ಕನ್ನಡಪ್ರಭ ವಾರ್ತೆ ಸಾಗರ
ಅಧ್ಯಕ್ಷತೆ ವಹಿಸಿದ್ದ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎಂ.ಟಿ.ಗುಂಡಪ್ಪ ಗೌಡ ಮಾತನಾಡಿ, ನಮ್ಮ ಸಮಾಜದ ಮಕ್ಕಳು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮುನ್ನುಗ್ಗಲು ಇಂಥ ಕಾರ್ಯಕ್ರಮ ಆಯೋಜನೆ ಅಗತ್ಯ. ಅದಕ್ಕಾಗಿ ಸಮಾಜದ ಎಲ್ಲ ಬಾಂಧವರೂ ಒಟ್ಟಾಗಿ ನಿಂತು ಸಮಾರಂಭದ ಯಶಸ್ಸಿಗೆ ಶ್ರಮಿಸಬೇಕು. ಸಂಖ್ಯೆಯಲ್ಲಿ ಅಲ್ಪವಿದ್ದರೂ, ಸಂಘಟನೆಯಲ್ಲಿ ಹಿಂದೆ ಬೀಳುವಂತಾಗಬಾರದು. ಅದಕ್ಕಾಗಿ ಸಂಘಟನೆಯ ಜೊತೆಯಲ್ಲಿ ಎಲ್ಲರೂ ಗುರುತಿಸಿಕೊಳ್ಳುವಂತಾಗಬೇಕು ಎಂದು ಹೇಳಿದರು.
ಶ್ರೀ ಕೆಂಪೇಗೌಡ ಯುವ ವೇದಿಕೆ ವತಿಯಿಂದ ನಾಟಿ ವೈದ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕೊಲ್ಕರ್ ಕನ್ನ ಗೌಡ, ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕೃಷ್ಣಮೂರ್ತಿ ಬೇಳೂರು, ಯಕ್ಷಗಾನ ಭಾಗವತ ಮಂಜಪ್ಪ ಗೌಡ ಚಳ್ಮನೆ ಹಾಗೂ ನಿವೃತ್ತ ಸೈನಿಕ ದಿವಾಕರ್ ಜಿಗಳಮನೆ ಅವರಿಗೆ ೨೦೨೪ನೇ ಸಾಲಿನ ಶ್ರೀ ಕೆಂಪೇಗೌಡ ಸಾಧಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಂಘದ ಉಪಾಧ್ಯಕ್ಷ ಮಂಜುನಾಥಗೌಡ, ಪ್ರಧಾನ ಕಾರ್ಯದರ್ಶಿ ಟಿ.ಬಸವರಾಜ, ಕೆಂಪೇಗೌಡ ಯುವ ವೇದಿಕೆಯ ಅಧ್ಯಕ್ಷ ನವೀನ್ ಕುಮಾರ್ ಕೊಪ್ಪಲಗದ್ದೆ, ಚುಂಚಾದ್ರಿ ಮಹಿಳಾ ವೇದಿಕೆಯ ಉಪಾಧ್ಯಕ್ಷೆ ಉಮಾ ಬಸವರಾಜ್ ಹಾಗೂ ಉಪನ್ಯಾಸಕರಾದ ಚಿದಾನಂದ ಪಟಗಾರ, ಸಂಘದ ಪದಾಧಿಕಾರುಗಳು, ಸಮಾಜದ ಪ್ರಮುಖರು ಉಪಸ್ಥಿತರಿದ್ದರು. ಕೃಷ್ಣಮೂರ್ತಿ ಉಳ್ಳೂರು ಸ್ವಾಗತಿಸಿದರು, ಬಸವರಾಜ್ ನಿರೂಪಿಸಿದರು. ಮೋಹನ್ ಅಡ್ಡೇರಿ ವಂದಿಸಿದರು.