ಪೌತಿ ಖಾತೆಗೆ ಲಂಚ ಸ್ವೀಕರಿಸುತ್ತಿದ್ದಾಗ ಆರ್‌ಐ ನಾಗೇಶ್ ಲೋಕಾ ಬಲೆಗೆ

KannadaprabhaNewsNetwork |  
Published : Sep 25, 2026, 01:15 AM IST
ಫೋಟೋವಿವರ- (24ಎಚ್‌ಪಿಟಿ2)ಹೊಸಪೇಟೆ ನಗರದ ಅಕ್ಕ ಮಹಾದೇವಿ ಸಭಾಂಗಣದಲ್ಲಿ ಗುರುವಾರ ಸಂಜೆ ನಡೆದ ಎಸ್.ಐ.ಆರ್. ಪ್ರಕ್ರಿಯೆ ವಿರೋಧಿಸಿ ನಡೆಸಿದ ಸಭೆಯಲ್ಲಿ ನಟ ಪ್ರಕಾಶ್‌ ರಾಜ್‌ ಮಾತನಾಡಿದರು | Kannada Prabha

ಸಾರಾಂಶ

ತುಮಕೂರು ಲೋಕಾಯುಕ್ತ ಎಸ್.ಪಿ. ಮಲ್ಲೇಶ್ ನೇತೃತ್ವದ ತಂಡ ಖಚಿತ ಮಾಹಿತಿ ಮೇರೆಗೆ ಮಧುಗಿರಿ ತಾಲೂಕು ಆಡಳಿತ ಕಚೇರಿಯಲ್ಲಿ ದಾಳಿ ನಡೆಸಿ ಲಂಚ ಪಡೆಯುತ್ತಿದ್ದ ವೇಳೆ ವಶಕ್ಕೆ ಪಡೆದು ವಿಚಾರಣೆ ನಡೆಸಿತು.

₹1 ಲಕ್ಷ ಲಂಚದ ಬೇಡಿಕೆ ಇಟ್ಟಿದ್ದ ಮಧುಗಿರಿ ಕಸಬಾ ವ್ಯಾಪ್ತಿ ಕಂದಾಯ ನಿರೀಕ್ಷಕ

₹30 ಸಾವಿರ ನಗದು ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಎಸ್ಪಿ ಮಲ್ಲೇಶ್ ತಂಡ ದಾಳಿ

ಕನ್ನಡಪ್ರಭವಾರ್ತೆ, ಮಧುಗಿರಿ

ಜಮೀನು ವೊಂದರ ಪೌತಿ ಖಾತೆ ಮಾಡಿ ಕೊಡಲು ₹1 ಲಕ್ಷ ರು.ಗೆ ಲಂಚದ ಬೇಡಿಕೆ ಇಟ್ಟು, ಅದರಲ್ಲಿ ₹30 ಸಾವಿರ ನಗದು ಪಡೆಯುತ್ತಿದ್ದ ವೇಳೆ ಗುರುವಾರ ಮಧುಗಿರಿ ಕಸಬಾ ವ್ಯಾಪ್ತಿ ಕಂದಾಯ ನಿರೀಕ್ಷಕ ನಾಗೇಶ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ತುಮಕೂರು ಲೋಕಾಯುಕ್ತ ಎಸ್.ಪಿ. ಮಲ್ಲೇಶ್ ನೇತೃತ್ವದ ತಂಡ ಖಚಿತ ಮಾಹಿತಿ ಮೇರೆಗೆ ಮಧುಗಿರಿ ತಾಲೂಕು ಆಡಳಿತ ಕಚೇರಿಯಲ್ಲಿ ದಾಳಿ ನಡೆಸಿ ಲಂಚ ಪಡೆಯುತ್ತಿದ್ದ ವೇಳೆ ವಶಕ್ಕೆ ಪಡೆದು ವಿಚಾರಣೆ ನಡೆಸಿತು.

