯಾಪ್ತಿಗೆ ಒಳಪಡುವ ಸರ್ವೇ ನಂಬರ್ 135, 120, 115 ಮತ್ತು 37 ರಲ್ಲಿ ಹಲವಾರು ವರ್ಷಗಳಿಂದ ನೂರಾರು ಮಂದಿಯ ತೋಟ, ಜಮೀನುಗಳಿಗೆ ತೆರಳಲು ಅಧಿಕೃತವಾದ ನಕಾಶೆ ಕಾಲುದಾರಿ ಇತ್ತು. ಈ ಮಾರ್ಗದ ಮೂಲಕವೇ ಪ್ರತಿ ದಿನ ರೈತಾಪಿಗಳು ಅಲ್ಲದೇ ಸಾರ್ವಜನಿಕರು ಈ ಮಾರ್ಗದಲ್ಲಿ ತೆರಳುತ್ತಿದ್ದರು. ಆದರೆ ಇತೀಚೆಗೆ ಕೆಲವು ಮಂದಿ ಈ ನಕಾಶೆ ಕಾಲು ದಾರಿಗೆ ಅಡ್ಡವಾಗಿ ತಂತಿ ಬೇಲಿ ನಿರ್ಮಿಸಿ ಸಾರ್ವಜನಿಕರಿಗೆ ತೊಂದರೆಯುಂಟು ಮಾಡಿದ್ದರು.

ಈ ಸಮಸ್ಯೆಯನ್ನು ಪರಿಹರಿಸಿಕೊಡಬೇಕೆಂದು ತಾಲೂಕು ಕಚೇರಿಗೆ ಮನವಿ ಮಾಡಲಾಗಿತ್ತು. ಪ್ರಕರಣ ಗಂಭೀರವಾಗಿರುವುದನ್ನು ಗಮನಿಸಿ ಗುರುವಾರ ದಬ್ಬೇಘಟ್ಟ ಕಂದಾಯ ತನಿಖಾಧಿಕಾರಿ ಜಗದೀಶ್, ತಾಲೂಕು ಸರ್ವೇಯರ್ ರಂಗಪ್ಪ, ಗ್ರಾಮ ಆಡಳಿತಾಧಿಕಾರಿ ಭೂತೇಶ್ ಸ್ಥಳಕ್ಕೆ ಆಗಮಿಸಿ ವಾಸ್ತವತೆಯನ್ನು ಅರಿತರು. ಗ್ರಾಮಸ್ಥರು ನೀಡಿರುವ ದೂರಿನಲ್ಲಿರುವ ಸಂಗತಿ ಸತ್ಯಾಂಶದಿಂದ ಕೂಡಿದೆ. ಜಮೀನುಗಳಿಗೆ ತೆರಳಲು ಇರುವ ಭೂಮಿಯಲ್ಲಿ ಅಕ್ರಮವಾಗಿ ಬೇಲಿ ಹಾಕಿರುವುದು ಕಂಡುಬಂದಿತು. ಈ ನಕಾಶೆ ಕಾಲು ದಾರಿಯ ಅಕ್ಕಪಕ್ಕದ ಜಮೀನಿನ ಮಾಲೀಕರಿಗೆ ನೋಟೀಸ್ ಜಾರಿ ಮಾಡಿ ಜಾಗ ತೆರವುಗೊಳಿಸಬೇಕೆಂದು ಸೂಚಿಸಲು ನಿರ್ಧರಿಸಲಾಯಿತು. ಅಲ್ಲದೇ ದಾರಿಯನ್ನೂ ಸೇರಿಸಿ ಜಮೀನಿಗೆ ಬೇಲಿ ಹಾಕಿರುವ ಮಾಲೀಕರಿಗೆ ಕೂಡಲೇ ಬೇಲಿಯನ್ನು ತೆರವುಗೊಳಿಸಿ ಸಾರ್ವಜನಿಕರಿಗೆ ಇರುವ ನಕಾಶೆ ಕಾಲು ದಾರಿಯನ್ನು ತೆರವು ಮಾಡಿಕೊಡಬೇಕೆಂದು ಸೂಚಿಸಿ ನೋಟೀಸ್ ನೀಡಲೂ ತೀರ್ಮಾನಕ್ಕೆ ಬರಲಾಯಿತು. ಇದಕ್ಕೂ ಭೂಮಿಯ ಮಾಲೀಕರು ಸ್ಪಂದಿಸದಿದ್ದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಂಡು ರಸ್ತೆಯನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಕಂದಾಯ ತನಿಖಾಧಿಕಾರಿ ಜಗದೀಶ್ ಗ್ರಾಮಸ್ಥರಿಗೆ ತಿಳಿಸಿದ್ದಾರೆ. ಈ ವೇಳೆ ಗ್ರಾಮಸ್ಥರಾದ ಮಹದೇವಯ್ಯ, ಪ್ರಕಾಶ್, ಹುಚ್ಚಣ್ಣ, ಮಂಜುನಾಥ್, ದೇವರಾಜು, ಭದ್ರೇಗೌಡ, ಎಂ.ಜಿ.ಕುಮಾರ್, ದಲಿತ ಮುಖಂಡ ಬಿಗನೇನಹಳ್ಳಿ ಪುಟ್ಟಣ್ಣ ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯ ಹೆದ್ದಾರಿ ದುರಸ್ತಿಗಾಗಿ ರಸ್ತೆತಡೆ
ಅನುದಾನಿತ ಶಾಲಾ ನೌಕರರಿಗೂ ಹಳೆ ಪಿಂಚಣಿ ಯೋಜನೆ ಜಾರಿಗೊಳಿಸಲು ಆಗ್ರಹ