ಗಲಭೆ: ರಾಗಿಗುಡ್ಡದಲ್ಲಿ ಮುಂದುವರಿದ ನಿಷೇಧಾಜ್ಞೆ

KannadaprabhaNewsNetwork |  
Published : Oct 07, 2023, 02:18 AM IST

ಸಾರಾಂಶ

- ಸೆಕ್ಷನ್‌ನಿಂದಾಗಿ ಮಸೀದಿಯಲ್ಲಿ ನಡೆಯದ ಸಾಮೂಹಿಕ ಪ್ರಾರ್ಥನೆ

- ಪೂರ್ಣ ಮಟ್ಟದಲ್ಲಿ ತೆರೆಯದ ಅಂಗಡಿಗಳು, ವ್ಯಾಪಾರ ಮಳಿಗೆಗಳು - ಸೆಕ್ಷನ್‌ನಿಂದಾಗಿ ಮಸೀದಿಯಲ್ಲಿ ನಡೆಯದ ಸಾಮೂಹಿಕ ಪ್ರಾರ್ಥನೆ - - - ಶಿವಮೊಗ್ಗ: ಗಲಭೆಗೆ ಒಳಗಾಗಿದ್ದ ರಾಗಿಗುಡ್ಡದಲ್ಲಿ ನಿಷೇಧಾಜ್ಞೆ ಮುಂದುವರಿದಿದ್ದು, ಶುಕ್ರವಾರವೂ ಅಂಗಡಿ- ಮುಂಗಟ್ಟುಗಳು ಪೂರ್ಣ ಪ್ರಮಾಣದಲ್ಲಿ ತೆರೆಯಲಿಲ್ಲ. ಬೆಳಗ್ಗೆ 7 ಗಂಟೆಯಿಂದ 9 ಗಂಟೆಯವರೆಗೆ ಅಗತ್ಯ ವಸ್ತುಗಳ ಮಾರಾಟಕ್ಕಾಗಿ ಅಂಗಡಿಗಳು ತೆರೆದವು. ಆ ಬಳಿಕ ಬೆರಳೆಣಿಕೆಯಷ್ಟು ಅಂಗಡಿಗಳು ಅರ್ಧ ಬಾಗಿಲು ತೆರೆದಿದ್ದಂತೆ ಕಂಡುಬಂದಿತು. ಶುಕ್ರವಾರದ ಹಿನ್ನೆಲೆಯಲ್ಲಿ ಹಚ್ಚುವರಿ ಪೊಲೀಸ್ ಬಂದೋಬಸ್ತ್ ಹಾಕಲಾಗಿತ್ತು. 144ನೇ ಸೆಕ್ಷನ್ ಜಾರಿಯಿದ್ದ ಹಿನ್ನೆಲೆ ಪ್ರತಿ ಶುಕ್ರವಾರದಂತೆ ಸಾಮೂಹಿಕ ಪ್ರಾಥನೆಗೆ ಅವಕಾಶ ನೀಡಲಿಲ್ಲ. ಮುಸ್ಲಿಂರು ಮನೆಲ್ಲಿಯೇ ಪ್ರಾರ್ಥನೆ ಮಾಡುವಂತೆ ಸೂಚನೆ ನೀಡಲಾಗಿತ್ತು. ಆದ್ದರಿಂದ ಮಸೀದಿಯತ್ತ ಜನರು ಮುಖ ಮಾಡಲಿಲ್ಲ. ಮಧ್ಯಾಹ್ನ 12.30ಕ್ಕೆ ಆಜಾನ್ ಕೂಗುತ್ತಿದ್ದಂತೆ ಮಸೀದಿಯತ್ತ ಬರುತ್ತಿದ್ದ ಮುಸ್ಲಿಮರು ಕಾಣಲಿಲ್ಲ. ಬದಲಾಗಿ ಮನೆಯಲ್ಲಿಯೇ ಪ್ರಾರ್ಥಿಸಿದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