ಮುದ್ದೇನಹಳ್ಳಿ ಗ್ರಾಮದ ನಿವಾಸಿ ರೇಣುಕೇಶ್ ಅವರ ತಾಯಿ ರತ್ನಮ್ಮ ಹಾಗೂ ದೊಡ್ಡಮ್ಮ ಆದ ಗಂಗಮ್ಮ ಅವರ ಹೆಸರಿಗೆ ಪೌತಿ ಖಾತೆ ಮಾಡಿ ಕೊಡಲು ಅರ್ಜಿ ಸಲ್ಲಿಸಿದ್ದರು. ಈ ವಿಚಾರವಾಗಿ ರವಿನ್ಯೂ ಇನ್‌ಸ್ಪೆಕ್ಟರ್‌ ನಾಗೇಶ್ ಕಳೆದ ಆರು ತಿಂಗಳಿನಿಂದ ಪೌತಿ ಖಾತೆ ಮಾಡಿಕೊಡದೇ ವಿಳಂಬ ಮಾಡುತ್ತಿದ್ದರು. ಈ ಪೌತಿ ಖಾತೆ ಮಾಡಿ ಕೊಡಲು ₹1 ಲಕ್ಷ ರು. ಲಂಚದ ಬೇಡಿಕೆ ಕೂಡ ಇಟ್ಟಿದ್ದರು ಎನ್ನಲಾಗಿದೆ. ಈ‌ ಪೈಕಿ ₹45 ಸಾವಿರ ರು. ಕಂದಾಯ ನಿರೀಕ್ಷಕ ನಾಗೇಶ್ ಅವರ ಪತ್ನಿ ಬ್ಯಾಂಕಿನ ಅಕೌಂಟ್‌ಗೆ ಮೊದಲೇ ಜಮಾ ಮಾಡಲಾಗಿತ್ತು ಎಂದು ತಿಳಿದು ಬಂದಿದೆ. ಎರಡನೇ ಕಂತಿನ ₹ 30 ಸಾವಿರ ರು. ನೀಡುವ ಸಂದರ್ಭದಲ್ಲಿ ಲೋಕಾಯುಕ್ತ ಪೋಲಿಸರು ಕಾರ್ಯಾಚರಣೆ ನಡೆಸಿ

ಆರ್‌ಐ ನಾಗೇಶರನ್ನು ವಶಕ್ಕೆ ಪಡೆದಿದೆ.

ಸ್ಥಳದಲ್ಲಿದ್ದ ಸಾರ್ವಜನಿಕರು ತಾಲೂಕು ಕಚೇರಿಯಲ್ಲಿ ಲಂಚಾವತಾರ ತಾರಕಕ್ಕೇರಿದ್ದು ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಇಲ್ಲಿ ಹೇಳೋರು ಕೇಳೋರು ಯಾರು ಇಲ್ಲದಂತಾಗಿದೆ ಎಂದು ಅಧಿಕಾರಿಗಳ ಕಾರ್ಯ ವೈಖರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರಿ ಕಚೇರಿಗಳಲ್ಲಿ ಲಂಚ ನೀಡದೆ ಯಾವುದೇ ಕೆಲಸ ಕಾರ್ಯಗಳು ನಡೆಯುವುದಿಲ್ಲ ಎಂದು ಆರೋಪಿಸಿದರು.

ಲೋಕಾಯುಕ್ತ ಪೊಲೀಸ್ ಕಾರ್ಯಾಚರಣೆಯಲ್ಲಿ ನಿರೀಕ್ಷಕರಾದ , ರಾಜು ಹಾಗೂ ಸಿಬ್ಬಂದಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಸರವಳ್ಳಿ ರಸ್ತೆಯಲ್ಲಿ ಕಾಡಾನೆ ಪ್ರತ್ಯಕ್ಷ
ಚಿಂಚೋಳಿ ಪಟ್ಟಣದಲ್ಲಿ ರಸ್ತೆ ದುರಸ್ತಿ ಮರೀಚಿಕೆ